ETV Bharat / bharat

ಆ್ಯಂಬುಲೆನ್ಸ್​​ನಲ್ಲಿಟ್ಟುಕೊಂಡು ಶವಾಗಾರಕ್ಕೆ ಹೋಗ್ತಿದ್ದ ವೇಳೆ ಕೆಳಗೆ ಬಿದ್ದ ಮೃತದೇಹ.. ವಿಡಿಯೋ! - ಮಧ್ಯಪ್ರದೇಶ ಕೋವಿಡ್ ನ್ಯೂಸ್​

ಕೋವಿಡ್​ ಮಹಾಮಾರಿಯಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಮೃತದೇಹ ಆ್ಯಂಬುಲೆನ್ಸ್​ನಲ್ಲಿಟ್ಟುಕೊಂಡು ಹೋಗ್ತಿದ್ದ ವೇಳೆ ಅದು ದಿಢೀರ್​​ ಆಗಿ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.

Dead body falls from moving ambulance in Vidisha

author img

By

Published : Apr 23, 2021, 10:11 PM IST

Updated : Apr 23, 2021, 10:16 PM IST

ವಿದಿಶಾ (ಮಧ್ಯಪ್ರದೇಶ): ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್​ ರೋಗಿಯೊಬ್ಬರು ಬದುಕ್ಕಿದ್ದಾಗಲೇ ಸಾವನ್ನಪ್ಪಿದ್ದಾನೆಂದು ಎರಡೆರಡು ಬಾರಿ ವರದಿ ನೀಡಿ ವಿವಾದಕ್ಕೊಳಗಾಗಿದ್ದ ವಿದಿಶಾದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇದೀಗ ಮತ್ತೊಂದು ನಿರ್ಲಕ್ಷ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಶವಾಗಾರಕ್ಕೆ ಹೋಗ್ತಿದ್ದ ವೇಳೆ ಕೆಳಗೆ ಬಿದ್ದ ಮೃತದೇಹ

ಹೌದು, ಕಳೆದ ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ವಿದಿಶಾದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂತಹದೊಂದು ನಿರ್ಲಕ್ಷ್ಯ ನಡೆದಿರುವುದು ಬೆಳಕಿಗೆ ಬಂದಿತ್ತು. ಇದೀಗ ಆ್ಯಂಬುಲೆನ್ಸ್​​ನಲ್ಲಿ ಮೃತದೇಹ ತೆಗೆದುಕೊಂಡು ಹೋಗ್ತಿದ್ದ ವೇಳೆ ಅದು ಕೆಳಗೆ ಬಿದ್ದಿರುವ ಆಘಾತಕಾರಿ ಘಟನೆ ನಡೆದಿದ್ದು, ಅದರ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಅಟಲ್​ ಬಿಹಾರಿ ವಾಜಪೇಯಿ ಸರ್ಕಾರಿ ವೈದ್ಯಕೀಯ ಕಾಲೇಜ್​ನಿಂದ ಕೋವಿಡ್​​ನಿಂದ ಸಾವನ್ನಪ್ಪಿದ್ದ ಸೋಂಕಿತ ವ್ಯಕ್ತಿಯ ಮೃತದೇಹ ಶವಾಗಾರಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಆಸ್ಪತ್ರೆಯ ಗೇಟ್​​ನಿಂದ ಹೊರಹೋಗುತ್ತಿದ್ದಂತೆ ಮೃತದೇಹ ಕೆಳಕ್ಕೆ ಬಿದ್ದಿದೆ.

ಇದನ್ನೂ ಓದಿ: ಕೋವಿಡ್ ರೋಗಿ ಬದುಕಿದ್ದಾಗಲೇ ಸಾವನ್ನಪ್ಪಿದ್ದಾನೆಂದು ಎರಡೆರಡು ಬಾರಿ ವರದಿ: ಆಸ್ಪತ್ರೆ ಮಹಾ ಎಡವಟ್ಟು!

ಈ ಘಟನೆಯ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದಾದ ಬಳಿಕ ಕೋವಿಡ್​​-19 ರೋಗಿಯ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಕಳೆದ ಎರಡು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್ ಸೋಂಕಿತನ ಮಾಹಿತಿ ನೀಡಿಲ್ಲ. ಇದೀಗ ಆತ ಸಾವನ್ನಪ್ಪಿದ್ದಾನೆಂದು ಮಾಹಿತಿ ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Last Updated : Apr 23, 2021, 10:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.