ETV Bharat / bharat

ಇಂಡೋ - ಪಾಕ್ ಯುದ್ಧದಲ್ಲಿ ಸೇವೆ ಸಲ್ಲಿಸಿದ 20 ರೂಪಾಯಿ ವೈದ್ಯನಿಗೆ ಸಂದ ಪದ್ಮಶ್ರೀ ಪ್ರಶಸ್ತಿ - ಗುಜರಾತಿ ಭಜನೆ ಗಾಯಕ

1971ರಲ್ಲಿ ಇಂಡೋ - ಪಾಕ್ ಯುದ್ಧದ ಸಮಯದಲ್ಲಿ ಸುಮಾರು ಒಂದು ವರ್ಷ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಂತರದಲ್ಲಿ ಜನರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಿರುತ್ತಿರುವ ಮಧ್ಯಪ್ರದೇಶದ ವೈದ್ಯರೊಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

mp-jabalpur-doctor-who-treats-people-for-just-rs-20-conferred-with-padma-shri
ಇಂಡೋ - ಪಾಕ್ ಯುದ್ಧದಲ್ಲಿ ಸೇವೆ ಸಲ್ಲಿಸಿದ 20 ರೂಪಾಯಿ ವೈದ್ಯನಿಗೆ ಸಂದ ಪದ್ಮಶ್ರೀ ಪ್ರಶಸ್ತಿ
author img

By

Published : Jan 26, 2023, 6:20 PM IST

ಜಬಲ್‌ಪುರ (ಮಧ್ಯಪ್ರದೇಶ): ಅತ್ಯಂತ ಕಡಿಮೆ ವೆಚ್ಚದಲ್ಲಿ ಜನರಿಗೆ ಚಿಕಿತ್ಸೆ ನೀಡುವ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ವೈದ್ಯ ಡಾ. ಎಂ.ಸಿ.ದಾವರ್ ಅವರಿಗೆ ಕೇಂದ್ರ ಸರ್ಕಾರವು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 77 ವರ್ಷದ ದಾವರ್ ಅವರು, ಈ ಹಿಂದೆ ಜನರಿಗೆ ಕೇವಲ 2 ರೂಪಾಯಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದರು. ಪ್ರಸ್ತುತ ಅವರು ಚಿಕಿತ್ಸಾ ಶುಲ್ಕವಾಗಿ 20 ರೂಪಾಯಿ ಮಾತ್ರ ಪಡೆಯುತ್ತಿದ್ದಾರೆ.

74ನೇ ಗಣರಾಜ್ಯೋತ್ಸವದ ನಿಮಿತ್ತ ಬುಧವಾರ ಸಂಜೆ 91 ಜನ ಸಾಧಕರಿಗೆ ಪದ್ಮಶ್ರೀ ಪುರಸ್ಕೃತರ ಪ್ರಶಸ್ತಿಯ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಜಬಲ್‌ಪುರದ 20 ರೂಪಾಯಿ ವೈದ್ಯ ಡಾ.ಎಂ.ಸಿ.ದಾವರ್ ಸಹ ಒಬ್ಬರಾಗಿದ್ದಾರೆ. ಇವರು 1946ರ ಜನವರಿ 16ರಂದು ಆಗಿನ ಪಾಕಿಸ್ತಾನದ ಪಂಜಾಬ್‌ನಲ್ಲಿ ಜನಿಸಿದ್ದರು. ದೇಶ ವಿಭಜನೆಯ ನಂತರ ಅವರು ಭಾರತಕ್ಕೆ ಸ್ಥಳಾಂತರಗೊಂಡರು. 1967ರಲ್ಲಿ ಜಬಲ್‌ಪುರದಲ್ಲಿ ದಾವರ್ ತಮ್ಮ ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ (ಎಂಬಿಬಿಎಸ್) ಪದವಿಯಲ್ಲಿ ಪೂರೈಸಿದ್ದಾರೆ.

ಭಾರತೀಯ ಸೇನೆಯಲ್ಲಿ ಒಂದು ವರ್ಷ ಸೇವೆ: ಭಾರತೀಯ ಸೇನೆಯಲ್ಲೂ ಡಾ.ಎಂ.ಸಿ.ದಾವರ್ ಸೇವೆ ಸಲ್ಲಿಸಿದ್ದಾರೆ. 1971ರಲ್ಲಿ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಸುಮಾರು ಒಂದು ವರ್ಷ ಕಾಲ ಸೇನೆಯಲ್ಲಿ ದುಡಿದಿರುವ ಇವರು, ಇದರ ನಂತರ 1972ರಿಂದ ಜಬಲ್​ಪುರದ ಜನರಿಗೆ ತುಂಬಾ ಕಡಿಮೆ ಶುಲ್ಕದಲ್ಲಿ ಆರೋಗ್ಯ ಸೇವೆ ಒದಗಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಬಗ್ಗೆ ಪ್ರತಿಕ್ರಿಯಿಸಿದ ಡಾ. ದಾವರ್, ಕಠಿಣ ಪರಿಶ್ರಮವು ಕೆಲವೊಮ್ಮೆ ತಡವಾದರೂ ಸಹ ಫಲ ನೀಡುತ್ತದೆ. ಜನರ ಆಶೀರ್ವಾದದಿಂದ ನನಗೆ ಈ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು. ಇದೇ ವೇಳೆ, ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡಿದ ಅವರು, ಕಡಿಮೆ ಚಿಕಿತ್ಸೆ ಶುಲ್ಕ ವಿಧಿಸುವ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯುತ್ತಿತ್ತು. ಆದರೆ, ಈ ಬಗ್ಗೆ ಯಾವುದೇ ತಕರಾರು ನಮ್ಮಲ್ಲಿರಲಿಲ್ಲ. ನಮ್ಮ ಏಕೈಕ ಗುರಿ ಜನರ ಸೇವೆಯಾಗಿದ್ದರಿಂದ ಹೆಚ್ಚಿನ ಶುಲ್ಕವನ್ನು ಪಡೆಯುತ್ತಿಲ್ಲ ಮತ್ತು ಶುಲ್ಕವನ್ನು ಹೆಚ್ಚಿಸಿಲ್ಲ ಎಂದು ತಿಳಿಸಿದರು.

ಡಾ. ದಾವರ್ ಅವರ ಪುತ್ರ ರಿಷಿ ಮಾತನಾಡಿ, ನಾವು ಇದುವರೆಗೆ ರಾಜಕೀಯ ನಂಟು ಹೊಂದಿವರಿಗೆ ಮಾತ್ರ ಅತ್ಯುನ್ನತ ಪ್ರಶಸ್ತಿ ನೀಡಲಾಗುತ್ತದೆ ಎಂದು ಭಾವಿಸಿದ್ದೆವು. ಆದರೆ, ಸರ್ಕಾರ ಕೆಲ ಮಟ್ಟದಲ್ಲಿ ದುಡಿಯುವವರನ್ನು ಹುಡುಕಿ ಗೌರವಿಸುತ್ತಿರುವ ರೀತಿ ತುಂಬಾ ಒಳ್ಳೆಯದಾಗಿದೆ. ಇದರ ಪರಿಣಾಮವೇ ನಮ್ಮ ತಂದೆಗೆ ಈ ಪ್ರಶಸ್ತಿ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ಡಾ.ದಾವರ್ ಅವರ ಸೊಸೆ ಸುಚಿತಾ ಮಾತನಾಡಿ, ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದು ನಮಗೆ, ನಮ್ಮ ಕುಟುಂಬಕ್ಕೆ ಮತ್ತು ನಮ್ಮ ಇಡೀ ನಗರಕ್ಕೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

  • Gujarat | I'm delighted. Govt of India has honoured the art & culture of Rathwa tribals who reside in Chhotaudepur district. They have made a small artist like me into something big. I am thankful to the Govt of India: Paresh Rathwa, Pithora artist on being conferred Padma Shri pic.twitter.com/ZKawFuqbWD

    — ANI (@ANI) January 26, 2023 " class="align-text-top noRightClick twitterSection" data=" ">

ಪದ್ಮಶ್ರೀ ಪುರಸ್ಕೃತರ ಅನಿಸಿಕೆಗಳು: ಎಲೆಮರೆ ಕಾಯಿಯಂತಹ ಇತರ ಸಾಧಕರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿದೆ. ಪದ್ಮಶ್ರೀ ಪ್ರಶಸ್ತಿಯಿಂದ ನಾನು ಸಂತೋಷಗೊಂಡಿದ್ದೇನೆ. ಕೇಂದ್ರ ಸರ್ಕಾರವು ಛೋಟೌದೇಪುರ್ ಜಿಲ್ಲೆಯಲ್ಲಿ ವಾಸಿಸುವ ರಥ್ವಾ ಬುಡಕಟ್ಟು ಜನಾಂಗದವರ ಕಲೆ ಮತ್ತು ಸಂಸ್ಕೃತಿಯನ್ನು ಗೌರವಿಸಿದೆ. ನನ್ನಂತಹ ಸಣ್ಣ ಕಲಾವಿದನನ್ನು ದೊಡ್ಡವರನ್ನಾಗಿ ಕಂಡ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ ಎಂದು ಗುಜರಾತ್​ನ ಪಿಥೋರಾ ಕಲಾವಿದ ಪರೇಶ್ ರಥ್ವಾ ತಿಳಿಸಿದ್ದಾರೆ.

  • I received the news of getting Padma Shri this time. I'm delighted. For the last 45 yrs, I've sung for the almighty, worshipped & done all my work honestly&Govt of India has taken note of it. That made me happier:Gujarati Bhajan singer Hemant Chauhan on being conferred Padma Shri pic.twitter.com/fUnC6ZTrmz

ಮತ್ತೊಬ್ಬ ಪದ್ಮಶ್ರೀ ಪುರಸ್ಕೃತ, ಗುಜರಾತಿ ಭಜನೆ ಗಾಯಕ ಹೇಮಂತ್ ಚೌಹಾಣ್ ಮಾತನಾಡಿ, ಕಳೆದ 45 ವರ್ಷಗಳಿಂದ ನಾನು ಸರ್ವಶಕ್ತ ಭಗವಂತಗಾಗಿ ಹಾಡಿದ್ದೇನೆ, ಪೂಜಿಸಿದ್ದೇನೆ. ಅಲ್ಲದೇ, ನನ್ನ ಎಲ್ಲ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಇದನ್ನು ಕೇಂದ್ರ ಸರ್ಕಾರ ಗಮನಿಸಿದೆ. ಇದರಿಂದ ಪದ್ಮಶ್ರೀ ಪ್ರಶಸ್ತಿ ಘೋಷಿಸಿರುವುದು ನನಗೆ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಂಟು ಕನ್ನಡಿಗರಿಗೆ ಪದ್ಮ ಪುರಸ್ಕಾರ: ಎಸ್​ಎಂ ಕೃಷ್ಣಗೆ ಪದ್ಮವಿಭೂಷಣ, ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.