ETV Bharat / bharat

ಸ್ನೇಹಿತರಿಂದಲೇ ಬರ್ಬರ ಕೊಲೆಯಾದ ರೌಡಿಶೀಟರ್‌, ವಿಶಾಖಪಟ್ಟಣಂನಲ್ಲಿ ಘಟನೆ - ನಡು ರಸ್ತೆಯಲ್ಲೇ ಹೆಣವಾಗಿ ಬಿದ್ದ ರೌಡಿ ಶೀಟರ್

ಸ್ನೇಹಿತರ ಕೈಯಿಂದಲೇ ರೌಡಿಶೀಟರ್‌ ಬರ್ಬರವಾಗಿ ಕೊಲೆಯಾಗಿದ್ದಾನೆ. ಈ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

Murder of rowdy sheeter  Andhra Pradesh crime news  Rowdy sheeter murder case  ರೌಡಿ ಶೀಟರ್‌ನ ಬರ್ಬರ ಕೊಲೆ  ನಡು ರಸ್ತೆಯಲ್ಲೇ ಹೆಣವಾಗಿ ಬಿದ್ದ ರೌಡಿ ಶೀಟರ್  ಆಂಧ್ರಪ್ರದೇಶ ಅಪರಾಧ ಸುದ್ದಿ
ರೌಡಿ ಶೀಟರ್‌ನ ಬರ್ಬರ ಕೊಲೆ
author img

By

Published : Aug 18, 2022, 2:49 PM IST

ವಿಶಾಖಪಟ್ಟಣ(ಆಂಧ್ರಪ್ರದೇಶ): ಇಲ್ಲಿನ ಎಂವಿಪಿ ಕಾಲೋನಿಯ ಉಷೋದಯ ಜಂಕ್ಷನ್‌ನಲ್ಲಿ ಇಬ್ಬರು ಯುವಕರು ರೌಡಿಶೀಟರ್​ ಓರ್ವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆಯಾದ ವ್ಯಕ್ತಿ ಮತ್ತು ಕೊಲೆ ಮಾಡಿದವರು ಎಲ್ಲರೂ ಸ್ನೇಹಿತರಾಗಿದ್ದರು. ದ್ವೇಷವೇ ಘಟನೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

ವಿಶಾಖಪಟ್ಟಣಂ ಅಪ್ಪುಘರ್ ನಿವಾಸಿ ಬಿ.ಅನಿಲ್ ಕುಮಾರ್ (36) ಎಂವಿಪಿ ಕಾಲೋನಿಯ ಆದರ್ಶನಗರದಲ್ಲಿ ವಾಸವಿರುವ ಶ್ಯಾಮಪ್ರಕಾಶ್ ಸ್ನೇಹಿತ. ಬಸ್ ಚಾಲಕನಾಗಿರುವ ಶ್ಯಾಮಪ್ರಕಾಶ್ ವಿರುದ್ಧ 498 ಎ ಪ್ರಕರಣವಿದೆ. ಕಾಕಿನಾಡ ಎರಡನೇ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ಆರೋಪಿ ಚಾಲಕ ಅನಿಲ್ ಕುಮಾರ್ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ.

ಆಗಾಗ್ಗೆ ಶ್ಯಾಮ್​ಪ್ರಕಾಶ್​ ಬಗ್ಗೆ ಅನಿಲ್‌ಕುಮಾರ್ ಗೇಲಿ ಮಾಡುತ್ತಿದ್ದನಂತೆ. ಈ ಹಿಂದೆ ಕ್ರಿಕೆಟ್ ಆಡುವಾಗ ಇಬ್ಬರೂ ಜಗಳವಾಡಿದ್ದರು. ಬಳಿಕ ಸ್ನೇಹಿತರ ಮಧ್ಯೆ ರಾಜಿಯಾಗಿ ಮತ್ತೆ ಗೆಳೆಯರಾಗಿದ್ದರು. ಬುಧವಾರ ಮಧ್ಯಾಹ್ನ ಅನಿಲ್ ಕುಮಾರ್, ಶ್ಯಾಮಪ್ರಕಾಶ್, ಶಮೀರ್ ಮತ್ತು ಎರಯ್ಯ ಎಂಬ ನಾಲ್ವರು ಗೆಳೆಯರು ಉಷೋದಯ ಸೆಂಟರ್‌ನಲ್ಲಿರುವ ಅನುಪಮಾ ಬಾರ್‌ನಲ್ಲಿ ಮದ್ಯ ಸೇವಿಸಿದ್ದಾರೆ. ಈ ಸಂದರ್ಭದಲ್ಲಿ ಸ್ನೇಹಿತರ ಮಧ್ಯೆ ವಾಗ್ವಾದ ನಡೆದಿದೆ.

ಸಂಜೆ 4 ರಿಂದ 4.30ರ ನಡುವೆ ಬಾರ್‌ನಿಂದ ಹೊರಗೆ ಬಂದ ಬಳಿಕ ಮತ್ತೆ ಅನಿಲ್ ಜತೆ ವಾಗ್ವಾದ ನಡೆದಿದೆ. ಬಳಿಕ ಪರಸ್ಪರ ಹೊಡೆದಾಡಿಕೊಂಡು ಹಲ್ಲೆ ನಡೆಸಿದ್ದಾರೆ. ಶ್ಯಾಮಪ್ರಕಾಶ್ ಮತ್ತು ಮತ್ತೊಬ್ಬರು ಅನಿಲ್ ಮೇಲೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅನಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.