ETV Bharat / bharat

ಡಿಎಂಕೆ ಸಂಸದೆ ಕನಿಮೋಳಿಗೆ ಕೊರೊನಾ ಪಾಸಿಟಿವ್​!

ಡಿಎಂಕೆ ಪಕ್ಷದ ಸಂಸದೆ ಕನಿಮೋಳಿಗೆ ಕೊರೊನಾ ಸೋಂಕು ತಗುಲಿದ್ದು, ಸದ್ಯ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

DMK Leader Kanimozhi
DMK Leader Kanimozhi
author img

By

Published : Apr 3, 2021, 3:37 PM IST

ಚೆನ್ನೈ(ತಮಿಳುನಾಡು): ತಮಿಳುನಾಡಿನ ಡಿಎಂಕೆ ಸಂಸದೆ ಕನಿಮೋಳಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದೀಗ ವಿಧಾನಸಭಾ ಚುನಾವಣೆ ಪ್ರಚಾರದಿಂದ ದೂರ ಉಳಿಯಲಿದ್ದಾರೆ.

ಕೊರೊನಾ ವೈರಸ್​ ಸೋಂಕು ದೃಢಪಟ್ಟಿರುವ ಕಾರಣ ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಕೆಲ ವಾರಗಳಿಂದ ತಮಿಳುನಾಡಿನ ವಿವಿಧ ಕ್ಷೇತ್ರಗಳಲ್ಲಿ ಡಿಎಂಕೆ ಪಕ್ಷದ ಅಭ್ಯರ್ಥಿಗಳ ಪರ ಕನಿಮೋಳಿ ಚುನಾವಣಾ ಪ್ರಚಾರ ಸಭೆ ನಡೆಸಿದ್ದರು. ಈ ಮಧ್ಯೆ ಅವರಿಗೆ ಕೊರೊನಾ ಸೋಂಕು ವಕ್ಕರಿಸಿದೆ, ಹೀಗಾಗಿ ಇತರೆ ನಾಯಕರಲ್ಲೂ ಆತಂಕ ಮೂಡಿಸಿದೆ. ತಮಗೆ ಕೊರೊನಾ ಸೋಂಕು ತಗುಲಿರುವುದು ಖಚಿತಗೊಳ್ಳುತ್ತಿದ್ದಂತೆ ಮುಂದಿನ ಎಲ್ಲ ಚುನಾವಣಾ ಪ್ರಚಾರ ಸಭೆಗಳನ್ನು ಕನಿಮೋಳಿ ರದ್ದುಗೊಳಿಸಿದ್ದಾರೆ.

ಇದನ್ನೂ ಓದಿ: ಪಂಚಾಯತ್​ ಎಲೆಕ್ಷನ್​: ಅಖಾಡಕ್ಕಿಳಿಯಲು ಮಾಜಿ ಮಿಸ್​ ಇಂಡಿಯಾ ರನ್ನರ್​ ಅಪ್​ ದೀಕ್ಷಾ ನಿರ್ಧಾರ!

234 ಕ್ಷೇತ್ರಗಳ ತಮಿಳುನಾಡಿನ ವಿಧಾನಸಭೆಗೆ ಏಪ್ರಿಲ್​ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ. ಈ ಚುನಾವಣೆಯಲ್ಲಿ ಡಿಎಂಕೆ-ಕಾಂಗ್ರೆಸ್​ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ ಆಡಳಿತರೂಢ ಎಐಎಡಿಎಂಕೆ ಜೊತೆ ಕೈಜೋಡಿಸಿದೆ. ತಮಿಳುನಾಡಿನಲ್ಲಿ ಶುಕ್ರವಾರ 3,290 ಕೋವಿಡ್ ಕೇಸ್​ಗಳು ದಾಖಲಾಗಿದ್ದು, ಇಲ್ಲಿಯವರೆಗೆ 8,92,780 ಜನರಲ್ಲಿ ಮಹಾಮಾರಿ ಕಾಣಿಸಿಕೊಂಡಿದೆ. ಜತೆಗೆ 12,750 ಜನರು ಬಲಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.