ಸೋಮನಾಥ (ಗುಜರಾತ್): ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮತ್ತು ಪುತ್ರ, ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಅವರು ಶನಿವಾರ ಇಲ್ಲಿನ ಪ್ರಸಿದ್ಧ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದರು. ಗಣ್ಯರನ್ನು ಟ್ರಸ್ಟ್ ಅಧ್ಯಕ್ಷ ಪಿ.ಕೆ.ಲಾಹಿರಿ ಹಾಗೂ ಕಾರ್ಯದರ್ಶಿ ಯೋಗೇಂದ್ರಭಾಯಿ ದೇಸಾಯಿ ಸ್ವಾಗತಿಸಿದರು. ಬಳಿಕ ತಂದೆ ಮತ್ತು ಮಗ ದೇವರಿಗೆ ಅಭಿಷೇಕ, ಪ್ರಾರ್ಥನೆ ಸಲ್ಲಿಸಿದರು. ಅರ್ಚಕರು ಗೌರವಾರ್ಥವಾಗಿ ಗಂಧದ ಪ್ರಸಾದ ನೀಡಿದರು. ಮುಖೇಶ್ ಅಂಬಾನಿ 1.5 ಕೋಟಿ ರೂಪಾಯಿ ದೇಣಿಗೆಯನ್ನು ದೇಗುಲಕ್ಕೆ ಸಮರ್ಪಿಸಿದ್ದಾರೆ.
-
On #Mahashivratri, Mukesh Ambani, Chairman and Managing Director of Reliance Industries Limited, and his son, Akash Ambani, Chairman of Reliance Jio, visited Somnath Mahadev in Gujarat. Mukesh Ambani donated Rs 1.51 crore to the Somnath temple trust. pic.twitter.com/Bl5ny6RrhH
— ANI (@ANI) February 18, 2023 " class="align-text-top noRightClick twitterSection" data="
">On #Mahashivratri, Mukesh Ambani, Chairman and Managing Director of Reliance Industries Limited, and his son, Akash Ambani, Chairman of Reliance Jio, visited Somnath Mahadev in Gujarat. Mukesh Ambani donated Rs 1.51 crore to the Somnath temple trust. pic.twitter.com/Bl5ny6RrhH
— ANI (@ANI) February 18, 2023On #Mahashivratri, Mukesh Ambani, Chairman and Managing Director of Reliance Industries Limited, and his son, Akash Ambani, Chairman of Reliance Jio, visited Somnath Mahadev in Gujarat. Mukesh Ambani donated Rs 1.51 crore to the Somnath temple trust. pic.twitter.com/Bl5ny6RrhH
— ANI (@ANI) February 18, 2023
ಮಧುರೈನಲ್ಲಿ ರಾಷ್ಟ್ರಪತಿ: ಮಹಾಶಿವರಾತ್ರಿ ಹಬ್ಬವನ್ನು ದೇಶದೆಲ್ಲೆಡೆ ಭಕ್ತಿ, ಉಪವಾಸ ಕೈಗೊಂಡು ಸಂಭ್ರಮದಿಂದ ಆಚರಿಸಲಾಗಿದೆ. ಶಿವ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮಿಳುನಾಡಿಗೆ ಆಗಮಿಸಿದ್ದರು. ಕೊಯಮತ್ತೂರಿನ ಇಶಾ ಕೇಂದ್ರದಲ್ಲಿ ನಡೆದ ಉತ್ಸವದಲ್ಲಿ ಅವರು ಭಾಗವಹಿಸಿದರು. ಪ್ರಸಿದ್ಧ ಮಧುರೈ ಮೀನಾಕ್ಷಿ ದೇವಸ್ಥಾನಕ್ಕೂ ಅವರು ಭೇಟಿ ಕೊಟ್ಟರು.
ತ್ರಿನೇಶ್ವರನಿಗೆ ರಾಜ ಪರಿವಾರದ ಪೂಜೆ: ಮೈಸೂರಿನಲ್ಲಿ ಮಹಾಶಿವರಾತ್ರಿ ಅದ್ಧೂರಿಯಾಗಿ ನಡೆದಿದೆ. ವಿಶೇಷವಾಗಿ ನಂಜುಂಡೇಶ್ವರ ಮತ್ತು ತ್ರಿನೇಶ್ವರನ ದರ್ಶನವನ್ನು ಭಕ್ತರು ಪಡೆದರು. ತ್ರಿನೇಶ್ವರ ದೇವರಿಗೆ ಮೈಸೂರಿನ ಒಡೆಯರಾದ ಯದವೀರ್, ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ಹಾವೇರಿ: ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ಸಹಸ್ರಾರು ಭಕ್ತರು
ಚಿಕ್ಕಬಳ್ಳಾಪುರದಲ್ಲಿ ರಜನಿಕಾಂತ್: ತಮಿಳು ನಟ ರಜನಿಕಾಂತ್ ಶನಿವಾರ ತಮ್ಮ ಸಹೋದರನೊಂದಿಗೆ ಚಿಕ್ಕಬಳ್ಳಾಪುರದ ಅವಲಗುರ್ಕಿ ಬಳಿ ಇರುವ ಆದಿಯೋಗಿ ಪ್ರತಿಮೆ ಬಳಿ ತೆರಳಿ ಶಿವನ ದರ್ಶನ ಪಡೆದಿದ್ದಾರೆ. ಕೊಯಮತ್ತೂರಿನಲ್ಲಿರುವ ಅತೀ ದೊಡ್ಡ ಆದಿಯೋಗಿ ಪ್ರತಿಮೆಯ ಮಾದರಿಯಂತೆ ಚಿಕ್ಕಬಳ್ಳಾಪುರದಲ್ಲಿಯೂ 112 ಅಡಿ ಎತ್ತರದಲ್ಲಿ ಶಿವನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.
ಇದನ್ನೂ ಓದಿ: ಪ್ರತಿ ಮಹಾಶಿವರಾತ್ರಿ ಹಬ್ಬಕ್ಕೆ ಉಪವಾಸ ಮಾಡುವ ಬಾಲಿವುಡ್ನ ಹಂಬಲ್ ನಟ