ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಬ್ರಿಜ್‌ಪುರ ಮೂಲದ ರೈತರಿಗೆ ಅದೃಷ್ಟ ಖುಲಾಯಿಸಿದೆ. ಸರ್ಕಾರದಿಂದ ಬಾಡಿಗೆ ಮೇಲೆ ಪಡೆದ ಲಾಲ್ಕಿಧೇರಿ ಪ್ರದೇಶದ ವಜ್ರದ ಗಣಿಯಲ್ಲಿ 3.21 ಕ್ಯಾರೆಟ್ ವಜ್ರ ದೊರೆತಿದೆ. ಇದನ್ನು ಪನ್ನಾದಲ್ಲಿರುವ ಸರ್ಕಾರಿ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿರುವ ರೈತ ರಾಜೇಂದ್ರ ಗುಪ್ತಾ, ಈ ವಜ್ರದಿಂದ ಪಡೆದುಕೊಳ್ಳುವ ಹಣವನ್ನು ಗಣಿಗಾರಿಕೆಯಲ್ಲಿ ತೊಡಗಿದ್ದ ಏಳು ಮಂದಿ ರೈತರು ಸಮಾನವಾಗಿ ಹಂಚಿಕೊಳ್ಳಲಿದ್ದೇವೆ. ವಜ್ರ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಭಾವಿಸುತ್ತೇವೆ. ಇದರಿಂದ ಬರುವ ಹಣದಲ್ಲಿ ಉದ್ಯಮ ಆರಂಭಿಸುವ ಯೋಜನೆ ಹಾಕಿಕೊಂಡಿದ್ದೇನೆಂದು ರೈತನೋರ್ವ ತಿಳಿಸಿದ್ದಾನೆ. ರತ್ನಶಾಸ್ತ್ರಜ್ಞರು ನೀಡಿದ ಮಾಹಿತಿ ಪ್ರಕಾರ, ಉತ್ಖನನದ ವೇಳೆ ದೊರೆತ ಈ ವಜ್ರವು ಉತ್ಕೃಷ್ಟ ದರ್ಜೆಯದಾಗಿದ್ದು, ಹೆಚ್ಚಿನ ಮೌಲ್ಯವನ್ನು ಹೊಂದಿದೆ ಎಂದಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಮಿಂಚುತ್ತಿದೆ ಗುಜರಾತ್ನಲ್ಲಿ ತಯಾರಾದ ವಿಶ್ವದ ಅತಿ ದೊಡ್ಡ ವಜ್ರ
ಸರ್ಕಾರದ ನಿಯಮಗಳ ಪ್ರಕಾರ, ಸರ್ಕಾರೇತರ ಸಂಸ್ಥೆಗಳ ಒಡೆತನದ ಗಣಿಗಳಲ್ಲಿ ಅಥವಾ ಹೊಲಗಳಲ್ಲಿ ವಜ್ರಗಳು ಅಥವಾ ಇತರೆ ಬೆಲೆಬಾಳುವ ವಸ್ತುಗಳು ಸಿಕ್ಕರೆ ಮಾಲೀಕರು ಒಟ್ಟು ಹಣದ ಶೇ. 12.50 ಪ್ರತಿಶತವನ್ನು ಪಡೆಯುತ್ತಾರೆ. ಆದಾಗ್ಯೂ, ಉತ್ಖನನ ಮಾಡಿದ ನಿಧಿಯ ಬಗ್ಗೆ ಸರ್ಕಾರಕ್ಕೆ ಸೂಚನೆ ನೀಡದಿದ್ದರೆ, ವಿಷಯವು ನ್ಯಾಯಾಲಯಕ್ಕೆ ಹೋಗುತ್ತದೆ, ಅಲ್ಲಿ ಮಾಲೀಕರು ಕಾನೂನುಬದ್ಧವಾಗಿ ಹೋರಾಟ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಜಮೀನಿನಲ್ಲಿ ಕಳೆ ಕೀಳುತ್ತಿದ್ದಾಗ ರೈತನ ಮಗಳಿಗೆ ಸಿಕ್ತು 34 ಲಕ್ಷ ರೂಪಾಯಿಯ ವಜ್ರ
ಈ ಪ್ರದೇಶದಲ್ಲಿ ಇಂತಹ ಉತ್ಖನನ ನಡೆದು ವಜ್ರ ಪತ್ತೆಯಾಗಿರುವ ಎರಡನೇ ಪ್ರಕರಣ ಇದಾಗಿದೆ. ಪನ್ನಾದ ಜರುವಾಪುರ ಗ್ರಾಮದ ಮತ್ತೊಬ್ಬ ರೈತ ಕಳೆದ 2 ವರ್ಷಗಳ ಹಿಂದೆ ಜಮೀನು ಅಗೆಯುತ್ತಿದ್ದ ಸಂದರ್ಭದಲ್ಲಿ 30 ಲಕ್ಷ ರೂ. ಮೌಲ್ಯದ ವಜ್ರ ಪತ್ತೆಯಾಗಿತ್ತು.
ಇದನ್ನೂ ಓದಿ: 'ಕೊಹಿನೂರ್ ವಜ್ರ' ಜಗನ್ನಾಥ್ನಿಗೆ ಸೇರಿದ್ದು; ಬ್ರಿಟನ್ನಿಂದ ವಾಪಸ್ ತರಲು ರಾಷ್ಟ್ರಪತಿಗೆ ಮನವಿ