ETV Bharat / bharat

ಗುಡ್ಡ ಸೀಳಿ ರಸ್ತೆ ನಿರ್ಮಿಸಿದ್ದ ದಶರಥ್ ಮಾಂಝಿ: ಪತ್ನಿ ಮೇಲಿನ ಪ್ರೀತಿಯ ದ್ಯೋತಕ ಈಗ ಪ್ರೇಮಕಥೆ - ದಶರಥ್ ಮಾಂಝಿ ಸಮಾಧಿ ಈಗ ಪ್ರಸಿದ್ಧ ಪ್ರವಾಸಿ ತಾಣ

ಮೌಂಟೇನ್ ಮ್ಯಾನ್ ದಶರಥ್ ಮಾಂಝಿ ಸಮಾಧಿ ಈಗ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. 22 ವರ್ಷಗಳ ಕಾಲ ಕಷ್ಟಪಟ್ಟು ದಶರಥ್ ಮಾಂಝಿ ಗುಡ್ಡವನ್ನೇ ಸೀಳಿ ರಸ್ತೆ ನಿರ್ಮಿಸಿದ್ದರು. ತಮ್ಮ ಹೆಂಡತಿಯ ಮೇಲಿನ ಅಪಾರ ಪ್ರೀತಿಯಿಂದ ಪರ್ವತವನ್ನೇ ಇವರು ಸೀಳಿದ್ದರು. ಇಂದು ಅವರ ಸಮಾಧಿಯನ್ನು ಬಿಹಾರದ ತಾಜ್ ಮಹಲ್ ಎಂದೂ ಕರೆಯಲಾಗುತ್ತದೆ.

mountain-man-dashrath-manjhi-valentine-day-special

author img

By

Published : Feb 14, 2023, 5:53 PM IST

ಗಯಾ: ಬಿಹಾರದ ಗಯಾ ಗೆಹ್ಲೌರ್ ಕಣಿವೆಯಲ್ಲಿ ಬಾಬಾ ದಶರಥ್ ಮಾಂಝಿ ಅವರ ಸಮಾಧಿ ಇದೆ. ಈಗ ಜನರು ಇದನ್ನು ಬಿಹಾರದ ತಾಜ್ ಮಹಲ್ ಎಂದು ಕರೆಯಲು ಪ್ರಾರಂಭಿಸಿದ್ದಾರೆ. ದೇಶವಷ್ಟೇ ಅಲ್ಲ, ವಿದೇಶಿ ಪ್ರವಾಸಿಗರೂ ಇಲ್ಲಿಗೆ ಆಗಮಿಸಿ ಶುಭಾಶಯ ಕೋರುತ್ತಾರೆ. ಇದು ಪ್ರೀತಿಯ ಸಂಕೇತವಾಗಿ ದೇಶಾದ್ಯಂತ ಹೆಸರುವಾಸಿಯಾಗಿದೆ. ತನ್ನ ಪತ್ನಿಯ ಪ್ರೀತಿಯಲ್ಲಿ 22 ವರ್ಷಗಳ ಅವಿರತ ಪ್ರಯತ್ನದಿಂದ, ಬಾಬಾ ದಶರಥ್ ಮಾಂಝಿ ಗೆಹ್ಲೌರ್‌ನಲ್ಲಿರುವ 360 ಅಡಿ ಎತ್ತರದ ಪರ್ವತವನ್ನು ಸೀಳುವ ಮೂಲಕ ದಾರಿ ಮಾಡಿದ್ದರು. ಇಲ್ಲಿಗೆ ಬರುವ ಪ್ರವಾಸಿಗರು ಜಗತ್ತಿನಲ್ಲಿ ಪ್ರೀತಿ ಎಂಬುದು ಇದೆ ಎಂದು ಹೇಳುತ್ತಾರೆ. ನೀವು ಪ್ರೀತಿಯನ್ನು ತಿಳಿದುಕೊಳ್ಳಲು ಬಯಸಿದರೆ ಖಂಡಿತವಾಗಿಯೂ ಗೆಹ್ಲೌರ್‌ಗೆ ಬನ್ನಿ. ತಮ್ಮ ಪ್ರೀತಿಯ ಯಶಸ್ಸನ್ನು ಕೇಳಲು ಪ್ರೇಮಿಗಳು ಸಹ ಇಲ್ಲಿಗೆ ಬರುತ್ತಾರೆ.

ಬಾಬಾ ದಶರಥ್ ಮಾಂಝಿ ಅವರ ಪ್ರೇಮಕಥೆ ಅನನ್ಯವಾಗಿದೆ. ದಶರಥ್ ಮಾಂಝಿ ಅವರನ್ನು ಪರ್ವತ ಮನುಷ್ಯ ಎಂದು ಕರೆಯಲಾಗುತ್ತದೆ. ಅವರು 14 ಜನವರಿ 1929 ರಂದು ಜನಿಸಿದರು. ದಶರತ್ ಮಾಂಝಿ ಅವರು ಬಿಹಾರದ ಗಯಾದ ಗೆಹ್ಲೌರ್ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಪತ್ನಿ ಫಲ್ಗುಣಿ ದೇವಿ ಅವರಿಗೆ ಪ್ರತಿನಿತ್ಯ ಆಹಾರ ತಲುಪಿಸುತ್ತಿದ್ದರು. ಒಂದು ದಿನ ಫಲ್ಗುಣಿ ದೇವಿಯು ದಶರತ್ ಮಾಂಝಿಗೆ ಆಹಾರ ಮತ್ತು ಪಾನೀಯದೊಂದಿಗೆ ಪರ್ವತದ ಮೂಲಕ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಅವಳ ಕಾಲು ಜಾರಿತು ಮತ್ತು ಪರ್ವತದ ಮೇಲಿಂದ ಬಿದ್ದು ಆಕೆ ಸತ್ತು ಹೋದಳು.

ಪತ್ನಿಯ ಸಾವಿನಿಂದ ಮನನೊಂದ ದಶರಥ್ ಮಾಂಝಿ ಪರ್ವತವನ್ನು ಕಡಿದು ದಾರಿ ಮಾಡಲು ನಿರ್ಧರಿಸಿದರು. ಇದಾದ ನಂತರ 22 ವರ್ಷಗಳ ಕಾಲ 360 ಅಡಿ ಎತ್ತರದ ಗೆಹ್ಲೌರ್ ಪರ್ವತವನ್ನು ಉಳಿ ಮತ್ತು ಸುತ್ತಿಗೆಯಿಂದ ಸೀಳುವ ಮೂಲಕ ದಾರಿ ಮಾಡಿಕೊಂಡಿದ್ದರು. ಪ್ರೀತಿಯ ಈ ವಿಶಿಷ್ಟ ಕಥೆ ಈಗ ಅಮರವಾಗಿದೆ. ಮೌಂಟೇನ್ ಮ್ಯಾನ್ ದಶರಥ್ ಮಾಂಝಿ 2007 ರಲ್ಲಿ ನಿಧನರಾದರು.

ಗುಡ್ಡವನ್ನು ಸೀಳಿ ಮಾಡಿದ ರಸ್ತೆಯು ಇದೀಗ ಇವರಿಬ್ಬರ ಪ್ರೇಮಕಥೆಯ ಪ್ರತೀಕವಾಗಿದೆ. ಪ್ರೀತಿಯ ಈ ಅದ್ಭುತ ಉದಾಹರಣೆಯನ್ನು ನೋಡಲು ದೇಶ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರು ಸಹ ಇಲ್ಲಿಗೆ ಆಗಮಿಸಿ ತಮ್ಮ ಶುಭಾಶಯಗಳನ್ನು ಕೋರುತ್ತಾರೆ. ಪ್ರೀತಿಯ ದಂಪತಿಗಳು ತಮ್ಮ ಪ್ರೀತಿಯು ಸದಾಕಾಲ ಹಾಗೆಯೇ ಇರಲೆಂದು ಹಾರೈಸಿ ಬಾಬಾ ದಶರಥ್ ಅವರ ಸಮಾಧಿಯಲ್ಲಿ ಬೇಡಿಕೊಳ್ಳುತ್ತಾರೆ. ನೀವು ಪ್ರೀತಿಯನ್ನು ತಿಳಿದುಕೊಳ್ಳಬೇಕಾದರೆ ಗೆಹ್ಲೌರ್ ಗೆ ಹೋಗಿ. ಈ ಸ್ಥಳವು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲೇ ಪ್ರಸಿದ್ಧವಾಗುತ್ತಿದೆ.

ಈಗ ಗೆಹ್ಲೌರ್ ಕಣಿವೆಯಲ್ಲಿ ಬಾಬಾ ದಶರಥ್ ಮಾಂಝಿ ಅವರ ಸಮಾಧಿ ಇದೆ. ಇಲ್ಲಿ ಉದ್ಯಾನವನವೂ ಇದೆ. ಇದನ್ನು ದೊಡ್ಡ ಪ್ರವಾಸಿ ತಾಣವನ್ನಾಗಿ ಮಾಡುವ ಯೋಜನೆಯನ್ನೂ ಸರ್ಕಾರ ಹೊಂದಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಂದ ಹಿಡಿದು ಹಲವಾರು ಖ್ಯಾತ ರಾಜಕೀಯ ವ್ಯಕ್ತಿಗಳು ಕೂಡ ಬಾಬಾ ಸಮಾಧಿಗೆ ಭೇಟಿ ನೀಡಿದ್ದಾರೆ. ಸಿನಿಮಾ ನಟ ಅಮೀರ್ ಖಾನ್‌ ಸೇರಿದಂತೆ ಅನೇಕ ದೊಡ್ಡ ಸೆಲೆಬ್ರಿಟಿಗಳು ಸಹ ಇಲ್ಲಿಗೆ ಬಂದು ಹೋಗಿದ್ದಾರೆ. ಬಾಲಿವುಡ್​ನಲ್ಲಿ ಬಾಬಾ ಹೆಸರಿನಲ್ಲಿ ಸಿನಿಮಾ ಕೂಡ ನಿರ್ಮಾಣವಾಗಿದೆ. ದಶರಥ ಮಾಂಝಿ ಅವರ ಸ್ಮರಣಾರ್ಥ ಸರ್ಕಾರ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದೆ.

ಗೆಹ್ಲೌರ್ ಕಣಿವೆಯಲ್ಲಿರುವ ಪ್ರೀತಿಯ ಸಂಕೇತವಾದ ಬಾಬಾ ದಶರಥನ ಸಮಾಧಿಯ ಬೇಟಿಗೆ ಬಂದಿದ್ದ ಆರತಿ ಕುಮಾರಿ ಎಂಬುವರು ಮಾತನಾಡಿದರು. ದಶರಥ ಮಾಂಝಿ ಪರ್ವತವನ್ನು ಕತ್ತರಿಸುವ ಮೂಲಕ ದಾರಿ ಮಾಡಿದರು. ಏಕಾಂಗಿಯಾಗಿ ಇಷ್ಟು ದೊಡ್ಡ ಸಾಹಸ ಮಾಡಿದ್ದು ದೊಡ್ಡ ವಿಷಯ ಮತ್ತು ಇದು ಮಹಾನ್ ಪ್ರೀತಿಯ ಸಂಕೇತವಾಗಿ ನಮ್ಮ ಮುಂದೆ ಇದೆ. ಜನರು ಜಗತ್ತಿನಲ್ಲಿ ಪ್ರೀತಿಯ ಬಗ್ಗೆ ಮಾತನಾಡುತ್ತಾರೆ, ನೀವು ಪ್ರೀತಿಯನ್ನು ತಿಳಿದುಕೊಳ್ಳಲು ಬಯಸಿದರೆ ಖಂಡಿತವಾಗಿಯೂ ಇಲ್ಲಿಗೆ ತಲುಪಿ. ಪ್ರೀತಿಯ ಈ ವಿಶಿಷ್ಟ ಸ್ಥಳವು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಪ್ರಸಿದ್ಧವಾಗಬೇಕು ಎಂದು ಆರತಿ ಕುಮಾರಿ ಹೇಳಿದರು.

ಇಲ್ಲಿಗೆ ಬಂದಿದ್ದ ಮತ್ತೋರ್ವ ಪ್ರವಾಸಿ ಡಾ.ರವೀಂದ್ರ ಕುಮಾರ್ ಮಾತನಾಡಿ, ಈ ಸ್ಥಳವು ಪ್ರೀತಿಯ ನಿಜವಾದ ಸಂಕೇತವಾಗಿದೆ. ತಾಜ್ ಮಹಲ್ ಅನ್ನು ನೂರಾರು ಕುಶಲಕರ್ಮಿಗಳು ಸೇರಿ ನಿರ್ಮಿಸಿದ್ದಾರೆ. ಆದರೆ ಇಲ್ಲಿ ಗ್ರೇಟ್ ಮ್ಯಾನ್ ಏಕಾಂಗಿಯಾಗಿ ಪ್ರೇಮಕಥೆ ಬರೆದಿದ್ದಾರೆ. ತಾಜ್ ಮಹಲ್ ಅನ್ನು ಮುಮ್ತಾಜ್ ನೆನಪಿಗಾಗಿ ಷಹಜಹಾನ್ ನಿರ್ಮಿಸಿದನು, ಆದರೆ ಇದು ಅದಕ್ಕಿಂತಲೂ ದೊಡ್ಡ ಮಹಾನ್ ಪ್ರೀತಿಯ ಕಥೆಯಾಗಿದೆ. ಸರ್ಕಾರ ಈ ಸ್ಥಳವನ್ನು ಉತ್ತಮವಾಗಿ ಅಭಿವೃದ್ಧಿಪಡಿಸಬೇಕು ಎಂದರು.

ಈ ಪ್ರೇಮಕಥೆಯ ರೂವಾರಿ ದಶರತ್ ಮಾಂಝಿ ಪುತ್ರ ಭಗೀರಥ್ ಮಾಂಝಿ ಮಾತನಾಡಿ, ಬಾಬಾ ಕುಟುಂಬಕ್ಕೆ ಸರ್ಕಾರ ಏನೂ ಕೊಟ್ಟಿಲ್ಲ ಎಂದರು. ನಮ್ಮ ಕುಟುಂಬದ ಯಾರಿಗೂ ಕೆಲಸ ಕೊಟ್ಟಿಲ್ಲ. ಅನೇಕ ಭರವಸೆಗಳನ್ನು ನೀಡಲಾಗಿತ್ತು, ಆದರೆ ಯಾವುದೇ ಭರವಸೆ ಈಡೇರಿಸಿಲ್ಲ. ನನ್ನ ತಂದೆ ದಶರಥ್ ಮಾಂಝಿ ಮಾಡಿದ ಕೆಲಸವನ್ನು ಸರ್ಕಾರ ನಿರ್ಲಕ್ಷಿಸಿದ್ದು, ಕುಟುಂಬ ಸದಸ್ಯರು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ವಿದ್ಯಾವಂತ ಸೊಸೆಗೂ ಕೆಲಸ ಕೊಟ್ಟಿಲ್ಲ ಎಂದು ವಿಷಾದಿಸಿದರು.

ಇದನ್ನೂ ಓದಿ: ಇಂದು ಪ್ರೇಮಿಗಳ ದಿನ: ಯಾಕೆ ಈ ದಿನ ಆಚರಿಸುತ್ತಾರೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.