ಉತ್ತರಾಖಂಡ: ವಿಶ್ವದಾದ್ಯಂತ ಕೋವಿಡ್ ತಲ್ಲಣ ಸೃಷ್ಟಿಸಿದೆ. ಇಂಥ ಸಂದರ್ಭದಲ್ಲಿ ನೆಹರು ಪರ್ವತಾರೋಹಣ ಸಂಸ್ಥೆ ಮತ್ತೊಂದು ಸಾಧನೆ ಮಾಡಿದೆ. ಎನ್ಐಎಂನ ಮೂವರು ಸದಸ್ಯರೊಂದಿಗೆ ಜವಾಹರ್ ಪರ್ವತಾರೋಹಣ ಸಂಸ್ಥೆಯ ಮೂವರು ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಏರುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ನೆರೆಯ ನೇಪಾಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆ ಚೀನಾ ತನ್ನ ದಿಕ್ಕಿನಿಂದ ಬರುವವರಿಗೆ ಮೌಂಟ್ ಎವರೆಸ್ಟ್ ಏರುವ ಪ್ರಯತ್ನವನ್ನು ರದ್ದುಗೊಳಿಸಿತ್ತು. ಸೋಂಕಿನ ಪ್ರಕರಣಗಳು ಇಳಿಮುಖವಾದ ಹಿನ್ನೆಲೆ ಡ್ರ್ಯಾಗನ್ ರಾಷ್ಟ್ರ ಕೋವಿಡ್ ನಿಯಮಾವಳಿಗಳೊಂದಿಗೆ ಪರ್ವತಾರೋಹಣಕ್ಕೆ ಅವಕಾಶ ಮಾಡಿಕೊಟ್ಟಿತ್ತು.