ಕೋಲ್ಕತಾ: ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸಾಮಾನ್ಯ ಜನರ ಸಲಹೆಗಳನ್ನು ಪಡೆಯಲು ಭಾರತೀಯ ಜನತಾ ಪಕ್ಷ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು 'ಲೋಖೋ ಸೋನಾರ್ ಬಾಂಗ್ಲಾ' ಪ್ರಣಾಳಿಕೆ ಕ್ರೌಡ್ ಸೋರ್ಸಿಂಗ್ ಅಭಿಯಾನವನ್ನು ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಡ್ಡಾ, "ನಾವು ಜನರಿಂದ 2 ಕೋಟಿ ಸಲಹೆಗಳನ್ನು ಸ್ವೀಕರಿಸುತ್ತೇವೆ. ಪಶ್ಚಿಮ ಬಂಗಾಳದಾದ್ಯಂತ ಅಂದಾಜು 30,000 ಸಲಹಾ ಪೆಟ್ಟಿಗೆಗಳನ್ನು ಅಳವಡಿಸುತ್ತೇವೆ. 294 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 100 ಪೆಟ್ಟಿಗೆಗಳನ್ನು ಇಡಲಾಗುವುದು" ಎಂದರು.
"ಸ್ವಾಮಿ ವಿವೇಕಾನಂದರು, ರವೀಂದ್ರನಾಥ ಠಾಗೋರ್, ಬಂಕಿಮ್ ಚಂದ್ರ ಚಟರ್ಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಶ್ಯಾಮಾ ಪ್ರಸಾದ್ ಮುಖರ್ಜಿ, ಈಶ್ವರ್ ಚಂದ್ರ ವಿದ್ಯಾಸಾಗರ್ ಅವರು ನೀಡಿದ ಕೊಡುಗೆಯ ನಾಡಿನಲ್ಲಿ 'ಸೋನಾರ್ ಬಾಂಗ್ಲಾ' ತಯಾರಿಸಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ" ಎಂದರು.
ಈ ಕಾರ್ಯಕ್ರಮದಲ್ಲೇ ನಟಿ ಪಾಯಲ್ ಸರ್ಕಾರ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು.