ಪಣಜಿ (ಗೋವಾ): ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೋವಾದ ಪಣಜಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ನಾಯಕತ್ವ ಬದಲಾವಣೆಯ ಕುರಿತಾದ ಊಹಾಪೋಹಗಳ ಬಗ್ಗೆ ಕೇಳಿದಾಗ, ಅವರು ಅದನ್ನು ಅಲ್ಲಗಳೆದರು. "ಯಡಿಯೂರಪ್ಪ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನೀವು ಯೋಚಿಸಬಹುದು. ಆದರೆ, ನಾವು ಹಾಗೆ ಯೋಚಿಸುವುದಿಲ್ಲ" ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಭವಿಷ್ಯದ ಬಗ್ಗೆ ಬಿಜೆಪಿ ಹೈಕಮಾಂಡ್ ಸಂಜೆಯೊಳಗೆ ಹೇಳಿಕೆ ನೀಡಲಿದೆ ಎಂದು ಯಡಿಯೂರಪ್ಪ ಈ ಮೊದಲು ಹೇಳಿದ್ದರು.
ಇದನ್ನೂ ಓದಿ: ನಾನು ಹೈಕಮಾಂಡ್ ಹಾಕಿದ ಗೆರೆ ದಾಟುವುದಿಲ್ಲ: ಬಿ.ಎಸ್.ಯಡಿಯೂರಪ್ಪ