ಸಹರಾನ್‌ಪುರ (ಉತ್ತರಪ್ರದೇಶ) : ಸಹರಾನ್‌ಪುರದಲ್ಲಿ ನಡೆದ ಬಿಜೆಪಿ ರ್‍ಯಾಲಿಯಲ್ಲಿ ಜೈ ಶ್ರೀರಾಮ್ ಮತ್ತು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಿದ್ದಕ್ಕಾಗಿ ದಿಯೋಬಂದ್ ಉಲೇಮಾ (ಇಸ್ಲಾಮಿಕ್ ಸೆಮಿನರಿ) ಮುಸ್ಲಿಂ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಯುವಕ ಘೋಷಣೆ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಉಲೂಮ್ ದಿಯೋಬಂದ್ ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ದಿಯೋಬಂದ್ ಉಲೇಮಾ ಮುಫ್ತಿ ಅಸಾದ್ ಖಾಸ್ಮಿ, ಇಸ್ಲಾಂ ಧರ್ಮದಲ್ಲಿ ಇಂತಹ ಘೋಷಣೆಗಳನ್ನು ಕೂಗಲು ಯಾವುದೇ ಅವಕಾಶವಿಲ್ಲ ಎಂದು ಹೇಳಿದ್ದಾರೆ.
"ಈ ಯುವಕ ಮೌಲಾನಾಗಳೊಂದಿಗೆ ಕೈ ಜೋಡಿಸಿ ಪಶ್ಚಾತ್ತಾಪ ಪಡಬೇಕು. ಇಂತಹ ಘೋಷಣೆಗಳನ್ನು ಕೂಗುವುದು ಇಸ್ಲಾಂಗೆ ವಿರುದ್ಧವಾಗಿದೆ. ತಮ್ಮ ನಾಯಕನ್ನು ಮೆಚ್ಚಿಸಲು ಇಂತಹ ಘೋಷಣೆಗಳನ್ನು ಕೂಗಬಾರದು" ಎಂದು ಮುಫ್ತಿ ಅಸದ್ ಖಾಸ್ಮಿ ಹೇಳಿದರು.
ಮಾ.2020ರಲ್ಲಿ, ದಿಯೋಬಂದ್ ಉಲೇಮಾ ಚೀನಾದಿಂದ ಹರಡುತ್ತಿದ್ದ ಮಾರಣಾಂತಿಕ ಕೊರೊನಾ ಸೋಂಕಿನ ಬಗ್ಗೆ ಹೇಳಿಕೆ ನೀಡಿದ್ದರು. "ಅಲ್ಲಾ ಕೋಪಗೊಂಡಿದ್ದಾನೆ ಮತ್ತು ಅದಕ್ಕಾಗಿಯೇ ಕೊರೊನಾ ಸೋಂಕು ಹರಡುತ್ತಿದೆ ಎಂದು ಉಲೇಮಾ ಹೇಳಿದ್ದರು.
ಉಲೇಮಾಗಳ ಪ್ರಕಾರ, "ಜನರು ಅಲ್ಲಾನನ್ನು ನಂಬುವುದನ್ನು ನಿಲ್ಲಿಸಿದ್ದಾರೆ ಮತ್ತು ತಮ್ಮದೇ ಆದ ನಿಯಮಗಳು ಮತ್ತು ನಿಬಂಧನೆಗಳನ್ನು ಪ್ರಾರಂಭಿಸಿದ್ದಾರೆ. ಅದಕ್ಕಾಗಿಯೇ ಅಲ್ಲಾ ಕೋಪಗೊಂಡಿದ್ದಾನೆ." ವೈದ್ಯರ ಸಲಹೆಯನ್ನು ಪಾಲಿಸುವುದರ ಜತೆಗೆ ಅಲ್ಲಾನನ್ನು ಆರಾಧಿಸುವಂತೆ ಉಲೇಮಾಗಳು ಮುಸ್ಲಿಂ ಸಮುದಾಯಕ್ಕೆ ಸಲಹೆ ನೀಡಿದ್ದರು.
ಇದನ್ನೂ ಓದಿ: 'ನಿಮ್ಮ ಮಕ್ಕಳ ಮೇಲೆ ನೀವು ಲಾಠಿ ಬೀಸ್ತೀರಾ'.. ಯೋಗಿ ಸರ್ಕಾರದ ವಿರುದ್ಧ ಸಂಸದ ವರುಣ್ ಗಾಂಧಿ ಮತ್ತೆ ಗರಂ