ETV Bharat / bharat

Triple Talaq: ತ್ರಿವಳಿ ತಲಾಖ್ ನಿಷೇಧಿಸಿದ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಲಿರುವ ಮುಸ್ಲಿಂ ಮಹಿಳೆಯರು

author img

By

Published : Nov 15, 2021, 4:34 PM IST

Updated : Nov 15, 2021, 4:41 PM IST

2019ರ ಜುಲೈ 31ರಂದು ತ್ರಿವಳಿ ತಲಾಖ್​​ ನಿಷೇಧ ಮಸೂದೆಯನ್ನು ಸಂಸತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ಮಾಡಿತ್ತು. ಆಗಸ್ಟ್ 1ರಿಂದ ತ್ರಿವಳಿ ತಲಾಖ್​​ ನಿಷೇಧ ಕಾಯ್ದೆ ಜಾರಿಗೆ ಬಂದಿತ್ತು..

ತ್ರಿವಳಿ ತಲಾಖ್ ನಿಷೇಧಿಸಿದ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಲಿರುವ ಮುಸ್ಲಿಂ ಮಹಿಳೆಯರು

ಭೋಪಾಲ್‌ (ಮಧ್ಯಪ್ರದೇಶ): ತ್ರಿವಳಿ ತಲಾಖ್ (Triple Talaq) ವಿರುದ್ಧ ಕಾನೂನು ಜಾರಿಗೆ ತಂದ ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಧನ್ಯವಾದ ಅರ್ಪಿಸಲು ಮಧ್ಯಪ್ರದೇಶದ ಮುಸ್ಲಿಂ ಮಹಿಳೆಯರು (Muslim Women of Madhya Pradesh) ಸಾಲುಗಟ್ಟಿ ನಿಂತಿದ್ದಾರೆ.

'ಜಂಜಾಟಿಯ ಗೌರವ್ ದಿವಸ್ ಮಹಾಸಮ್ಮೇಳ'ನದಲ್ಲಿ (Janjatiya Gaurav Diwas Mahasammelan) ಭಾಗವಹಿಸಲು ಪ್ರಧಾನಿ ಮೋದಿ ಇಂದು ಮಧ್ಯಪ್ರದೇಶದ ಭೋಪಾಲ್‌ಗೆ ಆಗಮಿಸಿದ್ದಾರೆ.

ರಾಜ್ಯದ ಜಂಜಾಟಿಯ ಸಮುದಾಯದ ಕಲ್ಯಾಣಕ್ಕಾಗಿ ರೂಪುಗೊಂಡಿರುವ ಅನೇಕ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಪ್ರತಿವರ್ಷ 'ಜಂಜಾಟಿಯ ಗೌರವ್ ದಿವಸ್' ಎಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: ವಿವಾಹದ ಹಕ್ಕು ರಕ್ಷಣೆ ಕಾಯ್ದೆ ಜಾರಿಯಿಂದ ಶೇ.80 ರಷ್ಟು ತಲಾಖ್ ಕೇಸ್​ ಕಡಿಮೆ: ನಖ್ವಿ

ಭೋಪಾಲ್‌ನ ಜ್ಞಾನ ವಿಜ್ಞಾನ ಕೇಂದ್ರವನ್ನು ತಲುಪಿರುವ ಮುಸ್ಲಿಂ ಮಹಿಳೆಯರು, ತ್ರಿವಳಿ ತಲಾಖ್​​ ನಿಷೇಧ ಕಾಯ್ದೆ ಜಾರಿಗೆ ತಂದ ಪಿಎಂ ಮೋದಿಗೆ ಧನ್ಯವಾದ ಅರ್ಪಿಸಲು ಸಜ್ಜಾಗಿದ್ದಾರೆ.

ಭದ್ರತಾ ತಪಾಸಣೆಯ ನಂತರ ಮಹಿಳೆಯನ್ನು ಒಳಗೆ ಕಳುಹಿಸಲಾಗುವುದು ಮತ್ತು ಇವರಿಗಾಗಿ ಪ್ರಧಾನಿ ಮೋದಿ ಅರ್ಧ ಗಂಟೆ ಮೀಸಲಿಡಲಿದ್ದಾರೆ ಎಂದು ಹೇಳಲಾಗಿದೆ.

2019ರ ಜುಲೈ 31ರಂದು ತ್ರಿವಳಿ ತಲಾಖ್​​ ನಿಷೇಧ ಮಸೂದೆಯನ್ನು ಸಂಸತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ಮಾಡಿತ್ತು. ಆಗಸ್ಟ್ 1ರಿಂದ ತ್ರಿವಳಿ ತಲಾಖ್​​ ನಿಷೇಧ ಕಾಯ್ದೆ ಜಾರಿಗೆ ಬಂದಿತ್ತು.

ತನ್ನ ಪತ್ನಿಗೆ ಮೂರು ಬಾರಿ ತಲಾಖ್ ಎಂದು ಉಚ್ಚರಿಸುವ ಮೂಲಕ ವಿಚ್ಛೇದನ ನೀಡುವ ಯಾವುದೇ ಮುಸ್ಲಿಂ ವ್ಯಕ್ತಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಕಾನೂನು ಇದಾಗಿದೆ.

Last Updated : Nov 15, 2021, 4:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.