ETV Bharat / bharat

ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಸೆಂಟ್ರಲ್​ ಜೈಲಿನಲ್ಲೇ ಗ್ಯಾಂಗ್ ವಾರ್, ಇಬ್ಬರು ಗ್ಯಾಂಗ್​ಸ್ಟರ್​ಗಳ ಕೊಲೆ

ಪಂಜಾಬ್​ನ ತರ್ನ್ ತರಣ್ ಜಿಲ್ಲೆಯ ಗೋಯಿಂಡ್ವಾಲ್ ಸಾಹಿಬ್‌ನ ಕೇಂದ್ರ ಕಾರಾಗೃಹದಲ್ಲಿ ಗ್ಯಾಂಗ್​ಸ್ಟರ್​ಗಳ ನಡುವೆ ಗ್ಯಾಂಗ್ ವಾರ್‌ ಜರುಗಿದೆ.

author img

By

Published : Feb 26, 2023, 9:29 PM IST

Updated : Feb 26, 2023, 9:59 PM IST

Murder of two gangsters involved in Moosewala murder in Punjab Jail
ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಸೆಂಟ್ರಲ್​ ಜೈಲಿನಲ್ಲೇ ಗ್ಯಾಂಗ್ ವಾರ್‌

ತರ್ನ್ ತರಣ್ (ಪಂಜಾಬ್​): ಪ್ರಸಿದ್ಧ ಪಂಜಾಬಿ ನಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಗ್ಯಾಂಗ್​ಸ್ಟರ್​ಗಳ ನಡುವೆ ಪಂಜಾಬ್​ನ ಜೈಲಿನಲ್ಲೇ ವಾರ್​ ನಡೆದಿದೆ. ಈ ಹೊಡೆದಾಟದಲ್ಲಿ ಇಬ್ಬರು ಗ್ಯಾಂಗ್​ಸ್ಟರ್​ಗಳು ಹತರಾಗಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಬೆಳ್ಳಂಬೆಳಗ್ಗೆ 60ಕ್ಕೂ ಹೆಚ್ಚು ಸ್ಥಳಗಳ ಮೇಲೆ NIA ದಾಳಿ

ಕಳೆದ ವರ್ಷ ಮೇ 29ರಂದು ಸಿಧು ಮೂಸೆವಾಲಾ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಗ್ಯಾಂಗ್​ಸ್ಟರ್​ಗಳು ಮತ್ತು ಶೂಟರ್​​ಗಳನ್ನು ಬಂಧಿಸಲಾಗಿತ್ತು. ಇದೀಗ ತರ್ನ್ ತರಣ್ ಜಿಲ್ಲೆಯ ಗೋಯಿಂಡ್ವಾಲ್ ಸಾಹಿಬ್‌ನ ಕೇಂದ್ರ ಕಾರಾಗೃಹದಲ್ಲಿ ಬಂಧಿತ ಆರೋಪಿಗಳು ನಡುವೆ ಗ್ಯಾಂಗ್ ವಾರ್‌ ನಡೆದಿದೆ. ಇದರಲ್ಲಿ ಮನದೀಪ್ ತೋಫಾನ್ ಮತ್ತು ಮನಮೋಹನ್ ಸಿಂಗ್ ಎಂಬ ಇಬ್ಬರು ಗ್ಯಾಂಗ್​ಸ್ಟರ್​ಗಳ ಕೊಲೆಯಾಗಿದೆ. ಈ ಘಟನೆಯಲ್ಲಿ ಮತ್ತೋರ್ವ ಗ್ಯಾಂಗ್​ಸ್ಟರ್​ ಕೇಶವ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಹರಿತವಾದ ಆಯುಧಗಳಿಂದ ದಾಳಿ: ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗ್ಯಾಂಗ್​ಸ್ಟರ್​ಗಳು ನಡುವೆ ಮಾರಾಮಾರಿ ನಡೆದಿದೆ. ಹರಿತವಾದ ಆಯುಧಗಳಿಂದ ಪರಸ್ಪರ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಮನದೀಪ್ ತೋಫಾನ್ ಜೈಲಿನಲ್ಲಿ ಹತನಾಗಿದ್ದಾನೆ. ಮತ್ತೋರ್ವ ಮನಮೋಹನ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದು, ಈತನನ್ನು ತರ್ನ್ ತರಣ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇನ್ನೋರ್ವ ಕೇಶವ್ ಕೂಡ ಗಂಭೀರ ಸ್ಥಿತಿಯಲ್ಲಿದ್ದು, ಅಮೃತಸರ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಸೆವಾಲಾ ಹತ್ಯೆ ಪ್ರಕರಣದ ಹಿನ್ನೆಲೆ: ಪಂಜಾಬ್​ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳು ಸಿಧು ಮೂಸೆವಾಲಾ ಎಂದು ಗುಂಡಿಕ್ಕಿ ಕೊಂದಿದ್ದರು. ಪಂಜಾಬ್ ಪೊಲೀಸರು ಮೂಸೆವಾಲಾ ಸೇರಿದಂತೆ 424 ಜನ ಪ್ರಮುಖ ಪೊಲೀಸ್​ ಭದ್ರತೆಯನ್ನು ಹಿಂತೆಗೆದುಕೊಂಡ ಎರಡು ದಿನಗಳ ನಂತರ ಎಂದರೆ 2022ರ ಮೇ 29ರಂದು ಈ ಕೊಲೆ ನಡೆದಿತ್ತು.

ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ: ಮಾಸ್ಟರ್‌ಮೈಂಡ್​ ಗೋಲ್ಡಿ ಬ್ರಾರ್ ಕ್ಯಾಲಿಫೋರ್ನಿಯಾದಲ್ಲಿ ಬಂಧನ

ಖ್ಯಾತ ಪಂಜಾಬಿ ಗಾಯಕನಾಗಿದ್ದ ಮೂಸೆವಾಲಾಗೆ ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡು ಹಾರಿಸಲಾಯಿತು. ದುಷ್ಕರ್ಮಿಗಳು ಒಟ್ಟಾರೆ 30 ಸುತ್ತು ಗುಂಡು ಹಾರಿಸಿದ್ದರು. ಇದರಿಂದ ಚಾಲಕನ ಸೀಟಿನಲ್ಲಿ ಕುಸಿದು ಬಿದ್ದಿದ್ದನ್ನು ಸ್ಥಳೀಯರು ಕಂಡು ಆಸ್ಪತ್ರೆಗೆ ಸಾಗಿಸಿದ್ದರು. ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಹಾಡಗಹಲೇ ನಡೆದ ಈ ಹತ್ಯೆಯು ಸಾಕಷ್ಟು ಸಂಚಲನವನ್ನು ಮೂಡಿಸಿತ್ತು.

ಅಲ್ಲದೇ, ಪ್ರಮುಖ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್, ಈ ಹತ್ಯೆಯ ಮಾಸ್ಟರ್ ಮೈಂಡ್ ಎಂದು ತನಿಖೆಯಲ್ಲಿ ಬಯಲಾಗಿತ್ತು. ಕೆನಡಾದಲ್ಲಿ ನೆಲೆಸಿದ್ದ ಎನ್ನಲಾದ ಬಿಷ್ಣೋಯ್ ಆಪ್ತ ಗೋಲ್ಡಿ ಬ್ರಾರ್ ಬಂಧನಕ್ಕೆ ಇಂಟರ್‌ಪೋಲ್ ಮೂಲಕ ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದರು. ಇತ್ತೀಚೆಗೆ ಕ್ಯಾಲಿಫೋರ್ನಿಯಾಗೆ ಗೋಲ್ಡಿ ಬ್ರಾರ್​ನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಕೆನಡಾದಲ್ಲಿ ನೆಲೆಸಿದ್ದ ಗೋಲ್ಡಿ ಬ್ರಾರ್​​, ಕೆಲವು ವಾರಗಳ ಹಿಂದೆಯಷ್ಟೇ ಕ್ಯಾಲಿಫೋರ್ನಿಯಾಗೆ ಪಲಾಯನ ಮಾಡಿದ್ದ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಒಬ್ಬ ಹುಡುಗಿಗಾಗಿ ಓರ್ವ ಕೊಲೆ, ಇನ್ನೊಬ್ಬ ಜೈಲು ಪಾಲು: ನನ್ನ ಮಗ ಒಬ್ಬನೇ ಈ ಕೊಲೆ ಮಾಡಲು ಸಾಧ್ಯವಿಲ್ಲ ಎಂದ ತಂದೆ

Last Updated : Feb 26, 2023, 9:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.