ಶಿಯೋಪುರ ( ಮಧ್ಯಪ್ರದೇಶ) : ಇಲ್ಲಿನ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವನ್ನಪ್ಪಿದೆ. ಚೀತಾಗಳ ನಡುವೆ ನಡೆದ ಕಾದಾಟದಲ್ಲಿ ಹೆಣ್ಣು ಚಿರತೆ ಧೀರಾ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಮೂರು ತಿಂಗಳ ಅವಧಿಯಲ್ಲಿ ಕುನೋ ಪಾರ್ಕ್ನಲ್ಲಿ ಮೂರು ನಮೀಬಿಯನ್ ಚಿರತೆಗಳು ಸಾವನ್ನಪ್ಪಿವೆ.
ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಒಟ್ಟು 20 ಚಿರತೆಗಳನ್ನು ಭಾರತಕ್ಕೆ ತರಲಾಗಿತ್ತು. ಇದರಲ್ಲಿ ಮೂರು ಚೀತಾಗಳು ಸಾವನ್ನಪ್ಪುವ ಮೂಲಕ ಇದೀಗ 17 ಚೀತಾಗಳು ಮಾತ್ರ ಉಳಿದಿವೆ. ಈ ಹಿಂದೆ ಉದಯ್ ಮತ್ತು ಸಾಶಾ ಎಂಬ ಚೀತಾಗಳು ಸಾವನ್ನಪ್ಪಿದ್ದವು. ಉದಯ್ ಎಪ್ರಿಲ್ 23ರಂದು ಸಾವನ್ನಪ್ಪಿತ್ತು. ಕಿಡ್ನಿ ವೈಫಲ್ಯದಿಂದ ಚೀತಾ ಸಾವನ್ನಪ್ಪಿದೆ ಎಂದು ಮಂಗಳವಾರ ವರದಿ ಬಂದಿದೆ. ಮಾರ್ಚ್ 27ರಂದು ನಮೀಬಿಯಾದಿಂದ ತಂದಿದ್ದ ಸಾಶಾ ಎಂಬ ಚೀತಾ ಸಾವನ್ನಪ್ಪಿತ್ತು. ಈ ಚಿರತೆಯೂ ಮೂತ್ರ ಪಿಂಡದ ಸೋಂಕಿನಿಂದಾಗಿ ಸಾವನ್ನಪ್ಪಿತ್ತು.
-
Namibian and South African Cheetah's get their Indian Names...#CheetahStateMP#JansamparkMP pic.twitter.com/py5n3zS9Xb
— Department of Forest, MP (@minforestmp) April 21, 2023 " class="align-text-top noRightClick twitterSection" data="
">Namibian and South African Cheetah's get their Indian Names...#CheetahStateMP#JansamparkMP pic.twitter.com/py5n3zS9Xb
— Department of Forest, MP (@minforestmp) April 21, 2023Namibian and South African Cheetah's get their Indian Names...#CheetahStateMP#JansamparkMP pic.twitter.com/py5n3zS9Xb
— Department of Forest, MP (@minforestmp) April 21, 2023
ಪ್ರಾಥಮಿಕ ಮಾಹಿತಿ ಪ್ರಕಾರ, ಹೆಣ್ಣು ಚೀತಾ ಧೀರಾ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಈ ಚೀತಾವು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಚೀತಾ ರಕ್ಷಣೆಯ ವಿಶೇಷ ತಂಡವು ಚಿರತೆಯನ್ನು ಸೆರೆ ಹಿಡಿದು ಚಿಕಿತ್ಸೆ ನೀಡಿ ರಕ್ಷಿಸಿತ್ತು. ಬಳಿಕ ಹೆಣ್ಣು ಚೀತಾಯನ್ನು ಕಾಡಿಗೆ ಬಿಡಲಾಗಿತ್ತು. ಈಗ ಮೃತ ಚೀತಾಯ ದೇಹದ ಮೇಲೆ ಗಂಡು ಹುಲಿ ದಾಳಿ ನಡೆಸಿರುವ ಗುರುತುಗಳು ಪತ್ತೆಯಾಗಿವೆ. ಇದರಿಂದಾಗಿ ಚೀತಾ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
4 ಮರಿಗಳಿಗೆ ಜನ್ಮ ನೀಡಿದ್ದ ಸಿಯಾ: ಈ ಹಿಂದೆ ಹೆಣ್ಣು ಚೀತಾ ಸೀಯಾ 4 ಮರಿಗಳಿಗೆ ಜನ್ಮ ನೀಡಿತ್ತು. ಇವುಗಳು ಸಂಪೂರ್ಣವಾಗಿ ಭಾರತೀಯ ಪರಿಸರದಲ್ಲಿ ಬೆಳೆಯುತ್ತಿವೆ.
ಇದನ್ನೂ ಓದಿ : ಚೀತಾ ಉದಯ್ ಸಾವಿಗೆ ಮೂತ್ರಪಿಂಡ ಸೋಂಕು ಕಾರಣ: ವರದಿ