ETV Bharat / bharat

MP Elections: ಮಧ್ಯಪ್ರದೇಶದಲ್ಲೂ ಪೇಸಿಎಂ ಪೋಸ್ಟರ್ ವಾರ್; ರಂಗೇರಿದ ರಾಜಕೀಯ - ಈಟಿವಿ ಭಾರತ ಕನ್ನಡ

ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದು, ರಾಜಕೀಯ ರಂಗೇರುತ್ತಿದೆ. ಈಗ ಕರ್ನಾಟಕದ ಮಾದರಿಯಲ್ಲಿಯೇ ಅಲ್ಲಿಯೂ ಪೇಸಿಎಂ ಮಾದರಿಯ ಕ್ಯೂಆರ್ ಕೋಡ್ ಪೋಸ್ಟರ್​ಗಳ ವಾರ್ ಆರಂಭವಾಗಿದೆ.

MP Elections PayCM model poster war in Madhya Pradesh
MP Elections: ಮಧ್ಯಪ್ರದೇಶದಲ್ಲೂ ಪೇಸಿಎಂ ಮಾದರಿ ಪೋಸ್ಟರ್ ವಾರ್; ರಂಗೇರಿದ ರಾಜಕೀಯ
author img

By

Published : Jun 26, 2023, 6:41 PM IST

ಭೋಪಾಲ್ (ಮಧ್ಯ ಪ್ರದೇಶ) : ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಮಧ್ಯೆ ರಾಜಕೀಯ ಪಕ್ಷಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದ್ದು, ಇದೀಗ ಪೋಸ್ಟರ್ ವಾರ್​ನಿಂದಾಗಿ ರಾಜ್ಯದ ರಾಜಕೀಯ ಮತ್ತಷ್ಟು ರಂಗೇರುತ್ತಿದೆ. ಮಾಜಿ ಸಿಎಂ ಕಮಲ್ ನಾಥ್ ಮತ್ತು ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರಗಳಿರುವ ಆಕ್ಷೇಪಾರ್ಹ ಪೋಸ್ಟರ್‌ಗಳು ಅಲ್ಲಲ್ಲಿ ಕಾಣಿಸಿಕೊಂಡ ಮೂರು ದಿನಗಳ ನಂತರ, ಈಗ ಮತ್ತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರ ಹಾಗೂ ಕ್ಯೂಆರ್ ಕೋಡ್ ಇರುವ ಪೋಸ್ಟರ್​ಗಳು ಕೆಲವೆಡೆ ಕಂಡು ಬಂದಿವೆ. ಸಿಎಂ ಚಿತ್ರದೊಂದಿಗೆ ಕ್ಯೂಆರ್ ಕೋಡ್ ಇರುವ ಹಾಗೂ ಕೆಲಸ ಮಾಡಿಸಿಕೊಳ್ಳಬೇಕಾದರೆ 50 ಪರ್ಸೆಂಟ್ ಕಮಿಷನ್ ತನ್ನಿ ಎಂದು ಬರೆದಿರುವ ಪೋಸ್ಟರ್​ಗಳು ಭೋಪಾಲ್ ಮತ್ತು ಸಿಂಗ್ರೌಲಿಯಲ್ಲಿ ಕಾಣಿಸಿವೆ.

ಭೋಪಾಲ್‌ನ ಪ್ಲಾಟಿನಂ ಪ್ಲಾಜಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪೋಸ್ಟರ್‌ಗಳನ್ನು ಹಾಕಲಾಗಿದೆ. ಇವುಗಳಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರವನ್ನು ಫೋನ್​ಪೆ ಸ್ಕ್ಯಾನರ್‌ನ ಮಧ್ಯದಲ್ಲಿ ಅಂಟಿಸಲಾಗಿದೆ. 50 ಪರ್ಸೆಂಟ್ ತನ್ನಿ, ಕೆಲಸ ಮಾಡಿಸಿಕೊಳ್ಳಿ ಎಂದು ಅದರ ಮೇಲೆ ಬರೆಯಲಾಗಿದೆ. ಈ ಪೋಸ್ಟರ್ ಅನ್ನು ಯಾರು ಹಾಕಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಈ ಹಿಂದೆ ಜೂನ್ 23ರಂದು ಮಾಜಿ ಸಿಎಂ ಕಮಲ್ ನಾಥ್ ಅವರ ಇದೇ ರೀತಿಯ ಪೋಸ್ಟರ್​ಗಳನ್ನು ಹಾಕಲಾಗಿತ್ತು. ಇದರಲ್ಲಿ ಅವರನ್ನು ವಾಂಟೆಡ್ ಮತ್ತು ಭ್ರಷ್ಟನಾಥ ಎಂದು ಬರೆಯಲಾಗಿತ್ತು. ಇದರಲ್ಲೂ ಕ್ಯೂ ಆರ್ ಕೋಡ್ ಹಾಕಿ ಅದರ ಮೇಲೆ ಕಮಲ್​ನಾಥ್ ಚಿತ್ರ ಹಾಕಲಾಗಿತ್ತು. ಕಾಂಗ್ರೆಸ್ ಸರ್ಕಾರದ 15 ತಿಂಗಳಿಂದ ಈಡೇರದ ಭರವಸೆಗಳ ಬಗ್ಗೆ ಈ ಕ್ಯೂಆರ್​ ಕೋಡ್ ತೋರಿಸುವಂತೆ ಮಾಡಲಾಗಿತ್ತು.

ಈ ಪೋಸ್ಟರ್​ಗಳು ಬಿಜೆಪಿಯ ಕುತಂತ್ರ ಎಂದು ಕಾಂಗ್ರೆಸ್ ಬಣ್ಣಿಸಿದೆ. ಇದಾದ ಬಳಿಕ ಸಂಜೆ ವೇಳೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ, ಕ್ಯೂ ಆರ್ ಕೋಡ್ ಇರುವ ಪೋಸ್ಟರ್​ಗಳು ಕಾಣಿಸಿಕೊಂಡಿವೆ.

ಕರ್ನಾಟಕದಲ್ಲಿ ಪೇಸಿಎಂ ಪೋಸ್ಟರ್‌: ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳ ಪ್ರಚಾರದ ಸಮಯದಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರ ಹಾಕಿ ಪೇಸಿಎಂ ಎಂಬ ಕ್ಯೂ ಆರ್​ ಕೋಡ್ ಪೋಸ್ಟರ್​ಗಳನ್ನು ಕಾಂಗ್ರೆಸ್ ಪಕ್ಷ ವ್ಯಾಪಕವಾಗಿ ಪ್ರಚಾರ ಮಾಡಿತ್ತು. ಇದು ಆಗಿನ ಬಿಜೆಪಿ ಸರ್ಕಾರಕ್ಕೆ ಭಾರಿ ಮುಜುಗರ ಉಂಟು ಮಾಡಿತ್ತು. ಈಗ ಮಧ್ಯಪ್ರದೇಶದಲ್ಲಿ ಚುನಾವಣೆಗಳು ಹತ್ತಿರವಾಗುತ್ತಿರುವ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹಾಗೂ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರಗಳಿರುವ ಕ್ಯೂ ಆರ್ ಕೋಡ್ ಪೋಸ್ಟರ್​ಗಳು ಕಾಣಿಸಿಕೊಂಡಿವೆ.

ಇದನ್ನೂ ಓದಿ : FCI: ಇ-ಹರಾಜು ಮೂಲಕ ಮಾತ್ರ ಅಕ್ಕಿ, ಗೋಧಿ ಮಾರಾಟ- ಎಫ್​ಸಿಐಗೆ ಕೇಂದ್ರ ಸರ್ಕಾರ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.