ETV Bharat / bharat

'ತಾಜ್ ಮಹಲ್ ಭೂಮಿ ನಮ್ಮ ಪೂರ್ವಜರದ್ದು, ದಾಖಲೆ ಕೊಡಲು ಸಿದ್ಧ': ಜೈಪುರ ರಾಜವಂಶಸ್ಥೆ

ತಾಜ್ ಮಹಲ್ ಬಗ್ಗೆ ಬಿಜೆಪಿ ಕಾರ್ಯಕರ್ತರೊಬ್ಬರು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ತಾಜ್ ಮಹಲ್ ಇರುವ ಸ್ಥಳದಲ್ಲಿ ತೇಜೋ ಮಹಾಲಯ ಅಥವಾ ಶಿವಾ ದೇವಾಲಯವಿದೆ ಎಂದು ಹೇಳಿದ್ದಾರೆ. ಈ ಬೆನ್ನಲ್ಲೇ ಇದೀಗ ಜೈಪುರದ ಮಾಜಿ ರಾಜಮನೆತನ ರಾಜಕುಮಾರಿ ದಿಯಾ ಕುಮಾರಿ ಕೂಡ ತಾಜ್ ಮಹಲ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ತಾಜ್ ಮಹಲ್ ನಮ್ಮ ಆಸ್ತಿ, ಈ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು. ಈ ಆಸ್ತಿ ನಮ್ಮ ಪರಂಪರೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

ದಿಯಾ ಕುಮಾರಿ
ದಿಯಾ ಕುಮಾರಿ
author img

By

Published : May 12, 2022, 8:27 AM IST

ಜೈಪುರ: ಪ್ರೇಮಸೌಧವೆಂದೇ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಆಗ್ರಾದ ತಾಜ್‌ಮಹಲ್‌ನಲ್ಲಿ ವಿವಾದ ಭುಗಿಲೆದ್ದಿದೆ. ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರೊಬ್ಬರು ತಾಜ್‌ಮಹಲ್‌ನಲ್ಲಿ ಹಲವು ವರ್ಷಗಳಿಂದ ಮುಚ್ಚಿರುವ ಕೊಠಡಿಗಳ ಬಾಗಿಲು ತೆರೆಯುವಂತೆ ಆಗ್ರಹಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಜೈಪುರದ ಮಾಜಿ ರಾಜಮನೆತನ ರಾಜಕುಮಾರಿ ಮತ್ತು ಪ್ರಸ್ತುತ ಸವಾಯಿ ಮಾಧೋಪುರದ ಬಿಜೆಪಿ ಸಂಸದೆ ದಿಯಾ ಕುಮಾರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಜೈಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ದಿಯಾ ಕುಮಾರಿ, ಈ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು, ಅಂದು ಒತ್ತುವರಿ ಮಾಡಿಕೊಂಡಿದ್ದರು. ಈ ಭೂಮಿಯಲ್ಲಿ ಮೊದಲು ಅರಮನೆ ಇತ್ತು, ಷಹಜಹಾನ್ ಈ ಭೂಮಿಯನ್ನು ಇಷ್ಟಪಟ್ಟಾಗ, ಅದನ್ನು ಮಹಾರಾಜರಿಂದ ಪಡೆದುಕೊಂಡರು. ಜೈಪುರ ರಾಜಮನೆತನದ ಪುಸ್ತಕಗಳಲ್ಲಿ ಭೂಮಿಗೆ ಸಂಬಂಧಿಸಿದ ದಾಖಲೆಗಳಿವೆ. ಕೋರ್ಟ್ ಹೇಳಿದರೆ ಅವುಗಳನ್ನು ಹಾಜರುಪಡಿಸುತ್ತೇವೆ ಎನ್ನುವ ಮೂಲಕ ತಾಜ್ ಮಹಲ್ ಭೂಮಿಯ ಮೇಲೆ ತಮ್ಮ ಹಕ್ಕನ್ನು ವ್ಯಕ್ತಪಡಿಸಿದರು.

ತಾಜ್​ಮಹಲ್ ವಿವಾದದ ವಿವರ: ಅಯೋಧ್ಯೆಯ ಬಿಜೆಪಿ ಮುಖಂಡ ಡಾ.ರಜನೀಶ್ ಸಿಂಗ್ ಅವರು ತಾಜ್ ಮಹಲ್​ಗೆ ಸಂಬಂಧಿಸಿದಂತೆ ಯುಪಿಯ ಅಲಹಾಬಾದ್ ಹೈಕೋರ್ಟ್​ನ ಲಖನೌ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುದೀರ್ಘ ಕಾಲದಿಂದ ಮುಚ್ಚಿರುವ ತಾಜ್ ಮಹಲ್​ನ 22 ಕೊಠಡಿಗಳನ್ನು ತೆರೆಯುವ ಮೂಲಕ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಯಿಂದ ಸಮೀಕ್ಷೆ ನಡೆಸುವಂತೆ ಡಾ.ಸಿಂಗ್ ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ತಾಜ್ ಮಹಲ್‌ನಲ್ಲಿ ಹಿಂದೂ ದೇವರು ಮತ್ತು ದೇವತೆಗಳ ಶಿಲ್ಪಗಳು, ಶಾಸನಗಳು ಇರಬಹುದು. ತಾಜ್ ಮಹಲ್ ಇರುವ ಸ್ಥಳದಲ್ಲಿ ತೇಜೋ ಮಹಾಲಯ ಅಥವಾ ಶಿವಾ ದೇವಾಲಯವಿದೆ. ಬಾಗಿಲುಗಳನ್ನು ತೆರೆದು, ಸಮೀಕ್ಷೆ ನಡೆದರೆ ಸತ್ಯಾಂಶ ಹೊರಬೀಳಲಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ತಾಜ್ ಮಹಲ್
ತಾಜ್ ಮಹಲ್

ಇದನ್ನೂ ಓದಿ: "ಶೀಘ್ರವೇ ತಾಜ್​ ಮಹಲ್ ಆಗಲಿದೆ ರಾಮಮಹಲ್": ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.