ETV Bharat / bharat

ಸ್ವಚ್ಛತೆಯ ಸಂದೇಶ ನೀಡಲು ವಿದ್ಯಾರ್ಥಿ ಅರೆಬೆತ್ತಲೆ ನಿಲ್ಲಿಸಿದ ಶಿಕ್ಷಕ - ಈಟಿವಿ ಭಾರತ್​ ಕರ್ನಾಟಕ

ವಿದ್ಯಾರ್ಥಿಗಳಿಗೆ ಸ್ವಚ್ಛತೆ ಪಾಠ ಹೇಳಲು ಹೋಗಿ ಶಿಕ್ಷಕನ ಎಡವಟ್ಟು, ವಿದ್ಯಾರ್ಥಿಯನ್ನು ಅರೆಬೆತ್ತಲಾಗಿ ನಿಲ್ಲಿಸಿದ್ದಕ್ಕೆ ಶಿಕ್ಷಕನ ವಿರುದ್ಧ ಗ್ರಾಮಸ್ಥರ ದೂರು.

Message of cleanliness
ಸ್ವಚ್ಛತೆಯ ಸಂದೇಶ ನೀಡಲು ವಿದ್ಯಾರ್ಥಿಯನ್ನು ಅರೆಬೆತ್ತಲೆ ನಿಲ್ಲಿಸಿದ ಶಿಕ್ಷಕ
author img

By

Published : Sep 24, 2022, 8:54 PM IST

ಶಹದೋಲ್(ಮಧ್ಯ ಪ್ರದೇಶ): ಸ್ವಚ್ಛತೆಯ ಸಂದೇಶ ನೀಡಲು ಶಿಕ್ಷಕ ಬುಡಕಟ್ಟು ಜನಾಂಗದ ವಿದ್ಯಾರ್ಥಿನಿಯೊಬ್ಬಳ ಬಟ್ಟೆ ಕಳಚಿ ಅರೆಬೆತ್ತಲೆಯಾಗಿ ನಿಲ್ಲುವಂತೆ ಮಾಡಿದ್ದಾನೆ. ಕೊಳೆಯಾದ ಬಟ್ಟೆ ಧರಿಸಿ ಬಂದಿದ್ದ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕ ತೊಳೆದು ಶಾಲಾ ಮಕ್ಕಳಿಗೆ ಸ್ವಚ್ಛತೆಯ ಪಾಠ ಮಾಡಿದ್ದಾನೆ. ಈ ಬಗ್ಗೆ ತಮ್ಮ ವಿಭಾಗದ ಗ್ರೂಪ್​ನಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶಾಹದೋಲ್ ಜಿಲ್ಲೆಯ ಜೈಸಿಂಗ್ ನಗರದ ಜನಶಿಕ್ಷಾ ಕೇಂದ್ರ ಪೌರಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ಓದುತ್ತಿರುವ ಬಾಲಕಿ ಕೊಳಕು ಸಮವಸ್ತ್ರ ಧರಿಸಿ ಶಾಲೆಗೆ ಬಂದಿದ್ದಳು. ಇದನ್ನು ಕಂಡ ಶಿಕ್ಷಕ ಬಟ್ಟೆ ಬಿಚ್ಚಿಸಿ ಅದನ್ನು ತೊಳೆದು ಒಣಗಿದ ನಂತರ ತರಗತಿಗೆ ಬಿಟ್ಟು ಕೊಂಡಿದ್ದಾರೆ. ಬಟ್ಟೆ ತೊಳೆದು ಒಣಗುವವರೆಗೂ ವಿದ್ಯಾರ್ಥಿಯನ್ನು ಅರೆಬೆತ್ತಲೆಯಾಗಿ ನಿಲ್ಲಿಸಿದ್ದಾರೆ.

ಈ ಬಗ್ಗೆ ಶಿಕ್ಷಕ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದು, ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

mp-shahdol-teacher-got-off-girl-student-dirty-uniform-she-sat-half-naked-shared-photo-of-washing
ಸ್ವಚ್ಛತೆಯ ಸಂದೇಶ ನೀಡಲು ವಿದ್ಯಾರ್ಥಿಯನ್ನು ಅರೆಬೆತ್ತಲೆ ನಿಲ್ಲಿಸಿದ ಶಿಕ್ಷಕ

ಇದ್ನನೂ ಓದಿ : ಕ್ರಿಮಿನಲ್ ಸಿಂಡಿಕೇಟ್, ಭಯೋತ್ಪಾದಕ ಕೃತ್ಯಕ್ಕೆ ಸಂಚು: ಮೂವರು ಗ್ಯಾಂಗ್​ಸ್ಟರ್​ಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.