ಭುವನೇಶ್ವರ (ಒಡಿಶಾ): ಇಲ್ಲಿನ ಮಯೂರ್ಭಂಜ್ ಕೋವಿಡ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಕೋವಿಡ್ ಸೋಂಕಿತರನ್ನು ಬೆತ್ತಲಾಗಿಸಿ ನೆಲದ ಮೇಲೆ ಮಲಗಿಸಿರುವ ವಿಡಿಯೋ ವೈರಲ್ ಆಗಿದ್ದು, ಕೋಲಾಹಲ ಸೃಷ್ಟಿಸಿದೆ.
![ಶೌಚಾಲಯದಲ್ಲಿ ಕೊರೊನಾ ಸೋಂಕಿತ](https://etvbharatimages.akamaized.net/etvbharat/prod-images/12007430_aaaa-1.jpg)
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊಗಳು ಹಾಗೂ ವಿಡಿಯೋ ತುಣುಕುಗಳಲ್ಲಿ ಸೋಂಕಿತರು ಹಾಸಿಗೆ ಇಲ್ಲದೆ ನೆಲದ ಮೇಲೆ ಮಲಗಿರುವುದು ಕಂಡು ಬರುತ್ತದೆ. ಕೆಲ ಸೋಂಕಿತರು ಬಟ್ಟೆಯೇ ಇಲ್ಲದ ಪರಿಸ್ಥಿತಿಯಲ್ಲಿರುವುದು ಸಹ ಕಂಡುಬಂದಿದೆ.
![ನೆಲದ ಮೇಲೆ ಮಲಗಿರುವ ರೋಗಿ](https://etvbharatimages.akamaized.net/etvbharat/prod-images/12007430_aaaa-2.jpg)
ಆಸ್ಪತ್ರೆಯಲ್ಲಿ ಮೂಲ ಸೌಕರ್ಯದ ಕೊರತೆಯಿದ್ದು, ಸೋಂಕಿತರಿಗೆ ಸೂಕ್ತ ಚಿಕಿತ್ಸೆಯೂ ದೊರೆಯುತ್ತಿಲ್ಲ ಎಂದು ಆರೋಪಿಸಲಾಗಿದೆ.
![ನೆಲದ ಮೇಲೆ ಬೆತ್ತಲೆಯಾಗಿ ಮಲಗಿರುವ ರೋಗಿ](https://etvbharatimages.akamaized.net/etvbharat/prod-images/12007430_zzzz.jpg)
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ವಿಭಾಗೀಯ ವೈದ್ಯಕೀಯ ಅಧಿಕಾರಿ ಎನ್.ಆರ್.ದಾಸ್, ಘಟನೆಯ ನಮಗೆ ತಿಳಿದುಬಂದಿಲ್ಲ. ಆದರೆ, ಘಟನೆ ಕುರಿತು ತುರ್ತು ತನಿಖೆಗೆ ಆದೇಶಿಸಲಾಗಿದೆ ಎಂದಿದ್ದಾರೆ.
![ನಗ್ನ ಸ್ಥಿತಿಯಲ್ಲಿ ಕೋವಿಡ್ ರೋಗಿ](https://etvbharatimages.akamaized.net/etvbharat/prod-images/12007430_xxxx.jpg)