ಹೈದರಾಬಾದ್(ತೆಲಂಗಾಣ): ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಬಂಧನವಾಗಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಕೋರ್ಟ್ನಿಂದ ಜಾಮೀನು ಪಡೆದುಕೊಂಡು ಹೊರಬಂದಿದ್ದಾರೆ. ಇಂದು ಬೆಳಗ್ಗೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಅವರನ್ನ ನಾಂಪಲ್ಲಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವಿಚಾರಣೆ ನಡೆಸಿದ ಕೋರ್ಟ್, ಯಾವುದೇ ಷರತ್ತುಗಳಿಲ್ಲದೆ ಕೇವಲ 45 ನಿಮಿಷಗಳಲ್ಲಿ ಜಾಮೀನು ಮಂಜೂರು ಮಾಡಿದೆ. ಜೊತೆಗೆ ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.
ಇದಕ್ಕೂ ಮೊದಲು ಶಾಸಕ ರಾಜಾ ಸಿಂಗ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಸಲ್ಲಿಕೆ ಮಾಡಿದ್ದ ಪೊಲೀಸರ ಅರ್ಜಿ ತಿರಸ್ಕರಿಸಿದ್ದ ಕೋರ್ಟ್, ಸಿಆರ್‌ಪಿಸಿ 41ಎ ಪೊಲೀಸರಿಂದ ಪಾಲನೆಯಾಗಿಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಜಾಮೀನು ಕೋರಿ ಸಲ್ಲಿಕೆ ಮಾಡಿದ್ದ ಶಾಸಕರ ಅರ್ಜಿ ಸ್ವೀಕರಿಸಿದ ಕೋರ್ಟ್ ಯಾವುದೇ ಷರತ್ತು ಇಲ್ಲದೇ ಜಾಮೀನು ಮಂಜೂರು ಮಾಡಿದೆ.
-
Telangana | 14ACMM Court returns the remand application for suspended BJP MLA Raja Singh; orders that he be released forthwith.
— ANI (@ANI) August 23, 2022 " class="align-text-top noRightClick twitterSection" data="
(File photo) pic.twitter.com/HxLXAwcRa1
">Telangana | 14ACMM Court returns the remand application for suspended BJP MLA Raja Singh; orders that he be released forthwith.
— ANI (@ANI) August 23, 2022
(File photo) pic.twitter.com/HxLXAwcRa1Telangana | 14ACMM Court returns the remand application for suspended BJP MLA Raja Singh; orders that he be released forthwith.
— ANI (@ANI) August 23, 2022
(File photo) pic.twitter.com/HxLXAwcRa1
ಕೋರ್ಟ್ ಮುಂದೆ ಪ್ರತಿಭಟನೆ, ಲಾಠಿ ಪ್ರಹಾರ: ಶಾಸಕರನ್ನು ಬಂಧನ ಮಾಡಿರುವ ನಿರ್ಧಾರ ಖಂಡಿಸಿ, ಕೋರ್ಟ್ ಮುಂದೆ ಅವರ ಬೆಂಬಲಿಗರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಇದೇ ವೇಳೆ ರಾಜಾ ಸಿಂಗ್ ವಿರುದ್ಧ ಕೆಲವರು ಘೋಷಣೆ ಕೂಗಿದ ಘಟನೆ ಸಹ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಹೀಗಾಗಿ, ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಶಾಸಕ ರಾಜಾ ಸಿಂಗ್ ಅವರ ವಿವಾದಿತ ಹೇಳಿಕೆ ಖಂಡಿಸಿ ವಿವಿಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ ಎಂದು ರಚಕೊಂಡ ಸಿಪಿ ಮಹೇಶ್ ಭಾಗವತ್ ತಿಳಿಸಿದರು. ಎಲ್‌ಬಿ ನಗರ, ವನಸ್ಥಲಿಪುರಂ, ಬಾಳಾಪುರ ಮತ್ತು ಕುಶೈಗುಡ ಠಾಣೆಗಳಲ್ಲಿ ದೂರು ದಾಖಲಾಗಿವೆ ಎಂದು ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಪ್ರಕರಣ ದಾಖಲಾಗಿವೆ ಎಂಬ ಮಾಹಿತಿ ನೀಡಿದರು.
ಇದನ್ನೂ ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ: ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಪಕ್ಷದಿಂದ ಅಮಾನತು
ತೆಲಂಗಾಣದ ಗೋಶಾಮಹಲ್‌ನ ಶಾಸಕ ರಾಜಾ ಸಿಂಗ್ ರಿಲೀಸ್ ಮಾಡಿದ್ದ ವಿಡಿಯೋದಲ್ಲಿ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಇದು ಹೆಚ್ಚಿನ ವಿರೋಧಕ್ಕೆ ಕಾರಣವಾಗುತ್ತಿದ್ದಂತೆ ತಮಾಷೆಗಾಗಿ ಈ ರೀತಿ ಮಾಡಿರುವುದಾಗಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು. ಜೊತೆಗೆ ಪ್ರಕರಣ ಕೂಡ ದಾಖಲಾಗಿತ್ತು. ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಐಪಿಸಿಯ 295 (ಎ), 153 (ಎ) ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಡಬೀರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಇಂದು ಬೆಳಗ್ಗೆ ಅವರನ್ನ ಬಂಧನ ಮಾಡಲಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಅವರನ್ನು ಪಕ್ಷದಿಂದ ವಜಾಗೊಳಿಸಿದ್ದು, ಸ್ಪಷ್ಟೀಕರಣ ನೀಡುವಂತೆ ತಿಳಿಸಿದೆ.