ETV Bharat / bharat

ಕಾಲು ಮುರಿದಿರಬಹುದು, ಮಮತಾರ ಹೃದಯ ಒಡೆಯಲು ಸಾಧ್ಯವಿಲ್ಲ : ಟಿಎಂಸಿ ಪರ ಜಯಾ ಬಚ್ಚನ್​ ಪ್ರಚಾರ - ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ

ಎಲ್ಲಾ ದೌರ್ಜನ್ಯಗಳ ವಿರುದ್ಧ ಹೋರಾಡುವ ಒಂಟಿ ಮಹಿಳೆ ಮಮತಾ ಜೀ ಬಗ್ಗೆ ನನಗೆ ಅತ್ಯಂತ ಪ್ರೀತಿ ಮತ್ತು ಗೌರವವಿದೆ. ಮಮತಾ ಅವರು ಏನು ಮಾಡಲು ಬಯಸುತ್ತಾರೋ ಅದನ್ನು ಮಾಡೇ ಮಾಡುತ್ತಾರೆ..

MP Jaya Bachchan in Kolkata
ಟಿಎಂಸಿ ಪರ ಜಯಾ ಬಚ್ಚನ್​ ಪ್ರಚಾರ
author img

By

Published : Apr 5, 2021, 5:06 PM IST

ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಪರ ಪ್ರಚಾರ ಕಾರ್ಯದಲ್ಲಿ ತೊಡಗಲು ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದೆ ಜಯಾ ಬಚ್ಚನ್ ನಿರ್ಧರಿಸಿದ್ದಾರೆ.

ಮಮತಾ ಜೀ ಅವರ ತಲೆಗೆ ಏಟಾಗಬಹುದು, ಕಾಲು ಮುರಿಯಬಹುದು. ಆದರೆ, ಅವರ ಹೃದಯ, ಮೆದುಳು ಮತ್ತು ಬಂಗಾಳವನ್ನು ವಿಶ್ವದ ಅತ್ಯುತ್ತಮ ರಾಷ್ಟ್ರಗಳನ್ನಾಗಿ ಮಾಡುವ ದೃಢ ನಿಶ್ಚಯವನ್ನು ಒಡೆಯಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಕೋಲ್ಕತಾದಲ್ಲಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದರು.

ದೌರ್ಜನ್ಯಗಳ ವಿರುದ್ಧ ಹೋರಾಡುವ ಒಂಟಿ ಮಹಿಳೆ ಮಮತಾ : ನನ್ನ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು ಟಿಎಂಸಿಗೆ ನನ್ನ ಬೆಂಬಲ ನೀಡಲು ಕೇಳಿಕೊಂಡಿದ್ದರು. ಎಲ್ಲಾ ದೌರ್ಜನ್ಯಗಳ ವಿರುದ್ಧ ಹೋರಾಡುವ ಒಂಟಿ ಮಹಿಳೆ ಮಮತಾ ಜೀ ಬಗ್ಗೆ ನನಗೆ ಅತ್ಯಂತ ಪ್ರೀತಿ ಮತ್ತು ಗೌರವವಿದೆ. ಮಮತಾ ಅವರು ಏನು ಮಾಡಲು ಬಯಸುತ್ತಾರೋ ಅದನ್ನು ಮಾಡೇ ಮಾಡುತ್ತಾರೆ ಎಂದು ಜಯಾ ಬಚ್ಚನ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಎರಡು ಹಂತಗಳ ಮತದಾನ ನಡೆದಿದೆ. ನಾಳೆಯಿಂದ ನಾಲ್ಕು ರೋಡ್​ ಶೋಗಳಲ್ಲಿ ಜಯಾ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.