ETV Bharat / bharat

ಮುಖ್ಯಮಂತ್ರಿ, ಪ್ರಧಾನಿಯಾಗಿ ರಾಜ್ಯಭಾರ: ದೇಶದಲ್ಲಿ 2 ದಶಕ ಪೂರೈಸಿದ ನರೇಂದ್ರ ಮೋದಿ ಆಡಳಿತ - Modi as Prime Minister of India

13 ವರ್ಷಗಳ ಕಾಲ ಗುಜರಾತ್​ ಮುಖ್ಯಮಂತ್ರಿಯಾಗಿ ಹಾಗೂ 7 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಸಾಂವಿಧಾನಿಕ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಇಂದಿಗೆ ಎರಡು ದಶಕಗಳು ತುಂಬಿವೆ.

ಮೋದಿ ಯುಗಕ್ಕೆ 20 ವರ್ಷ
ಮೋದಿ ಯುಗಕ್ಕೆ 20 ವರ್ಷ
author img

By

Published : Oct 7, 2021, 8:06 AM IST

ನವದೆಹಲಿ: ಗುಜರಾತ್​ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಇಂದಿಗೆ 20 ವರ್ಷಗಳ ನಿರಂತರ ಸಾರ್ವಜನಿಕ ಸೇವೆಯನ್ನು ಪೂರ್ಣಗೊಳಿಸಿದ್ದಾರೆ.

ಬಿಜೆಪಿ ಮುಖಂಡರಾಗಿ ಜನಪ್ರಿಯತೆಗಳಿಸಿದ್ದ ಮೋದಿ, 2001ರ ಅಕ್ಟೋಬರ್​​ 7 ರಂದು ಗುಜರಾತ್​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಲ್ಲಿಂದ 2014ರ ಮೇ 22 ರವರೆಗೆ 13 ವರ್ಷಗಳ ಕಾಲ ಸುದೀರ್ಘವಾಗಿ ಗುಜರಾತ್​ ರಾಜ್ಯವನ್ನು ಆಳಿದ್ದ ಮೋದಿ ಬಳಿಕ ಎಂಟ್ರಿ ಕೊಟ್ಟಿದ್ದು, ದೇಶದ ಪ್ರಧಾನಿಯಾಗಿ.

ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಅಖಾಡಕ್ಕಿಳಿದು 2014ರ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಮೋದಿ, ಭಾರತದ 14ನೇ ಪ್ರಧಾನಿಯಾಗಿ ಆಯ್ಕೆಯಾದರು. ಅಂದಿನಿಂದ ಇಂದಿನವರೆಗೆ ಅಂದರೆ ಕಳೆದ 7 ವರ್ಷಗಳಿಂದ ದೇಶದ ಚುಕ್ಕಾಣಿ ಹಿಡಿದಿದ್ದಾರೆ.

ಕಮಲ ಪತಾಕೆ

ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ಮನಮೋಹನ್​ ಸಿಂಗ್​ ಬಳಿಕ ​ಅತಿ ಹೆಚ್ಚು ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ನರೇಂದ್ರ ಮೋದಿ ಅವರದ್ದು. ಇವರು ಪಿಎಂ ಆದ ಬಳಿಕ ಕೇವಲ ಇವರ ಕೀರ್ತಿ ಮಾತ್ರ ಹೆಚ್ಚಲಿಲ್ಲ, ಭಾರತೀಯ ಜನತಾ ಪಕ್ಷದ ಖ್ಯಾತಿಯೂ ಉತ್ತುಂಗಕ್ಕೇರಿತು. ಕಾಂಗ್ರೆಸ್​ ಸೇರಿದಂತೆ ಇತರ ಪ್ರಾದೇಶಿಕ ಪಕ್ಷಗಳ ಭದ್ರಕೋಟೆಗಳನ್ನು ಭೇದಿಸಿ ಕಮಲ ತನ್ನ ಪತಾಕೆ ಹಾರಿಸಿತು. ಇದರ ಪರಿಣಾಮ ಇಂದು ಕರ್ನಾಟಕ, ಗುಜರಾತ್​, ಉತ್ತರ ಪ್ರದೇಶ, ಗೋವಾ, ತ್ರಿಪುರ ಸೇರಿದಂತೆ ದೇಶದ 18 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ.

ಸೋಷಿಯಲ್​ ಮೀಡಿಯಾದಲ್ಲೂ ಹವಾ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗಿರುವ ಅನುಯಾಯಿಗಳೇನು ಕಡಿಮೆ ಇಲ್ಲ. ಟ್ವಿಟರ್​ನಲ್ಲಿ ಬರೋಬ್ಬರಿ 71.7 ಮಿಲಿಯನ್​, ಇನ್ಸ್‌ಟಾಗ್ರಾಮ್​ನಲ್ಲಿ 6 ಮಿಲಿಯನ್​ ಹಾಗೂ ಫೇಸ್​ಬುಕ್​ನಲ್ಲಿ 46 ಮಿಲಿಯನ್​ ಫಾಲೋವರ್ಸ್ ಅನ್ನು ಮೋದಿ ಹೊಂದಿದ್ದಾರೆ. ಪಿಎಂಒ ಇಂಡಿಯಾ (PMO India) ಟ್ವಿಟರ್ ಖಾತೆಯನ್ನೇ 44.2 ಮಿಲಿಯನ್​ ಜನರು ಫಾಲೋ ಮಾಡುತ್ತಿದ್ದಾರೆ.

ಇಂದಿನ ಬಿಜೆಪಿ ಕಾರ್ಯಕ್ರಮಗಳು

ನರೇಂದ್ರ ಮೋದಿಯವರು 20 ವರ್ಷಗಳ ಸಾಂವಿಧಾನಿಕ ಹುದ್ದೆ ಪೂರೈಸಿರುವ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ-ಸೇವೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ, ಮೋದಿಯವರ 'ಸ್ವಚ್ಛ ಭಾರತ ಅಭಿಯಾನ'ದಡಿ ನದಿಗಳನ್ನು ಸ್ವಚ್ಛಗೊಳಿಸುವ, ದೇಶದಾದ್ಯಂತ ಗುರುದ್ವಾರಗಳಲ್ಲಿ ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ 'ಅರ್ದಾಸ್' ಪ್ರಾರ್ಥನೆ ಸಲ್ಲಿಸುವ, 'ಸೇವಾ ಸಮರ್ಪಣ' ಅಭಿಯಾನದ ಭಾಗವಾಗಿ 'ಲಂಗರ್'​ (ಅನ್ನದಾನ) ಮಾಡುವ ಕಾರ್ಯಕ್ರಮಗಳನ್ನು ಬಿಜೆಪಿ ಇಂದು ನಡೆಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.