ETV Bharat / bharat

ಮಧ್ಯಪ್ರದೇಶದ ಪನ್ನಾದಲ್ಲಿ ಮಹಿಳೆಗೆ ಸಿಕ್ತು ರತ್ನ ಖಚಿತ ವಜ್ರ.. ರಾತ್ರೋರಾತ್ರಿ ಮಿಲಿಯೇನರ್​ ಆದ ಬಡ ಕುಟುಂಬ

author img

By

Published : May 25, 2022, 3:38 PM IST

ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಬಡ ದಂಪತಿಗಳ ಭವಿಷ್ಯ ರಾತ್ರೋರಾತ್ರಿ ಬದಲಾಗಿದೆ. ಸರ್ಕಾರದಿಂದ ಗುತ್ತಿಗೆ ಪಡೆದಿರುವ ವಜ್ರದ ಗಣಿಯಲ್ಲಿ ಉತ್ಖನನ ವೇಳೆ ರತ್ನ ಗುಣಮಟ್ಟದ ವಜ್ರ ಪತ್ತೆಯಾಗಿದೆ. ಇದರ ಅಂದಾಜು ಮೊತ್ತ 8 ರಿಂದ 10 ಲಕ್ಷ ರೂಪಾಯಿ ಆಗಿದೆ. ಇದು ಆ ಕುಟುಂಬವನ್ನು ರಾತ್ರೋರಾತ್ರಿ ಸಿರಿವಂತರನ್ನಾಗಿ ಮಾಡಿದೆ.

mp-woman-find-james-quality
ರಾತ್ರೋರಾತ್ರಿ ಮಿಲಿಯೇನರ್​ ಆದ ಬಡ ಕುಟುಂಬ

ಪನ್ನಾ(ಮಧ್ಯಪ್ರದೇಶ): ಮಧ್ಯಪ್ರದೇಶದ ಪನ್ನಾವನ್ನು ವಜ್ರಗಳ ನಗರ ಎಂದೇ ಕರೆಯುತ್ತಾರೆ. ಇಲ್ಲಿ ವಜ್ರದ ಗಣಿಗಾರಿಕೆ ನಡೆಯುತ್ತದೆ. ಹೀಗೆ ವಜ್ರದ ಗಣಿ ನಡೆಸುತ್ತಿದ್ದ ಮಹಿಳೆಗೆ ವಜ್ರ ದೊರಕಿದ್ದು, ರಾತ್ರೋರಾತ್ರಿ ಸಿರಿವಂತಿಕೆ ಪಡೆದಿದ್ದಾಳೆ.

ಪನ್ನಾದ ಸಮೀಪವಿರುವ ಇಂತ್ವಕಲಾ ಗ್ರಾಮಕ್ಕೆ ಸೇರಿದ ಚಮೇಲಿ ರಾಣಿ ಎಂಬಾಕೆಗೆ ವಜ್ರ ದೊರಕಿದೆ. ಬಡ ಕುಟುಂಬದ ಈಕೆ ಗಣಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಈ ವೇಳೆ, ಗಣಿಯಲ್ಲಿ ಆಕೆಗೆ ಹೊಳೆಯುವ ಗಾಜಿನ ಮಾದರಿಯ ವಸ್ತುವೊಂದು ಕಂಡಿದೆ. ಇದನ್ನು ಪರೀಕ್ಷಿಸಿದಾಗ ಇದು ಗಾಜಲ್ಲ, ವಜ್ರ ಎಂದು ಗೊತ್ತಾಗಿದೆ. ವಜ್ರ ಎಂದು ತಿಳಿದೊಡನೆ ಮಹಿಳೆಯ ಸಂತೋಷಕ್ಕೆ ಪಾರವೇ ಇರಲಿಲ್ಲ.

ಪತ್ತೆಯಾದ ವಜ್ರವು 2.08 ಕ್ಯಾರೆಟ್ ಹೊಂದಿದ್ದು, ಅಂದಾಜು 8 ರಿಂದ 10 ಲಕ್ಷ ರೂಪಾಯಿ ಬೆಲೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನು ಆಕೆ ಸದ್ಯಕ್ಕೆ ವಜ್ರದ ಕಚೇರಿಯಲ್ಲಿ ತನ್ನ ಗಂಡನ ಹೆಸರಿನಲ್ಲಿ ಠೇವಣಿ ಇಟ್ಟಿದ್ದಾರೆ. ವಜ್ರ ಹರಾಜಿನಿಂದ ಬಂದ ಹಣದಲ್ಲಿ ಪನ್ನಾದಲ್ಲಿ ಭೂಮಿ ಖರೀದಿಸಿ ತಮ್ಮ ಕನಸಿನ ಮನೆಯನ್ನು ನಿರ್ಮಿಸುವುದಾಗಿ ತಿಳಿಸಿದ್ದಾರೆ.

ಓದಿ: 'ಕೈ' ಬಿಟ್ಟು ಕಪಿಲ್ ಸಿಬಲ್ 'ಸೈಕಲ್' ಬ್ಯಾಲೆನ್ಸ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.