ETV Bharat / bharat

ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆಯನ್ನ 13 ತುಂಡುಗಳಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ಕ್ರೂರಿ

ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಂದು ದೇಹವನ್ನು 13 ತುಂಡಾಗಿ ಕತ್ತರಿಸಿ ಕುಕ್ಕರ್​ನಲ್ಲಿ ಬೇಯಿಸಿದ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಕೇಸ್​ಗೆ ಸಂಬಂಧಪಟ್ಟಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

Mumbai: Woman chopped into pieces; live-in-partner detained by police

author img

By

Published : Jun 8, 2023, 8:56 AM IST

Updated : Jun 8, 2023, 6:50 PM IST

ಮುಂಬೈ : ಕಳೆದ ವರ್ಷ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಮಹಾರಾಷ್ಟ್ರದಲ್ಲಿ ಕೂಡ ಅಂತಹದೇ ಘಟನೆ ಮರುಕಳಿಸಿದೆ. ಬುಧವಾರ ರಾತ್ರಿ ಥಾಣೆ ಜಿಲ್ಲೆಯ ಮೀರಾ ಭಾಯಂದರ್ ಪ್ರದೇಶದಲ್ಲಿನ ಕಟ್ಟಡವೊಂದರ ಏಳನೇ ಮಹಡಿಯಲ್ಲಿರುವ ಫ್ಲಾಟ್‌ನಲ್ಲಿ ಹಲವಾರು ತುಂಡುಗಳಾಗಿ ಕತ್ತರಿಸಿದ 36 ವರ್ಷದ ಮಹಿಳೆಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಸರಸ್ವತಿ ವೈದ್ಯ ಕೊಲೆಯಾದ ಮಹಿಳೆ ಎಂದು ಪೊಲೀಸರು ಗುರುತಿಸಿದ್ದಾರೆ. ಮೃತರು 56 ವರ್ಷದ ಮನೋಜ್ ಸಹಾನಿ ಅವರೊಂದಿಗೆ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದು, ಕಳೆದ ಮೂರು ವರ್ಷಗಳಿಂದ ಮೀರಾ ಭಾಯಂದರ್ ಪ್ರದೇಶದ ಫ್ಲಾಟ್‌ನಲ್ಲಿ ನೆಲೆಸಿದ್ದರು. ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಅಪಾರ್ಟ್‌ಮೆಂಟ್‌ನಲ್ಲಿದ್ದ ನೆರೆಹೊರೆಯವರು ನಯಾ ನಗರ ಠಾಣೆಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • #WATCH | Maharashtra | 32-year-old woman killed by 56-year-old live-in partner | As per Police, the accused Manoj Sahni killed Saraswati Vaidya 3-4 days back and after that, he purchased a tree-cutter to chop her into pieces. Police say that the accused boiled pieces of her body… pic.twitter.com/ilFUfWVOLY

    — ANI (@ANI) June 8, 2023 " class="align-text-top noRightClick twitterSection" data=" ">

"3, 4 ದಿನಗಳ ಹಿಂದೆ ಸರಸ್ವತಿಯನ್ನು ಕೊಂದಿದ್ದ ಆರೋಪಿ ಮನೋಜ್, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಲು ಮರ ಕಡಿಯುವ ಯಂತ್ರವನ್ನು ಖರೀದಿಸಿದ್ದಾನೆ. ಬಳಿಕ, ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿ, ಹೊರಗೆ ಎಸೆಯುವ ಉದ್ದೇಶದಿಂದ ಪ್ಲಾಸ್ಟಿಕ್ ಚೀಲಗಳಲ್ಲಿ ಸುತ್ತಿ ಇಟ್ಟಿದ್ದ. ಮಹಿಳೆಯ ಮೃತ ದೇಹದ 12-13 ತುಂಡುಗಳು ಸ್ಥಳದಿಂದ ಪತ್ತೆಯಾಗಿವೆ" ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Delhi Murder: ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆ.. ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆ

"ಸ್ಥಳೀಯರು ದೂರು ನೀಡುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್​ ತಂಡವನ್ನು ಕಳುಹಿಸಲಾಯಿತು. ಈ ವೇಳೆ, ಮಹಿಳೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿರುವುದು ಕಂಡು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಶಂಕಿತ ವ್ಯಕ್ತಿಯೊಬ್ಬ ಗಲಾಟೆ ಮಾಡಿಕೊಂಡು ಆಕೆಯನ್ನು ಕೊಲೆ ಮಾಡಿದ್ದಾನೆ ಮತ್ತು ಇನ್ನೊಬ್ಬ ಬುಧವಾರ ಸಂಜೆಯವರೆಗೂ ಆಕೆಯ ಮೃತದೇಹವನ್ನು ಮುಚ್ಚಿಡಲು ಸಹಾಯ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಆದರೆ, ಕೊಲೆ ಏಕೆ ಮಾಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ" ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಶ್ರದ್ಧಾ ಕೊಲೆ ಕೇಸ್​ : ಚಾರ್ಜ್​ಶೀಟ್​, ಸಾಕ್ಷ್ಯಾಧಾರಗಳ ಪ್ರಸಾರಕ್ಕೆ ಕೋರ್ಟ್​ ನಿರ್ಬಂಧ

"ಪೊಲೀಸರು ಮೀರಾ ರೋಡ್ ಪ್ರದೇಶದಲ್ಲಿನ ಅಪಾರ್ಟ್‌ಮೆಂಟ್​ವೊಂದರಲ್ಲಿ ತುಂಡಾಗಿ ಕತ್ತರಿಸಿದ ಮಹಿಳೆಯ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಇಲ್ಲಿ ಜೋಡಿಯೊಂದು ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು. ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ" ಎಂದು ಮುಂಬೈನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಯಂತ್ ಬಜ್ಬಲೆ ಹೇಳಿದ್ದಾರೆ.

ಇದನ್ನೂ ಓದಿ : ಶ್ರದ್ಧಾ ವಾಕರ್​ ಹತ್ಯೆ ಕೇಸ್​: ದೇಹ 35 ತುಂಡು ಮಾಡಿ, ಮೂಳೆ ಗ್ರೈಂಡರ್​ನಲ್ಲಿ ಪುಡಿ ಮಾಡಿದ್ದನಂತೆ ಅಫ್ತಾಬ್​

ಇನ್ನು ಕಳೆದ ಮೇ 18, 2022 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶ್ರದ್ಧಾ ವಾಕರ್ ಎಂಬ 27 ವರ್ಷದ ಯುವತಿಯನ್ನು ಆಕೆಯ 28 ವರ್ಷದ ಗೆಳೆಯ ಆಫ್ತಾಬ್ ಅಮೀನ್ ಪೂನಾವಾಲಾ ಕೊಲೆ ಮಾಡಿ ದೇಹವನ್ನು ತುಂಡು ತುಂಡುಗಳಾಗಿ ಕತ್ತರಿದ್ದ.

ಇದನ್ನೂ ಓದಿ : ಒಂದು ಕಡೆ ಭೀಭತ್ಸ.. ಮತ್ತೊಂದು ಕಡೆ ಒಲುಮೆಯ ಸ್ನೇಹ.. ಎರಡು ವೈರುಧ್ಯದ ಪ್ರೇಮ್​ ಕಹಾನಿ

Last Updated : Jun 8, 2023, 6:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.