ರತ್ಲಾಮ್(ಮಧ್ಯಪ್ರದೇಶ): ಸರ್ಕಾರಿ ಆಸ್ಪತ್ರೆಗಳ ಎಡವಟ್ಟು ಪ್ರತಿದಿನ ಹೊರಬರುತ್ತಲೇ ಇರುತ್ತವೆ. ಸದ್ಯ ಅಂತಹದೊಂದು ಘಟನೆ ಮಧ್ಯಪ್ರದೇಶದ ರತ್ಲಾಮ್ನಲ್ಲಿ ಬೆಳಕಿಗೆ ಬಂದಿದೆ. ವೈದ್ಯರು ರಜೆ ತೆಗೆದುಕೊಂಡಿದ್ದರಿಂದ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿರುವ ಸಿಬ್ಬಂದಿ ಕೂಡ ಮನೆಗೆ ತೆರಳಿದ್ದರು. ಈ ವೇಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೋರ್ವಳು ಅಲ್ಲಿಗೆ ಆಗಮಿಸಿ, ಆಸ್ಪತ್ರೆಯ ಕಾಂಪೌಂಡ್ ಪಕ್ಕದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ಮಧ್ಯಪ್ರದೇಶದ ರತ್ಲಾಮ್ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ವೈದ್ಯರು ರಜೆ ತೆಗೆದುಕೊಂಡಿದ್ದರಿಂದ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿರುವ ಸಿಬ್ಬಂದಿ ಮನೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಗರ್ಭಿಣಿಯೋರ್ವಳು ಅಲ್ಲಿಗೆ ಬಂದಿದ್ದು, ಮಗುವಿಗೆ ಜನ್ಮ ನೀಡಿದ್ದಾರೆ. ರತ್ಲಾಮ್ ಜಿಲ್ಲೆಯ ಬುಡಕಟ್ಟು ಪ್ರದೇಶದ ಕುಂದನ್‌ಪುರದ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾರೆಂದು ತಿಳಿದು ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-
शिवराज जी यह देखो
— HarshVijay Prabhudayal Gehlot (@MLAHarshvijay) August 11, 2022 " class="align-text-top noRightClick twitterSection" data="
आपके स्वर्णिम प्रदेश की कैसी तस्वीर
बाजना के शा. उप स्वास्थ्य केंद्र कुंदनपुर में ताला लगा हुआ है अस्पताल के बाहर इस देश का भविष्य जन्म ले रहा है@ChouhanShivraj जी आपकी सरकार में स्वास्थ्य व्यवस्था की बदौलत यह तस्वीर आदिवासी महिला की इज्जत तार तार कर रही है pic.twitter.com/ZDU1J5lpRw
">शिवराज जी यह देखो
— HarshVijay Prabhudayal Gehlot (@MLAHarshvijay) August 11, 2022
आपके स्वर्णिम प्रदेश की कैसी तस्वीर
बाजना के शा. उप स्वास्थ्य केंद्र कुंदनपुर में ताला लगा हुआ है अस्पताल के बाहर इस देश का भविष्य जन्म ले रहा है@ChouhanShivraj जी आपकी सरकार में स्वास्थ्य व्यवस्था की बदौलत यह तस्वीर आदिवासी महिला की इज्जत तार तार कर रही है pic.twitter.com/ZDU1J5lpRwशिवराज जी यह देखो
— HarshVijay Prabhudayal Gehlot (@MLAHarshvijay) August 11, 2022
आपके स्वर्णिम प्रदेश की कैसी तस्वीर
बाजना के शा. उप स्वास्थ्य केंद्र कुंदनपुर में ताला लगा हुआ है अस्पताल के बाहर इस देश का भविष्य जन्म ले रहा है@ChouhanShivraj जी आपकी सरकार में स्वास्थ्य व्यवस्था की बदौलत यह तस्वीर आदिवासी महिला की इज्जत तार तार कर रही है pic.twitter.com/ZDU1J5lpRw
ಇದನ್ನೂ ಓದಿ: ರಸ್ತೆ ಸಮಸ್ಯೆ.. 3 ಕಿ ಮೀ ಡೋಲಿಯಲ್ಲಿ ಗರ್ಭಿಣಿಯ ಹೊತ್ತುಕೊಂಡು ಬಂದ ಗ್ರಾಮಸ್ಥರು
ಘಟನೆ ಬೆನ್ನಲ್ಲೇ ಸ್ಥಳಕ್ಕಾಗಮಿಸಿರುವ ವೈದ್ಯಕೀಯ ಸಿಬ್ಬಂದಿ ಮಹಿಳೆ ಹಾಗೂ ಮಗುವನ್ನು ಬೇರೊಂದು ಜಾಗಕ್ಕೆ ಸ್ಥಳಾಂತರ ಮಾಡಿ, ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಸಹ ನಡೆಸಿದ್ದಾರೆಂದು ಹೇಳಲಾಗ್ತಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆ ಬಿಎಂಒ ಡಾ. ಜೈಸ್ವಾಲ್ ಅವರನ್ನು ಪ್ರಶ್ನೆ ಮಾಡಿದಾಗ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದು, ಜಿಲ್ಲಾ ವೈದ್ಯಾಧಿಕಾರಿ ಕಡೆ ಬೊಟ್ಟು ಮಾಡಿದ್ದಾರೆ. ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ.