ETV Bharat / bharat

ಸಿಡಿಲು ಬಡಿದು ಐವರ ಸಾವು.. 18 ಮಂದಿಗೆ ಗಾಯ! - ಸಿಡಿಲು ಬಡಿದು ಗಾಯ

ಪನ್ನಾ ಜಿಲ್ಲೆಯ ಉರೆಹಾ, ಪಿಪರಿಯಾ ದೌನ್, ಚೌಮುಖ ಮತ್ತು ಸಿಮ್ರಾಖುರ್ಡ್​​​ನಲ್ಲಿ ಸಿಡಿಲು ಬಡಿದ ಕಾರಣ ಐವರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ.

lightning
lightning
author img

By

Published : Jul 24, 2021, 3:08 PM IST

ಪನ್ನಾ (ಮಧ್ಯಪ್ರದೇಶ): ಪನ್ನಾ ಜಿಲ್ಲೆಯಲ್ಲಿ ಸಿಡಿಲು ಬಡಿದ ನಾಲ್ಕು ಪ್ರತ್ಯೇಕ ಘಟನೆಗಳಲ್ಲಿ ಐವರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಅಧಿಕಾರಿಗಳ ಪ್ರಕಾರ ಈ ಘಟನೆಗಳು ಪನ್ನಾ ಜಿಲ್ಲೆಯ ಉರೆಹಾ, ಪಿಪರಿಯಾ ದೌನ್, ಚೌಮುಖ ಮತ್ತು ಸಿಮ್ರಾಖುರ್ಡ್ ಗ್ರಾಮಗಳಲ್ಲಿ ಸಂಭವಿಸಿದೆ.

ಉರೆಹಾ, ಪಿಪರಿಯಾ ದೌನ್ ಮತ್ತು ಚೌಮುಖ ಗ್ರಾಮಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದು, ಸಿಮ್ರಾಖುರ್ಡ್‌ನಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಈ ಗ್ರಾಮಗಳಲ್ಲಿ ನಡೆದ ಮಿಂಚಿನ ದಾಳಿಯಲ್ಲಿ ಒಟ್ಟು 18 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಪನ್ನಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.