ETV Bharat / bharat

ದೇಶದಲ್ಲಿ ತಿಂಗಳಿಗೊಮ್ಮೆ ಚುನಾವಣೆ ನಡೆಯಲಿ: ಬೆಲೆ ಏರಿಕೆ ಬಗ್ಗೆ ಸಂಸದೆ ಸುಪ್ರಿಯಾ ಸುಳೆ ವ್ಯಂಗ್ಯ

author img

By

Published : Mar 23, 2022, 4:40 PM IST

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ಪೆಟ್ರೋಲ್​, ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದ್ದು, ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಎನ್​​ಸಿಪಿ ಸಂಸದೆ ಸುಪ್ರಿಯಾ ಸುಳೆ ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದರು.

MP Supriya Sule jibe at BJP
MP Supriya Sule jibe at BJP

ನವದೆಹಲಿ: ಪಂಚರಾಜ್ಯ ಚುನಾವಣೆ ಘೋಷಣೆಯಾದಾಗಿನಿಂದಲೂ ದೇಶದಲ್ಲಿ ಪೆಟ್ರೋಲ್​, ಡೀಸೆಲ್​​, ಎಲ್​ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಕಂಡು ಬಂದಿರಲಿಲ್ಲ. ಆದರೆ, ಚುನಾವಣಾ ಫಲಿತಾಂಶ ಬಹಿರಂಗಗೊಳ್ಳುತ್ತಿದ್ದಂತೆ ತೈಲ ಬೆಲೆ, ಅಡುಗೆ ಅನಿಲ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ವಿಚಾರವಾಗಿ ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿ, ಸಭಾತ್ಯಾಗ ನಡೆಸಿದವು.

ಲೋಕಸಭೆಯಲ್ಲಿ ಮಾತನಾಡಿರುವ ಎನ್​​ಸಿಪಿ ಸಂಸದೆ ಸುಪ್ರಿಯಾ ಸುಳೆ, ಚುನಾವಣೆಗಳು ಘೋಷಣೆಯಾದಾಗ ಮಾತ್ರ ಬೆಲೆಗಳು ನಿಯಂತ್ರಣದಲ್ಲಿರುತ್ತವೆ. ಪೆಟ್ರೋಲ್​, ಡೀಸೆಲ್​ ಮತ್ತು ಎಲ್​​ಪಿಜಿ ಬೆಲೆ ಏರಿಕೆಯಾಗದಂತೆ ಪ್ರತಿ ತಿಂಗಳಿಗೊಮ್ಮೆ ಚುನಾವಣೆ ನಡೆಯಲಿ ಎಂದು ವ್ಯಂಗ್ಯವಾಡಿದರು. ಶೂನ್ಯ ವೇಳೆಯಲ್ಲಿ ಮಾತನಾಡಿರುವ ಸಂಸದೆ, ಪ್ರತಿ ತಿಂಗಳು ಚುನಾವಣೆ ನಡೆದರೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದು ತಪ್ಪಲಿದೆ. ಜೊತೆಗೆ ಎಲ್ಲರೂ ನೆಮ್ಮದಿಯಿಂದ ಇರಬಹುದು ಎಂದರು.

ಇದನ್ನೂ ಓದಿ: ಡಿಸ್ಚಾರ್ಜ್‌ ಆದ ಕೆಲವೇ ಗಂಟೆಗಳಲ್ಲಿ ಮತ್ತೆ ಆಸ್ಪತ್ರೆ ಸೇರಿದ ಲಾಲೂ ಪ್ರಸಾದ್‌

ಇಂಧನ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ್ದು ಕಾಂಗ್ರೆಸ್​, ತೃಣಮುಲ ಕಾಂಗ್ರೆಸ್​, ಡಿಎಂಕೆ, ಎನ್​​ಸಿಪಿ ಮತ್ತು ಎಡಪಕ್ಷಗಳ ಸದಸ್ಯರು ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್​, ಗೋವಾ ಮತ್ತು ಮಣಿಪುರ ಚುನಾವಣಾ ಫಲಿತಾಂಶ ಬಹಿರಂಗಗೊಂಡ ಕೆಲವೇ ದಿನಗಳ ನಂತರ ದೇಶದಲ್ಲಿ ಬೆಲೆ ಏರಿಕೆಯಾಗ್ತಿದೆ.

ರಷ್ಯಾ-ಉಕ್ರೇನ್​ ಸಂಘರ್ಷದಿಂದಾಗಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್​​ಗೆ 120 ಡಾಲರ್​​ ಆಗಿದ್ದು, ಇಂಧನ ಕಂಪನಿಗಳು ಇದೀಗ ಬೆಲೆ ಏರಿಸಲು ಶುರು ಮಾಡಿವೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 110 ರೂ. ಗಡಿ ದಾಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.