ETV Bharat / bharat

ನಾರ್ಕೋ ಭಯೋತ್ಪಾದನೆ: ಎಲ್​ಟಿಟಿಇ ಮಾಜಿ ಸದಸ್ಯರಿಗೆ ಪಾಕ್​ ಡ್ರಗ್​ ಪೆಡ್ಲರ್​ ನಂಟು, ಸಂಘಟನೆ ಸಕ್ರಿಯಕ್ಕೆ ಹಣ ಸಂಗ್ರಹಣೆ? - ರಾಷ್ಟ್ರೀಯ ತನಿಖಾ ದಳ

ನಿಷ್ಕ್ರಿಯವಾಗಿರುವ ಎಲ್‌ಟಿಟಿಇ ಮಾಜಿ ಕಾರ್ಯಕರ್ತರ ವಿರುದ್ಧ ಎಎನ್​ಐ ಮಾದಕವಸ್ತುಗಳ ಕಳ್ಳಸಾಗಣೆ, ಶಸ್ತ್ರಾಸ್ತ್ರಗಳ ಸಾಗಣೆ, ಅಕ್ರಮ ಹಣ ಸಂಗ್ರಹಿಸಲು ಹವಾಲಾ ವಹಿವಾಟುಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಪ್ರಕರಣಗಳನ್ನು ದಾಖಲಿಸಿದೆ. ಇದು ಎಲ್​ಟಿಟಿಇಯನ್ನು ಪುನರ್​ ರಚಿಸಲು ನಡೆಸುತ್ತಿರುವ ಯತ್ನ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಎಲ್​ಟಿಟಿಇ ಮಾಜಿ ಸದಸ್ಯರಿಗೆ ಪಾಕ್​ ಡ್ರಗ್​ ಪೆಡ್ಲರ್​ ನಂಟು

author img

By

Published : Aug 6, 2023, 11:06 AM IST

ಚೆನ್ನೈ(ತಮಿಳುನಾಡು) : ಭಾರತದ ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರನ್ನು ಹತ್ಯೆ ಮಾಡಿದ್ದ ಎಲ್​ಟಿಟಿಇ ಸಂಘಟನೆ ಡ್ರಗ್ಸ್​ ದಂಧೆಗೆ ಇಳಿದಿದ್ದು, ಇದಕ್ಕೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವುದನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ತನಿಖೆಯಲ್ಲಿ ಪತ್ತೆ ಮಾಡಿದೆ. ಈ ಮೂಲಕ ಎಲ್​ಟಿಟಿಇ ಸಂಘಟನೆ ಮತ್ತೆ ಕಾರ್ಯರೂಪಕ್ಕೆ ಬರಲು ಸಜ್ಜಾಗಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ.

ಕೆಲ ದಿನಗಳ ಹಿಂದೆ ತಮಿಳುನಾಡಿನ ನಾಗಪಟ್ಟಣಂ ಪೊಲೀಸರು ಶ್ರೀಲಂಕಾಕ್ಕೆ ತೆರಳಬೇಕಿದ್ದ ದೋಣಿಯಲ್ಲಿ 300 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದರು. ಪ್ರಕರಣದಲ್ಲಿ 6 ಮಂದಿಯನ್ನು ಬಂಧಿಸಲಾಗಿತ್ತು. ಇದರ ಹಿಂದೆ ಎಲ್​ಟಿಟಿಇ ಸಂಘಟನೆಯ ಮಾಜಿ ಸದಸ್ಯರ ಕೈವಾಡ ಇರುವುದು ಗೊತ್ತಾಗಿತ್ತು. ವಿಶೇಷವಾಗಿ ಡ್ರಗ್ಸ್​ ಅನ್ನು ಪಾಕಿಸ್ತಾನದ ಕುಖ್ಯಾತ ಡ್ರಗ್​ ಪೆಡ್ಲರ್​ ಹಾಜಿ ಅಲಿಯಿಂದ ಪಡೆದುಕೊಂಡ ಅಫೀಮು ಇದಾಗಿತ್ತು.

ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಮಾಜಿ ಕಾರ್ಯಕರ್ತರ ವಿರುದ್ಧ ಎಎನ್​ಐ ಮಾದಕವಸ್ತುಗಳ ಕಳ್ಳಸಾಗಣೆ, ಶಸ್ತ್ರಾಸ್ತ್ರಗಳ ಸಾಗಣೆ, ಎಲ್‌ಟಿಟಿಇ ಮರು ಸ್ಥಾಪನೆಗಾಗಿ ಅಕ್ರಮವಾಗಿ ಹಣ ಸಂಗ್ರಹಿಸಲು ಹವಾಲಾ ವಹಿವಾಟುಗಳಲ್ಲಿ ತೊಡಗಿಸಿಕೊಂಡಿರುವ ಅನೇಕ ಪ್ರಕರಣಗಳನ್ನು ದಾಖಲಿಸಿದೆ. ಉಗ್ರ ಸಂಘಟನೆಯನ್ನು ಪುನರ್​ರಚಿಸಲು ಹಣ ಸಂಗ್ರಹಣೆಗಾಗಿ 'ನಾರ್ಕೋ ಭಯೋತ್ಪಾದನೆ' ನಡೆಸುತ್ತಿರುವ ವಾಸನೆಯನ್ನು ತನಿಖಾ ಸಂಸ್ಥೆ ಗ್ರಹಿಸಿದೆ.

ದಾಳಿಯ ವೇಳೆ ವಶಕ್ಕೆ ಸಿಕ್ಕ ಗಾಂಜಾ ಆಂಧ್ರಪ್ರದೇಶ ಮತ್ತು ಒಡಿಶಾ ಗಡಿಯಿಂದ ಶ್ರೀಲಂಕಾಕ್ಕೆ ರವಾನೆ ಮಾಡಬೇಕಿತ್ತು ಎಂದು ಗಾಂಜಾವನ್ನು ಸಾಗಿಸುತ್ತಿದ್ದ ಬಂಧಿತ ಪೆಡ್ಲರ್‌ಗಳು ತಿಳಿಸಿದ್ದಾರೆ. ಶ್ರೀಲಂಕಾಕ್ಕೆ ಗಾಂಜಾ ಕಳ್ಳಸಾಗಣೆಯ ಹಿಂದೆ ಕೆಲವು ತಮಿಳು ರಾಷ್ಟ್ರೀಯವಾದಿ ಗುಂಪುಗಳ ಕೈವಾಡವಿದೆ ಎಂದು ತಮಿಳುನಾಡು ಗುಪ್ತಚರ ಸಂಸ್ಥೆಯ ಮೂಲಗಳು ಎನ್​ಐಎಗೆ ತಿಳಿಸಿವೆ.

ಹಣ ಸಂಗ್ರಹಣೆಗಾಗಿ ಗಾಂಜಾ ದಂಧೆ: ನಿಷ್ಕ್ರಿಯವಾಗಿರುವ ಎಲ್‌ಟಿಟಿಇಯ ಮರು ಕಾರ್ಯಾಚರಣೆ ಅದರ ಮಾಜಿ ಸದಸ್ಯರು ಪ್ರಯತ್ನಿಸುತ್ತಿರುವುದು ಈಗಾಗಲೇ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸಂಘಟನೆ ಬಲಪಡಿಸಲು ಹಣ ಸಂಗ್ರಹಣೆಗಾಗಿ ಡ್ರಗ್ಸ್​ ದಂಧೆಗೆ ಇಳಿಯಲಾಗಿದೆ. ಎಲ್‌ಟಿಟಿಇ ಕಾರ್ಯಕರ್ತ ಸತ್ನುಕಮ್ ಅಲಿಯಾಸ್ ಸಬೆಸನ್‌ ನಿಕಟವರ್ತಿ ಪಾಕಿಸ್ತಾನದ ಪೆಡ್ಲರ್​ಗಳ ಜೊತೆಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಚೆನ್ನೈನಲ್ಲಿ ಬಂಧಿಸಲಾಗಿದೆ.

ಎಲ್​ಟಿಟಿಇ ಮಾಜಿ ಕಾರ್ಯಕರ್ತ ಸತ್ನುಕಮ್​ 3 ಸಾವಿರ ಕೋಟಿ ರೂಪಾಯಿ ಹೆರಾಯಿನ್​ ಕಳ್ಳಸಾಗಣೆ ಪ್ರಕರಣದಲ್ಲಿ 2021 ರಿಂದ ಜೈಲಿನಲ್ಲಿದ್ದಾನೆ. ಅಲ್ಲದೇ, ಈತ ಎಕೆ 47 ಗನ್​ಗಳ ಅಕ್ರಮ ಸಾಗಣೆಯಲ್ಲೂ ಕೈವಾಡ ಹೊಂದಿದ್ದಾನೆ. ಈತನ ಸಹಚರರು ತಮಿಳು ಪ್ರತ್ಯೇಕತಾವಾದಿಗಳ ಜೊತೆ ಸೇರಿ ನಾರ್ಕೋ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ತನಿಖೆಯಲ್ಲಿ ಗೊತ್ತಾಗಿದೆ.

ಪಾಕಿಸ್ತಾನದ ಕುಮ್ಮಕ್ಕು: ಇತ್ತ ಭಾರತದ ವಿರುದ್ಧ ಹಲ್ಲು ಮಸೆಯುವ ಪಾಕಿಸ್ತಾನ ಎಲ್​ಟಿಟಿಇಗೆ ಬೆಂಬಲವಾಗಿ ನಿಂತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕುಖ್ಯಾತ ಪೆಡ್ಲರ್​​ ಹಾಜಿ ಅಲಿ ನೆಟ್‌ವರ್ಕ್ ಕೂಡ ಭಾರತ ಮತ್ತು ಶ್ರೀಲಂಕಾ ಮಾರುಕಟ್ಟೆಗಳಿಗೆ ಡ್ರಗ್ಸ್ ಅನ್ನು ಸರಬರಾಜು ಮಾಡುತ್ತಿದೆ. ಇದಕ್ಕೆ ಎಲ್‌ಟಿಟಿಇ ಮಾಜಿ ಕಾರ್ಯಕರ್ತರ ಬೆಂಬಲವಿದೆ. ಇದರಿಂದ ಬರುವ ಹಣ ಸಂಗ್ರಹಿಸಿ ಎಲ್​ಟಿಟಿಇ ಸಂಘಟನೆಯನ್ನು ಮತ್ತೆ ಕಾರ್ಯರೂಪಕ್ಕೆ ತರುವ ಇರಾದೆ ಇದರಲ್ಲಿದೆ ಎಂಬುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ.

ಎಲ್‌ಟಿಟಿಇ ಮಾಜಿ ಕಾರ್ಯಕರ್ತ ಸಿ. ಗುಣಶೇಖರನ್ ಸಂಘಟನೆಯ ಪುನರುಜ್ಜೀವನಕ್ಕಾಗಿ ಸದ್ದಿಲ್ಲದೇ ಕೆಲಸ ಮಾಡುತ್ತಿದ್ದು, ಪಾಕಿಸ್ತಾನದಿಂದ ಶ್ರೀಲಂಕಾಕ್ಕೆ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ರವಾನೆ ಮಾಡುವ ಪಾಕಿಸ್ತಾನದ ಹಾಜಿ ಸಲೀಂನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಎನ್ಐಎ ಹೇಳಿದೆ.

ಇದನ್ನೂ ಓದಿ: Army encounter: ರಜೌರಿಯಲ್ಲಿ 2ನೇ ದಿನಕ್ಕೆ ಕಾಲಿಟ್ಟ ಗುಂಡಿನ ಚಕಮಕಿ: ಓರ್ವ ಭಯೋತ್ಪಾದಕ ಹತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.