ಭೋಪಾಲ್(ಮಧ್ಯಪ್ರದೇಶ): ದೇಶದಲ್ಲಿ ಮಹಾಮಾರಿ ಕೊರೊನಾ ಹಾವಳಿ ಜೋರಾಗಿದ್ದು, ಅದೇ ಕಾರಣಕ್ಕಾಗಿ ಅನೇಕ ರಾಜ್ಯಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಲಾಕ್ಡೌನ್ ಘೋಷಣೆ ಮಾಡಿರುವ ಕಾರಣ ಅಧಿಕಾರಿಗಳು ರಸ್ತೆಗಿಳಿದು, ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡುವಂತೆ ಜನರಿಗೆ ಸೂಚನೆ ನೀಡುತ್ತಿದ್ದಾರೆ. ಆದರೆ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಹಣ್ಣು ಮಾರಾಟಗಾರನೊಬ್ಬ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾನೆ. ಮಧ್ಯಪ್ರದೇಶದ ಮುನ್ಸಿಪಲ್ ಅಧಿಕಾರಿ ರಾಜೇಂದ್ರ ಕುಮಾರ್ ಮೇಲೆ ಹಲ್ಲೆ ನಡೆಸಲಾಗಿದೆ.
ಇದನ್ನೂ ಓದಿ: ಕೋವಿಡ್ನಿಂದ ತಂದೆ ಸಾವು, ತಾಯಿ, ಸಹೋದರ ಆಸ್ಪತ್ರೆಯಲ್ಲಿ: ಆದರೂ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ!
ಕೋವಿಡ್ ಮಾನದಂಡ ಉಲ್ಲಂಘನೆ ಮಾಡಿರುವ ಹಣ್ಣಿನ ವ್ಯಾಪಾರಿಯನ್ನ ಪ್ರಶ್ನೆ ಮಾಡಿದ್ದ ವೇಳೆ ಹಲ್ಲೆ ನಡೆಸಲಾಗಿದೆ. ಹಣ್ಣು ಮಾರಾಟಗಾರ ಮಾಸ್ಕ್ ಸಹ ಹಾಕಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಮುನ್ಸಿಪಾಲ್ ಅಧಿಕಾರಿ ಸೇರಿ ಮೂವರು ನೌಕರರಿಗೆ ಗಾಯವಾಗಿವೆ.