ETV Bharat / bharat

ಸಾಲದ ಸುಳಿಗೆ ಸಿಲುಕಿದ್ದ ಮಿಸ್ಟರ್ ಇಂಡಿಯಾ ಪುರಸ್ಕೃತ: ದರೋಡೆ ಆರೋಪದಡಿ ಸೆಲೆಬ್ರಿಟಿ ಅರೆಸ್ಟ್​ - Mohammed Faizal, 22 year old B.Tech graduate from Mannadi area of Chennai was arrested by cops over chain snatching

ಫೈಝಲ್ ತನ್ನ ಪದವಿಯನ್ನು 2020 ರಲ್ಲಿ ಪೂರ್ಣಗೊಳಿಸಿದ್ದು, ಬಾಡಿಬಿಲ್ಡರ್ ಆಗಿದ್ದರು. 2019 ರಲ್ಲಿ MR ಇಂಡಿಯಾ ಪ್ರಶಸ್ತಿಯನ್ನೂ ಗೆದ್ದಿದ್ದರು. ಪದವಿಯ ನಂತರ ಮೊಬೈಲ್ ಫೋನ್ ಮರು ಮಾರಾಟ ವ್ಯವಹಾರ ಆರಂಭಿಸಿದ್ದರು. ಇದು ನಷ್ಟಕ್ಕೊಳಗಾದ ನಂತರ ಈ ರೀತಿಯ ದರೋಡೆಗೆ ಯತ್ನಿಸಿ ಈಗ ಕಂಬಿ ಹಿಂದೆ ಸರಿದಿದ್ದಾರೆ.

ಸಾಲದ ಸುಳಿಗೆ ಸಿಲುಕಿದ್ದ ಮಿಸ್ಟರ್ ಇಂಡಿಯಾ ಪ್ರಶಸ್ತಿ ವಿಜೇತ

author img

By

Published : Mar 21, 2022, 3:35 PM IST

ಚೆನ್ನೈ: ಇಲ್ಲಿನ ಮನ್ನಾಡಿ ಪ್ರದೇಶದ 22 ವರ್ಷದ ಬಿ.ಟೆಕ್ ಪದವೀಧರ, ಮಾಜಿ ಮಿಸ್ಟರ್​ ಇಂಡಿಯಾ ಮೊಹಮ್ಮದ್ ಫೈಝಲ್ ಎಂಬುವರು ಸರಗಳ್ಳತನ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾರೆ.

ಮಾರ್ಚ್ 17 ರಂದು ರತ್ನಾ ದೇವಿ (58) ಅವರಿಂದ ಸರಗಳ್ಳತನ ಮಾಡಲಾಗಿತ್ತು. ಇವರು ನೀಡಿದ ದೂರಿನ ಆಧಾರದ ಮೇಲೆ ಫೈಝಲ್​ ಬಂಧನವಾಗಿದೆ. 17 ರಂದು ರತ್ನಾದೇವಿ ಅವರ 10 ಗ್ರಾಂ ಚಿನ್ನದ ಸರವನ್ನು ಫೈಝಲ್ ದೋಚಿದ್ದನಂತೆ. ಸಿಸಿಟಿವಿ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಫೈಝಲ್ ತನ್ನ ಪದವಿಯನ್ನು 2020 ರಲ್ಲಿ ಪೂರ್ಣಗೊಳಿಸಿದ್ದು, ಬಾಡಿಬಿಲ್ಡರ್ ಆಗಿದ್ದರು. 2019 ರಲ್ಲಿ MR ಇಂಡಿಯಾ ಪ್ರಶಸ್ತಿಯನ್ನೂ ಗೆದ್ದಿದ್ದರು. ಪದವಿಯ ನಂತರ ಮೊಬೈಲ್ ಫೋನ್ ಮರು ಮಾರಾಟ ವ್ಯವಹಾರ ಆರಂಭಿಸಿದ್ದರು. ಆದರೆ ಸಾಂಕ್ರಾಮಿಕ ಸಮಯದಲ್ಲಿ ನಷ್ಟವನ್ನು ಅನುಭವಿಸಿ, ಸಾಲಗಾರರಿಗೆ ನೀಡಬೇಕಾದ ಹಣವನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ತಮ್ಮ ಹಣಕಾಸಿನ ತೊಂದರೆಗಳನ್ನು ನಿವಾರಿಸಲು ದರೋಡೆ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ : ಪಾವಗಡ ಬಸ್ ದುರಂತ.. ಈ ಮಾರ್ಗದಲ್ಲಿ ಖಾಸಗಿ ಬಸ್ ಪರವಾನಿಗೆ ರದ್ದು, KSRTC ಬಸ್ ಸಂಚಾರ : ಸಚಿವ ಶ್ರೀರಾಮುಲು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.