ETV Bharat / bharat

ಸೊಸೆ ಜೊತೆ ತಿರುಪತಿಗೆ ಭೇಟಿ ನೀಡಿದ ಮುಕೇಶ್​ ಅಂಬಾನಿ: 1.5 ಕೋಟಿ ರೂ. ದೇಣಿಗೆ - Reliance Industries Chairman Mukesh Ambani

ಭಾರತದ ಎರಡನೇ ಅತಿದೊಡ್ಡ ಶ್ರೀಮಂತ ಮುಕೇಶ್​ ಅಂಬಾನಿ ಶುಕ್ರವಾರ ತಿರುಪತಿಗೆ ಭೇಟಿ ನೀಡಿದರು. ಬೆಳಗ್ಗೆ ನಡೆದ ಅಭಿಷೇಕ ಹಾಗೂ ನಿಜಪಾದ ದರ್ಶನ ಸೇವೆಯಲ್ಲಿ ಅಂಬಾನಿ ಪಾಲ್ಗೊಂಡಿದ್ದರು

Tirumala
ಸೊಸೆ ಜೊತೆ ತಿರುಪತಿಗೆ ಭೇಟಿ ನೀಡಿದ ಮುಕೇಶ್​ ಅಂಬಾನಿ
author img

By

Published : Sep 16, 2022, 4:06 PM IST

ತಿರುಪತಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಶುಕ್ರವಾರ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿ ವೆಂಕಟೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿ, ವಿಶೇಷ ಪೂಜೆ ಮಾಡಿದರು. ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಪತ್ನಿ ರಾಧಿಕಾ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದರು.

Tirumala
ಸೊಸೆ ಜೊತೆ ತಿರುಪತಿಗೆ ಭೇಟಿ ನೀಡಿದ ಮುಕೇಶ್​ ಅಂಬಾನಿ

ಶುಕ್ರವಾರ ಬೆಳಗ್ಗೆ ನಡೆದ ಅಭಿಷೇಕ ಹಾಗೂ ನಿಜಪಾದ ದರ್ಶನ ಸೇವೆಯಲ್ಲಿ ಅಂಬಾನಿ ಕುಟುಂಬ ಸಮೇತ ಪಾಲ್ಗೊಂಡಿದ್ದರು. ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕಾರ್ಯ ನಿರ್ವಹಣಾಧಿಕಾರಿ ಧರ್ಮಾ ರೆಡ್ಡಿ ಅವರು ಅಂಬಾನಿ ಅವರನ್ನು ಸ್ವಾಗತಿಸಿ,ದರ್ಶನದ ವ್ಯವಸ್ಥೆ ಮಾಡಿದರು.

ದರ್ಶನದ ನಂತರ ರಂಗನಾಯಕ ಮಂಟಪದಲ್ಲಿ ವಿದ್ವಾಂಸರಿಂದ ವೇದಾಶೀರ್ವಾದ ನಡೆಯಿತು. ಈ ಸಂದರ್ಭದಲ್ಲಿ ಮುಕೇಶ್ ಅಂಬಾನಿ ತಿರುಮಲಕ್ಕೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ. ತಿರುಮಲದಲ್ಲಿರುವ ದೇವಾಲಯವು ಪ್ರತಿವರ್ಷ ಅಭಿವೃದ್ಧಿ ಹೊಂದುತ್ತಿದೆ ಮತ್ತು ಸುಧಾರಿಸುತ್ತಿದೆ ಎಂದು ಅವರು ಹೇಳಿದರು. ಮುಖೇಶ್ ಅಂಬಾನಿ ಅವರು ತಿರುಮಲ ಶ್ರೀಗಳಿಗೆ ರೂ.1.5 ಕೋಟಿ ದೇಣಿಗೆಯನ್ನು ನೀಡಿದರು.

ಇದನ್ನೂ ಓದಿ: Olive Trees to Ambani: ಆಂಧ್ರಪ್ರದೇಶದಿಂದ ಅಂಬಾನಿ ಮನೆಗೆ ಆಲಿವ್ ಮರ.. ಯಾಕೆ ಅಂತೀರಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.