ಅಮರಾವತಿ(ಮಹಾರಾಷ್ಟ್ರ): ಪ್ರವಾದಿ ಮುಹಮ್ಮದ್ ಕುರಿತು ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ಭೀಕರ ಹತ್ಯೆಯಾಗಿದೆ. ನಗರದಲ್ಲಿ ಮೆಡಿಕಲ್ ಶಾಪ್ ಮಾಲೀಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಜಸ್ಥಾನದ ಟೈಲರ್ ಕನ್ಹಯ್ಯ ಲಾಲ್ ಶಿರಚ್ಛೇದದ ರೀತಿಯಲ್ಲೇ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.
ಜೂನ್ 21ರ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಹೈಸ್ಕೂಲ್ ಎದುರು ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆ ಹಿನ್ನೆಲೆ: ನಗರದ ಮೆಡಿಕಲ್ ಶಾಪ್ ಮಾಲೀಕ ಉಮೇಶ್ ಕೊಲ್ಹೆ ಕೆಲಸ ಮುಗಿಸಿ ಮೆಡಿಕಲ್ ಸ್ಟೋರ್ ಮುಚ್ಚಿ ಮನೆಗೆ ಹೊರಟಿದ್ದರು. ಇನ್ನೊಂದು ಬೈಕ್‌ನಲ್ಲಿ ಮಗ ಮತ್ತು ಸೊಸೆ ಜೊತೆಗಿದ್ದರು. ಮೂವರಿಗೂ ಚಾಕುವಿನಿಂದ ಇರಿಯಲಾಗಿದ್ದು, ಉಮೇಶ್ ಕೊಲ್ಹೆ ಪ್ರಾಣಬಿಟ್ಟಿದ್ದಾರೆ. ಉಮೇಶ್ ಅವರನ್ನು ಬೆಲ್ ಕ್ಲಾಕ್ ಪ್ರದೇಶದ ಬಳಿ ನಾಲ್ಕೈದು ಜನರು ಇರಿದು ಕೊಂದಿದ್ದಾರೆ. ಪ್ರಕರಣ ಸಂಬಂಧ ಮೌಲಾನಾ ಆಜಾದ್ ಕಾಲೋನಿಯ ಅತೀಫ್ ರಶೀದ್ ಆದಿಲ್ ರಶೀದ್ (24), ಬಿಸ್ಮಿಲ್ಲಾನಗರದ ಮುದಾಸ್ಸಿರ್ ಅಹ್ಮದ್ ಶೇಖ್ ಇಬ್ರಾಹಿಂ (22), ಸೂಫಿಯಾನಗರದ ಶಾರುಖ್ ಪಠಾಣ್ ಹಿದಾಯತ್ ಖಾನ್ (24), ಅಬ್ದುಲ್ ತೌಫಿಕ್ ಅಲಿಯಾಸ್ ನಾಣು ಶೇಖ್ ತಸ್ಲೀಂ (24) ಮತ್ತು ಬುರ್ಯಾ ವಾಲ್ದ್ ಸಬೀರ್ ಖಾನ್(22) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹತ್ಯೆ ಪ್ರಕರಣ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ವಿವಾದಿತ ಹೇಳಿಕೆ ಬೆಂಬಲಿಸಿದ್ದಕ್ಕೆ ನಡೆದಿದ್ದು, ಎನ್‌ಐಎ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಶಿವರಾಯ್ ಕುಲಕರ್ಣಿ ಆಗ್ರಹಿಸಿದ್ದಾರೆ. ಇವರು ಹಲವು ಪ್ರಶ್ನೆಗಳನ್ನು ಎತ್ತಿದ್ದು, ಕೊಲೆ ಬಗ್ಗೆ ಗಂಭೀರ ತನಿಖೆಯಾಗಬೇಕು ಎಂದಿದ್ದಾರೆ.
ಈ ಕೊಲೆ ಕೇವಲ ದರೋಡೆ/ಲೂಟಿಗಾಗಿ ಎಂದು ತೋರುತ್ತಿಲ್ಲ. ಆರೋಪಿಗಳು ಚಾಕು ಬಳಸಿ ದರೋಡೆ ಮಾಡುವ ವೇಳೆ ಕೇವಲ ಸ್ವತ್ತು ಹಾಗೂ ಹಣದೊಂದಿಗೆ ಪರಾರಿಯಾಗುತ್ತಾರೆ. ಆದರೆ ಇಲ್ಲಿ ಕೊಲೆ ಮಾಡಲಾಗಿದೆ. ಮೇಲಾಗಿ ಈ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳು ಈ ಹಿಂದಿನ ಯಾವುದೇ ಪ್ರಕರಣದ ಆರೋಪಿ ಅಥವಾ ಕುಖ್ಯಾತರಲ್ಲ. ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡುವ ಬದಲು ಭಯ ಹುಟ್ಟಿಸಿ ಹಣ ದೋಚಬಹುದಿತ್ತು.
ನೂಪುರ್ ಶರ್ಮಾ ಪರವಾಗಿ ಉಮೇಶ್ ಕೊಲ್ಹೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್‌ಗಳಿಂದಾಗಿ ಕೊಲೆ ಮಾಡಲಾಗಿದೆ. ಈ ಆರೋಪಿಗಳು ಯಾವುದಾದರೂ ಸಂಘಟನೆಗೆ ಸೇರಿದವರೇ? ಎಂಬುದನ್ನು ನೋಡಬೇಕಿದೆ. ಸದ್ಯ ಮೃತರ ಮೊಬೈಲ್ ಪೊಲೀಸರ ಬಳಿ ಇದೆ. ಅವರು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆಯೇ? ಅವರಿಗೆ ಬೆದರಿಕೆಗಳು ಬಂದಿವೆಯೇ? ಈ ತಿಂಗಳಲ್ಲಿ ಯಾರ ಫೋನ್ ಕರೆಗಳು ಬಂದವು ಮತ್ತು ಎಲ್ಲಿಂದ ಬಂದವು? ಎಂಬುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ಮಾಡಬೇಕೆಂದು ಕುಲಕರ್ಣಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಿಂದ ಜಬಲ್ಪುರಕ್ಕೆ ಹೊರಟಿದ್ದ ವಿಮಾನದಲ್ಲಿ ಹೊಗೆ.. ತುರ್ತು ಭೂಸ್ಪರ್ಶ
ಅಮರಾವತಿ ಪೊಲೀಸರು ಒಂದು ತೀರ್ಮಾನಕ್ಕೆ ಬಂದಿದ್ದರೂ, ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ. ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚುವ ಅಗತ್ಯವಿದೆ ಎಂದು ಕುಲಕರ್ಣಿ ಆಗ್ರಹಿಸಿದ್ದಾರೆ. ಈ ಬಗ್ಗೆ ಅಮರಾವತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 6 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
-
MHA has handed over the investigation of the case relating to the barbaric killing of Shri Umesh Kolhe in Amravati Maharashtra on 21st June to NIA.
— गृहमंत्री कार्यालय, HMO India (@HMOIndia) July 2, 2022 " class="align-text-top noRightClick twitterSection" data="
The conspiracy behind the killing, involvement of organisations and international linkages would be thoroughly investigated.
">MHA has handed over the investigation of the case relating to the barbaric killing of Shri Umesh Kolhe in Amravati Maharashtra on 21st June to NIA.
— गृहमंत्री कार्यालय, HMO India (@HMOIndia) July 2, 2022
The conspiracy behind the killing, involvement of organisations and international linkages would be thoroughly investigated.MHA has handed over the investigation of the case relating to the barbaric killing of Shri Umesh Kolhe in Amravati Maharashtra on 21st June to NIA.
— गृहमंत्री कार्यालय, HMO India (@HMOIndia) July 2, 2022
The conspiracy behind the killing, involvement of organisations and international linkages would be thoroughly investigated.
ಎನ್‌ಐಎ ತನಿಖೆಗೆ ಅಮಿತ್ ಶಾ ಆದೇಶ: ವ್ಯಾಪಾರಿ ಹತ್ಯೆ ಪ್ರಕರಣದ ತನಿಖೆಯನ್ನ ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‌ಐಎ) ವಹಿಸಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ. ಪೊಲೀಸರು ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದು, ಅವರನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.