ನವದೆಹಲಿ: ಲೋಕಸಭೆಯ ಇಂದಿನ ಕಲಾಪದ ವೇಳೆ ಬಳ್ಳಾರಿ ಸಂಸದ ದೇವೇಂದ್ರಪ್ಪ ಕನ್ನಡದಲ್ಲಿ ಮಾತು ಆರಂಭಿಸಿ, ಕೃಷಿ ಯಂತ್ರೋಪಕರಣದ ಮೇಲಿನ ಎಂಆರ್ಪಿ ದರ ಕುರಿತು ಧ್ವನಿ ಎತ್ತಿದರು.
ಕೃಷಿ ಯಂತ್ರೋಪಕರಣ ಮಾರಾಟ ಮಾಡುವ ಖಾಸಗಿ ಕಂಪನಿಗಳು ಆ ಯಂತ್ರದ ಎಂಆರ್ಪಿ ದರವನ್ನು ತಮ್ಮ ವೆಬ್ಸೈಟ್ನಲ್ಲಿ ದಾಖಲಿಸಿಬೇಕು ಹಾಗೂ ಸರ್ಕಾರಿ ವೆಬ್ಸೈಟ್ನಲ್ಲಿ ಪ್ರಕಟಿಸುವ ಬಗ್ಗೆ ಭಾರತ ಸರ್ಕಾರ ಮುಂಬರುವ ಲೋಕಸಭಾ ಕಲಾಪದಲ್ಲಿ ಆದೇಶ ಜಾರಿಗೊಳಿಸಿ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಮನವಿ ಮಾಡಿದರು.
ಕಂಪನಿ ಜಾರಿ ಮಾಡಿದ ದರವನ್ನು ಶೋರೂಮ್ನಲ್ಲಿ ಪ್ರಕಟಿಸಬೇಕು. ಟ್ರ್ಯಾಕ್ಟರ್ ಸೇರಿ ಎಲ್ಲಾ ಯಂತ್ರೋಪಕರಣದ ಮೇಲೆ ದರ ಚೀಟಿಯನ್ನು ಮುದ್ರಿಸಿರಬೇಕು. ಇವಲ್ಲದೆ ಆ ಯಂತ್ರಗಳ ನಿರ್ವಾಹಣಾ ವೆಚ್ಚವನ್ನೂ ಮುದ್ರಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಅಧೀರ್ ರಂಜನ್ ಚೌಧರಿ ಮತ್ತು ಸತ್ಯ ಪಾಲ್ ಸಿಂಗ್ ನಡುವೆ ವಾದ-ವಾಗ್ವಾದ : ವಿಡಿಯೋ