ETV Bharat / bharat

Nusrat Jahan: ಸಂಸದೆ, ನಟಿ ನುಸ್ರತ್ ಜಹಾನ್​ ವಿರುದ್ಧ ವಂಚನೆ ಆರೋಪ: ಕೋರ್ಟ್​, ಇಡಿ, ಪೊಲೀಸರಿಗೆ ದೂರು

ಬಂಗಾಳಿ ನಟಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್​ ವಿರುದ್ಧ ವಸತಿ ಫ್ಲಾಟ್​ಗಳ ಹೆಸರಲ್ಲಿ 28 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ.

MP and Bengali actor Nusrat Jahan accused of cheating Rs 28 crore
ಸಂಸದೆ, ನಟಿ ನುಸ್ರತ್ ಜಹಾನ್​ ವಿರುದ್ಧ ವಂಚನೆ ಆರೋಪ: ಕೋರ್ಟ್​, ಇಡಿ, ಪೊಲೀಸರಿಗೆ ದೂರು
author img

By

Published : Aug 1, 2023, 6:29 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್​ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ವಸತಿ ಫ್ಲಾಟ್​ಗಳ ಹೆಸರಲ್ಲಿ 28 ಕೋಟಿ ರೂಪಾಯಿ ವಂಚನೆ ಮಾಡಿರುವ ಬಗ್ಗೆ ಪೊಲೀಸರು, ಜಾರಿ ನಿರ್ದೇಶನಾಲಯ, ನ್ಯಾಯಾಲಯಕ್ಕೆ ನುಸ್ರತ್ ಜಹಾನ್​ ವಿರುದ್ಧ ದೂರ ನೀಡಲಾಗಿದೆ.

ಉತ್ತರ 24 ಪರಗಣ ಜಿಲ್ಲೆಯ ನ್ಯೂ ಟೌನ್‌ನಲ್ಲಿ ವಸತಿ ಫ್ಲಾಟ್‌ಗಳ ಹೆಸರಿನಲ್ಲಿ ಒಟ್ಟು 429 ಜನರಿಗೆ ವಂಚಿಸಲಾಗಿದೆ ಎಂದು ದೂರಲಾಗಿದೆ. ನಟಿ, ಸಂಸದೆ ನುಸ್ರತ್ ಜಹಾನ್ ಗರಿಯಾಹತ್ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಸಂಸ್ಥೆಯ ನಿರ್ದೇಶಕರಲ್ಲಿ ನುಸ್ರತ್ ಜಹಾನ್ ಕೂಡ ಒಬ್ಬರು. ಹೀಗಾಗಿ, ವಂಚನೆಗೊಳಗಾದವರು ಗರಿಯಾಹತ್ ಪೊಲೀಸ್ ಠಾಣೆಯಲ್ಲಿ ವಂಚನೆ ಆರೋಪದಡಿ ಲಿಖಿತ ದೂರು ದಾಖಲಿಸಿದ್ದಾರೆ. ಅಲ್ಲದೇ, ಘಟನೆಗೆ ಸಂಬಂಧಿಸಿದಂತೆ ಅಲಿಪುರ ನ್ಯಾಯಾಲಯದಲ್ಲಿ ಪ್ರಕರಣವೂ ದಾಖಲಾಗಿದೆ.

ನುಸ್ರತ್ ಜಹಾನ್ ಕಂಪನಿಯು ವಸತಿ ಗೃಹಗಳ ಹೆಸರಿನಲ್ಲಿ ತಲಾ 5 ಲಕ್ಷ 55 ಸಾವಿರ ರೂ.ಗಳನ್ನು ತೆಗೆದುಕೊಂಡಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಹಣವನ್ನು ತೆಗೆದುಕೊಳ್ಳುವ ಸಮಯದಲ್ಲಿ 2018ರಲ್ಲಿ 3 ಬಿಎಚ್‌ಕೆ ಫ್ಲಾಟ್ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಇದಾಗಿ ಐದು ವರ್ಷ ಕಳೆದರೂ ಇನ್ನೂ ವಸತಿ ಸೌಲಭ್ಯ ಸಿಕ್ಕಿಲ್ಲ. ಆದ್ದರಿಂದ ಪೊಲೀಸ್​ ಹಾಗೂ ಕಾನೂನು ಮೊರೆ ಹೋಗಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯಕ್ಕೂ ದೂರು: ಮತ್ತೊಂದೆಡೆ, ಇದೇ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಸಂಕು ದೇಬ್ ಪಾಂಡಾ ದೂರುದಾರರನ್ನು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಕರೆದೊಯ್ದಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ತೃಣಮೂಲ ಕಾಂಗ್ರೆಸ್ ಸಂಸದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪರಿಹಾರ ಹುಡುಕಲು ಇಡಿಯನ್ನು ಸಂಪರ್ಕಿಸಿದ್ದೇವೆ ಎಂದು ಬಿಜೆಪಿ ನಾಯಕ ಪಾಂಡಾ ಹೇಳಿದ್ದಾರೆ.

ಇದೇ ವೇಳೆ ಪ್ರಕರಣದಲ್ಲಿ ಖುದ್ದು ಹಾಜರಾಗುವಂತೆ ನುಸ್ರತ್ ಜಹಾನ್ ಅವರಿಗೆ ನ್ಯಾಯಾಲಯ ಸಮನ್ಸ್ ನೀಡಿದೆ ಎಂದು ಪಾಂಡಾ ಹೇಳಿದ್ದಾರೆ. ಆದರೆ, ಅವರು ನಿಯಮಿತವಾಗಿ ನ್ಯಾಯಾಲಯದ ಸಮನ್ಸ್‌ಗಳನ್ನು ತಪ್ಪಿಸುತ್ತಿದ್ದರು. ಮುಂದಿನ 48 ಗಂಟೆಗಳಲ್ಲಿ ಮೋಸ ಹೋದವರಿಗೆ ನ್ಯಾಯ ಸಿಗದಿದ್ದರೆ ಬೀದಿಗಿಳಿಯುವುದಾಗಿಯೂ ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಗರಿಯಾಹತ್ ಠಾಣೆಯ ಪೊಲೀಸರು ಇಡೀ ಘಟನೆ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ತನ್ನ ಮಗುವಿಗೆ ತಂದೆ ಯಾರೆಂಬುದಕ್ಕೆ ಸುಳಿವು ನೀಡಿದ್ರು ಟಿಎಂಸಿ ಸಂಸದೆ ನುಸ್ರತ್ ಜಹಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.