ಇಂದೋರ್(ಮಧ್ಯಪ್ರದೇಶ): ತಂತ್ರಜ್ಞಾನ ಅಭಿವೃದ್ಧಿಯಾದಂತೆ ಮಹಿಳೆ ಪುರುಷನಾಗುವುದು ಮತ್ತು ಪುರುಷ ಮಹಿಳೆಯಾಗುವುದು ಸಾಮಾನ್ಯ ಎಂಬಂತಾಗಿದೆ. ಹೆಣ್ಣಾಗಿ ಬದುಕಲು ತೊಂದರೆಗೆ ಒಳಗಾಗುತ್ತಿದ್ದೇನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೋರ್ವಳು ಗಂಡಾಗಿ ಪರಿವರ್ತನೆಯಾಗಿರುವ ವಿಚಿತ್ರ ಮತ್ತು ವಿಶೇಷ ಎಂಬಂತ ಘಟನೆ ಇಂದೋರ್ನಲ್ಲಿ ಬೆಳಕಿಗೆ ಬಂದಿದೆ.
ಹೌದು, ಸುಮಾರು 47 ವರ್ಷದ ಅಲ್ಕಾ ಸೋನಿ ಈಗ ಅಸ್ತಿತ್ವ್ ಸೋನಿಯಾಗಿ ಬದಲಾಗಿದ್ದಾರೆ. ಮುಂಬೈನ ಆಸ್ಪತ್ರೆಯೊಂದರಲ್ಲಿ ಅತ್ಯಂತ ಸಂಕೀರ್ಣವಾದ ಲಿಂಗಪರಿವರ್ತನಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಂತರ ನಾನು ಗಂಡುಮಗುವಾಗಿ ಜನಿಸಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಹುಟ್ಟಿನಿಂದ ಹೆಣ್ಣಾಗಿ ಇದ್ದ ಅಲ್ಕಾ ಸೋನಿ ತನ್ನ 20ನೇ ವಯಸ್ಸಿನಲ್ಲಿ ಹೆಣ್ಣಾಗಿ ಆರಾಮಾದಾಯಕವಾಗಿ ಬದುಕಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೂ ಮುನ್ನವೇ ಪುರುಷರ ರೀತಿಯ ಜೀವನಶೈಲಿ ಅನುಸರಿಸಿದ್ದರು ಮತ್ತು ಪುರುಷರ ಉಡುಪುಗಳನ್ನು ಅಲ್ಕಾ ಧರಿಸುತ್ತಿದ್ದರು. ಆದರೆ ಹೆಣ್ಣಿನ ದೈಹಿಕ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದ ಪುರುಷರಂತೆ ತೋರ್ಪಡಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಈ ಬಗ್ಗೆ ಪೋಷಕರೊಂದಿಗೆ ಅಲ್ಕಾ ಮಾತನಾಡಿದ್ದರು. ಹುಡುಗನಾಗಿ ಬದಲಾಗುವುದರ ಕಡೆಗೆ ಯೋಚನೆ ನಡೆಸಿದ್ದರು. ಹುಡುಗಿಯಿಂದ ಹುಡುಗನಾಗುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ ಅಲ್ಕಾ, 'ತಾನು ಜಗತ್ತಿಗೆ ಹೇಗೆ ಬಂದಿದ್ದೇನೆ ಎಂಬುದು ತನ್ನ ನಿಯಂತ್ರಣದಲ್ಲಿಲ್ಲ. ಆದರೆ ಹೇಗೆ ಜಗತ್ತಿನಿಂದ ಹೊರನಡೆಯಬೇಕು ಎಂಬುದನ್ನು ನಾನೇ ನಿರ್ಧರಿಸಬೇಕು' ಎಂದು ಅರಿತುಕೊಂಡು ಲಿಂಗ ಬದಲಾವಣೆಗೆ ಮುಂದಾದರು.
ಇದನ್ನೂ ಓದಿ: ಪಂಜಾಬ್‌ನಲ್ಲಿ ಭ್ರಷ್ಟರಿಗೆ ಹೊಸ ಸಿಎಂ ಶಾಕ್: ಜನರಿಗೆ ತನ್ನದೇ ವಾಟ್ಸಾಪ್ ನಂಬರ್ ನೀಡಿ ದೂರು ಸಲ್ಲಿಸಲು ಅವಕಾಶ
ಕೆಲವು ದಿನಗಳ ಹಿಂದೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಪುರುಷನಾಗಿ ಬದಲಾದ ಅಲ್ಕಾ, 'ಈಟಿವಿ ಭಾರತ'ಕ್ಕೆ ಸಂದೇಶವೊಂದನ್ನು ಕಳುಹಿಸಿದ್ದು, ನನ್ನೊಂದಿಗೆ ಏನಾಯಿತು ಎಂದು ದೇವರನ್ನು ಕೇಳಬೇಡಿ, ಒಂದು ಅನ್ಯಾಯ ನನ್ನಿಂದ ಮುಕ್ತವಾಗಿದೆ' ಕಾವ್ಯಾತ್ಮಕ ಸಂದೇಶ ಕಳುಹಿಸಿದ್ದಾರೆ.
ಜನ್ಮ ದಿನದಂದೇ ಲಿಂಗ ಬದಲಾವಣೆ.. ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅಲ್ಕಾ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನಂತರ, ಶಸ್ತ್ರಚಿಕಿತ್ಸೆಗೆ ಮನೋವೈದ್ಯರ ಅನುಮತಿ ಸೇರಿದಂತೆ ಎಲ್ಲಾ ನಿಯಮಗಳನ್ನು ಪೂರ್ಣಗೊಳಿಸಿದ್ದರು.
ನಂತರ ಅವರ ಫೈಲ್ ಅನ್ನು ಇಂದೋರ್ ಜಿಲ್ಲಾಡಳಿತಕ್ಕೆ ಕಳುಹಿಸಲಾಯಿತು. ಜಿಲ್ಲಾಡಳಿತ ಆನ್‌ಲೈನ್ ಮೂಲಕ ಅನುಮತಿ ನೀಡಿದ ನಂತರ, ಅಲ್ಕಾ ಅವರು ಮಾರ್ಚ್ 14ರಂದು ಮುಂಬೈನ ಡಿಸೈನರ್ ಬಾಡೀಸ್ ಆಸ್ಪತ್ರೆಯಲ್ಲಿ ಅವರದ್ದೇ ಜನ್ಮದಿನದಂದು ಶಸ್ತ್ರಚಿಕಿತ್ಸೆಗೆ ಒಳಗಾದರು. ನಂತರ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅವರು, ನಾನು ಗಂಡುಮಗುವಾಗಿ ಇಂದು ಜನಿಸಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜನ್ಮ ದಿನದಿಂದು ಅವರ ಕುಟುಂಬದ ಕೆಲ ಸದಸ್ಯರು ಉಪಸ್ಥಿತರಿದ್ದರು.