ETV Bharat / bharat

ಅಂಬಾನಿ ಒಡೆತನದ ಮೃಗಾಲಯಕ್ಕೆ ವನ್ಯಜೀವಿಗಳ ಸ್ಥಳಾಂತರದ ಬಗ್ಗೆ ಹೇಳಿಕೆ: ವಿಧಾನಸಭೆಯಿಂದ ಕಾಂಗ್ರೆಸ್​ ಶಾಸಕ ಅಮಾನತು - ಮಧ್ಯಪ್ರದೇಶದ ಕಾಂಗ್ರೆಸ್​ ಶಾಸಕ

ಮುಖೇಶ್ ಅಂಬಾನಿ ಮಾಲೀಕತ್ವದ ಮೃಗಾಲಯಕ್ಕೆ ವನ್ಯಜೀವಿಗಳ ರವಾನಿಸುವ ಬಗ್ಗೆ ಹೇಳಿಕೆ ಸಂಬಂಧ ಮಧ್ಯಪ್ರದೇಶದ ಕಾಂಗ್ರೆಸ್​ ಶಾಸಕನನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ.

mp-speaker-suspends-cong-mp-jitu-patwari-over-remarks-on-transfer-of-animals-to-mukesh-ambani-zoo
ಅಂಬಾನಿ ಒಡೆತನದ ಮೃಗಾಲಯಕ್ಕೆ ವನ್ಯಜೀವಿಗಳ ಸ್ಥಳಾಂತರದ ಬಗ್ಗೆ ಹೇಳಿಕೆ: ವಿಧಾನಸಭೆಯಿಂದ ಕಾಂಗ್ರೆಸ್​ ಶಾಸಕ ಅಮಾನತು
author img

By

Published : Mar 3, 2023, 6:56 PM IST

ಭೋಪಾಲ್ (ಮಧ್ಯ ಪ್ರದೇಶ): ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮಾಲೀಕತ್ವದ ಮೃಗಾಲಯಕ್ಕೆ ಹುಲಿ ಮತ್ತು ಸಿಂಹಗಳನ್ನು ಸ್ಥಳಾಂತರ ಕುರಿತಾಗಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಕಾಂಗ್ರೆಸ್​ ಶಾಸಕ, ಮಾಜಿ ಸಚಿವ ಜಿತು ಪಟ್ವಾರಿ ಅವರನ್ನು ರಾಜ್ಯ ವಿಧಾನಸಭೆಯ ಅಧಿವೇಶನದಿಂದ ಅಮಾನತು ಮಾಡಲಾಗಿದೆ.

ರಾಜ್ಯದ ಶಾಸಕಾಂಗ ವ್ಯವಹಾರಗಳ ಸಚಿವ ನರೋತ್ತಮ್ ಮಿಶ್ರಾ ಮಂಡಿಸಿದ ನಿರ್ಣಯದ ನಂತರ ಜಿತು ಪಟ್ವಾರಿ ಅವರನ್ನು ವಿಧಾನಸಭೆ ಸ್ಪೀಕರ್ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಾಜ್ಯ ಬಜೆಟ್ ಅಧಿವೇಶನದ ಸಂಪೂರ್ಣ ಅವಧಿಯವರೆಗೆ ಕಾಂಗ್ರೆಸ್​ ಶಾಸಕನಿಗೆ ದೂರ ಇರಿಸಲಾಗಿದೆ.

ಇದನ್ನೂ ಓದಿ: ಮುಖೇಶ್​ ಅಂಬಾನಿಗೆ ವಿದೇಶದಲ್ಲೂ Z+ ಭದ್ರತೆ ನೀಡಲು ಸುಪ್ರೀಂ ಸೂಚನೆ

ಏನಿದು ವಿವಾದ?: ದೇಶದ ಖ್ಯಾತ ಉದ್ಯಮಿಯಾದ ಮುಖೇಶ್ ಅಂಬಾನಿ ಗುಜರಾತ್‌ನಲ್ಲಿ ತಮ್ಮ ಒಡೆತನದ ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್ ಸೊಸೈಟಿ (ಜಿಝಡ್‌ಆರ್‌ಆರ್‌ಸಿ) ಎಂಬ ಮೃಗಾಲಯ ಹೊಂದಿದ್ದಾರೆ. ಈ ಮೃಗಾಲಯಕ್ಕೆ ಮಧ್ಯಪ್ರದೇಶದ ಭೋಪಾಲ್ ಮತ್ತು ಇಂದೋರ್‌ನಿಂದ ಸಿಂಹಗಳು ಮತ್ತು ಹುಲಿಗಳನ್ನು ರಾಜ್ಯ ಸರ್ಕಾರ ರವಾನಿಸಿದೆ.

ಗುಜರಾತ್‌ಗೆ ಪ್ರಾಣಿಗಳ ವರ್ಗಾವಣೆಯ ಕುರಿತು ಕುರಿತು ಪ್ರತಿಕ್ರಿಯಿಸಿದ್ದ ಕಾಂಗ್ರೆಸ್​ ನಾಯಕ ಪಟ್ವಾರಿ, ಮಧ್ಯಪ್ರದೇಶ ಸರ್ಕಾರವು ಸಿಂಹ ಮತ್ತು ಹುಲಿಗಳನ್ನು ಮುಖೇಶ್ ಅಂಬಾನಿ ಒಡೆತನದ ಮೃಗಾಲಯಕ್ಕೆ ಉಡುಗೊರೆಯಾಗಿ ನೀಡಿದೆ. ಪ್ರತಿಯಾಗಿ ಹಲ್ಲಿಗಳು, ಗಿಳಿಗಳು ಮತ್ತು ಇತರ ಪಕ್ಷಿಗಳನ್ನು ಸರ್ಕಾರ ಪಡೆದುಕೊಂಡಿದೆ ಎಂದು ಹೇಳಿಕೆ ನೀಡಿದ್ದರು. ಇದು ವಿವಾದ ಕಿಡಿಯನ್ನು ಹೊತ್ತಿಸಿತ್ತು.

ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚೀತಾಗಳು.. ಮೋದಿಗೆ ಧನ್ಯವಾದ ತಿಳಿಸಿದ ಸಿಎಂ

ಅಲ್ಲದೇ, ಜಿತು ಪಟ್ವಾರಿ ಹೇಳಿಕೆಯು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ಮಾತಿನ ಚಕಮಕಿಗೂ ಕಾರಣವಾಗಿತ್ತು. ಅಲ್ಲದೇ, ಶಾಸಕರ ಆರೋಪದ ಬಗ್ಗೆ ಸಚಿವ ನರೋತ್ತಮ್ ಮಿಶ್ರಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡುವಂತೆ ಪಟ್ವಾರಿಗೆ ಕೇಳಿದ್ದರು. ನಂತರದಲ್ಲಿ ಶಾಸಕ ಪಟ್ವಾರಿ ವಿರುದ್ಧ ಸದನದಲ್ಲಿ ಪ್ರಸ್ತಾವನೆ ಮಂಡಿಸಿದ್ದರು. ಇದರ ಆಧಾರದ ಮೇಲೆ ವಿಧಾನಸಭೆಯ ಅಧಿವೇಶನದ ಉಳಿದ ಅವಧಿಯಿಂದ ಅಮಾನತುಗೊಳಿಸಲಾಗಿದೆ.

ಯಾವೆಲ್ಲ ಪ್ರಾಣಿಗಳ ರವಾನೆ?: ಗುಜರಾತ್‌ನ ಜಾಮ್‌ನಗರದಲ್ಲಿರುವ ಅಂಬಾನಿ ಮಾಲೀಕತ್ವದ ಜಿಝಡ್‌ಆರ್‌ಆರ್‌ಸಿ ಮೃಗಾಲಯ ಸ್ಥಾಪಿಸಲಾಗಿದೆ. ಮಧ್ಯಪ್ರದೇಶದ ವನ ವಿಹಾರದಿಂದ ಪಂಚಮ್ ಎಂಬ ಮೂರೂವರೆ ವರ್ಷದ ಹುಲಿಯನ್ನು ಸ್ಥಳಾಂತರ ಮಾಡಲಾಗಿತ್ತು. ಅಲ್ಲದೇ, ಉತ್ತರಾಖಂಡದ ನೈನಿತಾಲ್‌ನಲ್ಲಿರುವ ಗೋವಿಂದ್ ಬಲ್ಲಭ್ ಪಂತ್ ಮೃಗಾಲಯದ ಎರಡು ಹುಲಿಗಳನ್ನೂ ಅಂಬಾನಿ ಒಡೆತನದ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ.

280 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಮೃಗಾಲಯದಲ್ಲಿ ಸದ್ಯ ಎರಡು ಗಂಡು ಮತ್ತು ನಾಲ್ಕು ಹೆಣ್ಣು ಏಷ್ಯಾಟಿಕ್ ಸಿಂಹಗಳು, ಎರಡು ಗಂಡು ಮತ್ತು ಮೂರು ಹೆಣ್ಣು ಘರಿಯಾಲ್‌ಗಳು, ಎರಡು ಗಂಡು ಮತ್ತು ಆರು ಹೆಣ್ಣು ಬೆಂಗಾಲ್ ನರಿಗಳು ಸೇರಿದಂತೆ ಇತರ ವನ್ಯಜೀವಿಗಳು ಇವೆ. ಅಲ್ಲದೇ, ಆಫ್ರಿಕನ್ ಚೀತಾ, ಜೀಬ್ರಾ, ಆಸ್ಟ್ರಿಚ್, ಆಫ್ರಿಕನ್ ಆನೆಗಳನ್ನೂ ಸಾಕುವ ಉದ್ದೇಶವನ್ನು ಹೊಂದಲಾಗಿದೆ.

ಇದನ್ನೂ ಓದಿ: ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಶಾಸ್ತ್ರೀಯ ಉದ್ಯಾನವನಕ್ಕೆ ಬಂದ್ರು ಹೊಸ ಅತಿಥಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.