ಮಾನಸ(ಪಂಜಾಬ್): ಪಂಜಾಬಿ ಗಾಯಕ ಸಿಧು ಮುಸೇವಾಲಾ ಅವರ ಅಕಾಲಿಕ ನಿಧನದ ನಂತರ ಅಪಾರ ಸಂಖ್ಯೆಯ ಹಿತೈಷಿಗಳು ಸಿಧು ಮುಸೇವಾಲಾ ಅವರ ಮನೆಗೆ ಆಗಮಿಸುತ್ತಿದ್ದು, ಅವರನ್ನು ಸ್ಮರಿಸುತ್ತಿದ್ದಾರೆ.
ಸಿಧು ಮುಸೇವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಅವರು ಜನರನ್ನುದ್ದೇಶಿಸಿ ಮಾತನಾಡಿ, ಗ್ರಾಮದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಆಸ್ಪತ್ರೆ ನಿರ್ಮಿಸುವುದು ಸಿಧು ಮುಸೇವಾಲಾ ಕನಸಾಗಿತ್ತು. ಆದರೆ, ಆ ಕನಸು ಈಡೇರಲಿಲ್ಲ. ಯಾರಿಗೂ ಯಾವುದೇ ಸಮಸ್ಯೆಯಾಗಬಾರದು, ಉತ್ತಮ ರೀತಿಯಲ್ಲಿ ಹೋರಾಟ ಮಾಡಿ ಎಲ್ಲಿಗೆ ಹೋಗಬೇಕೋ ಅಲ್ಲಿ ತಲುಪುತ್ತೇವೆ ಎಂದು ಜನತೆಗೆ ಮನವಿ ಮಾಡಿದರು.
ಈ ಹಿಂದೆ ಆಯೋಜಿಸಿದ್ದ ಕ್ಯಾಂಡಲ್ ಮಾರ್ಚ್ ಗೆ ನನ್ನ ಕುಟುಂಬದ ಪರವಾಗಿ ಎಲ್ಲರಿಗೂ ಧನ್ಯವಾದಗಳು. ಎಲ್ಲರೂ ನಮ್ಮನ್ನು ಬೆಂಬಲಿಸಿದರು. ಈ ಹೋರಾಟಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ ಎಂದ ಅವರು, ವಿದೇಶದಲ್ಲಿ ಕುಳಿತವರು ಈ ವಿಚಾರದಲ್ಲಿ ಭಾಗಿಯಾಗಿರುವುದರಿಂದ ಹೆಚ್ಚು ಸಮಯ ಹಿಡಿಯುವುದು ಖಚಿತ ಎಂದು ಹೇಳಿದರು.
ಸಿಧು ಮೊದಲಿನಿಂದಲೂ ತನ್ನನ್ನು ಮಲೆನಾಡಿನ ಮಗ ಎಂದು ಕರೆದುಕೊಳ್ಳುತ್ತಿದ್ದರು. ಅದನ್ನು ತಮ್ಮ ಹಾಡುಗಳಲ್ಲಿ ಪದೇ ಪದೇ ಉಲ್ಲೇಖಿಸುತ್ತಿದ್ದರು. ಸಿಧು ತಮ್ಮ ಹಿಂದುಳಿದ ಪ್ರದೇಶದ ಕಲೆಯನ್ನು ಬೆಳೆಸಲು ಒಂದಷ್ಟು ಪ್ರಯತ್ನಗಳನ್ನು ಮಾಡಿದ್ದು, ಇನ್ನೂ ಎರಡು ಮೂರು ವರ್ಷ ಸಮಯ ಸಿಕ್ಕಿದ್ದರೆ ಮಾನಸ ಜಿಲ್ಲೆಯ ಚಿತ್ರಣವೇ ಬೇರೆಯಾಗುತ್ತಿತ್ತು. ಕಡಿಮೆ ಸಮಯದಲ್ಲೇ ಅವರು ಹಾಡುಗಾರಿಕೆ, ಚಲನಚಿತ್ರಗಳು ಮತ್ತು ರಾಜಕೀಯದಲ್ಲಿಯೂ ಕೆಲಸ ಮಾಡಿದ್ದಾರೆ. ತಾನು ರಾಜಕೀಯಕ್ಕೆ ಬಂದರೆ ನನ್ನ ಹಣ ಮತ್ತು ರಾಜಕೀಯ ಬಲದಿಂದ ಜನಪರ ಕೆಲಸಗಳನ್ನು ತ್ವರಿತವಾಗಿ ಮಾಡಬಹುದು ಎಂಬುದೇ ಅವರ ಉದ್ದೇಶವಾಗಿತ್ತು ಎಂದು ಬಲ್ಕೌರ್ ಸಿಂಗ್ ವಿವರಿಸಿದರು.
ಇದನ್ನೂ ಓದಿ: ತಾಯಿಯೊಂದಿಗೆ ಸುಖ ನಿದ್ರೆಯಲ್ಲಿದ್ದ ಮಗು ಕದ್ದು ಪರಾರಿಯಾದ ಕ್ರೂರಿ: ವಿಡಿಯೋ