ETV Bharat / bharat

ಇಬ್ಬರು ಮಕ್ಕಳನ್ನು ದೇಹಕ್ಕೆ ಕಟ್ಟಿಕೊಂಡು ನದಿಗೆ ಹಾರಿದ ಅಮ್ಮ

ಕೇರಳದ ಕೊಲ್ಲಂ ಜಿಲ್ಲೆಯ ಕಲ್ಲಡ ನದಿಯಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರ ಮಕ್ಕಳು ಮೃತ ದೇಹಗಳು ಪತ್ತೆಯಾಗಿವೆ. ಇಬ್ಬರು ಮಕ್ಕಳನ್ನು ದೇಹಕ್ಕೆ ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ತಾಯಿ ಮಾಡಿಕೊಂಡಿದ್ದಾರೆ.

author img

By

Published : Mar 8, 2023, 8:50 PM IST

mother-tied-two-child-to-her-body-and-committed-suicide
ಇಬ್ಬರು ಮಕ್ಕಳನ್ನು ದೇಹಕ್ಕೆ ಕಟ್ಟಿಕೊಂಡು ನದಿಗೆ ಹಾರಿದ ಅಮ್ಮ

ಕೊಲ್ಲಂ (ಕೇರಳ): ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಭಾರಿ ದುರಂತ ನಡೆದಿದೆ. ತಾಯಿಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ದೇಹಕ್ಕೆ ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊಲ್ಲಂ ಜಿಲ್ಲೆಯ ಪುನಲೂರು ಮೂಲದ ರಮ್ಯಾ ರಾಜ್ (30) ಎಂಬುವವರೇ ಮಕ್ಕಳ ಸಮೇತ ಸಾವಿಗೆ ಶರಣಾದ ಮಹಿಳೆ.

ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಪುನಲೂರು ರಬ್ಬರ್ ಪಾರ್ಕ್​ ಬಳಿ ಈ ದುರ್ಘಟನೆ ನಡೆದಿದೆ. ರಮ್ಯಾ ತನ್ನ 5 ವರ್ಷದ ಮಗಳು ಸರಯೂ ಮತ್ತು 3 ವರ್ಷದ ಮಗ ಸೌರಭ್​ನನ್ನು ದೇಹಕ್ಕೆ ಸೀರೆಯಿಂದ ಕಟ್ಟಿಕೊಂಡು ಇಲ್ಲಿನ ಕಲ್ಲಡ ನದಿಗೆ ಹಾರಿದ್ದಾರೆ. ಇದರಿಂದ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಈ ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ರಮ್ಯಾ ಸೇರಿ ಮಕ್ಕಳನ್ನು ನದಿಯಿಂದ ದಡಕ್ಕೆ ತಂದಿದ್ದಾರೆ. ಆದರೂ, ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಮತ್ತೊಂದೆಡೆ, ಮಕ್ಕಳ ಸಮೇತವಾಗಿ ರಮ್ಯಾ ಆತ್ಮಹತ್ಯೆಗೆ ಮಾಡಿಕೊಂಡಿರುವುದಕ್ಕೆ ಕಾರಣ ಏನು ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸದ್ಯದ ಮಾಹಿತಿ ಪ್ರಕಾರ, ಕೌಟುಂಬಿಕ ಸಮಸ್ಯೆಯಿಂದ ಈ ಕನಿಷ್ಠ ನಿರ್ಧಾರಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ.

ನದಿಯಿಂದ ಹೊರ ತೆಗೆದ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪುನಲೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಈ ಘಟನೆ ಬಗ್ಗೆ ಪುನಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಮೃತ ರಮ್ಯಾ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಉಮೇಶ್ ಪಾಲ್ ಕೊಲೆ ಕೇಸ್​: ಆರೋಪಿ ಎನ್‌ಕೌಂಟರ್​ ಬಗ್ಗೆ ಪತ್ನಿ ಆಕ್ಷೇಪ.. ನನ್ನ ಪತಿ, ಪೊಲೀಸರ ಮಧ್ಯೆ ಏನು ವ್ಯತ್ಯಾಸ ಎಂದು ಪ್ರಶ್ನೆ

ಬೆಳಗಾವಿಯಲ್ಲಿ ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ: ಕರ್ನಾಟಕದ ಬೆಳಗಾವಿಯಲ್ಲೇ ಇಂತಹದ್ದೇ ಘಟನೆ ಇಂದು ನಡೆದಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಹಿಳೆಯೊಬ್ಬರು ತನ್ನ ಮೂವರು ಹೆಣ್ಣು ಮಕ್ಕಳ ಸಮೇತವಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಲ್ಲಿನ ಅನಗೋಳದ ನಿವಾಸಿ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ್​​​ ಎಂಬುವವರೇ ತನ್ನ 14 ವರ್ಷ, 8 ಹಾಗೂ 3 ವರ್ಷ ವಯಸ್ಸಿನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಎಂದು ಗುರುತಿಸಲಾಗಿದೆ.

ಕಳೆದ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಮಾಡಿಕೊಂಡು ಸರಸ್ವತಿ ಕುಟಮಬ ವಾಸವಾಗಿತ್ತು. ಪತಿ ಅದೃಶ್ಯಪ್ಪ ಹಂಪಣ್ಣವರ್​​​ ಲೂನ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ‌ರು. ಆದರೆ, ಸಾಲ ಬಾಧೆಯಿಂದ ಕಳೆದ 15 ದಿನಗಳ ಹಿಂದೆ ಅದೃಶ್ಯಪ್ಪ ಮನೆ ಬಿಟ್ಟು ‌ಹೋಗಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಭೇಟಿಗಾಗಿ ಮಕ್ಕಳ ಸಮೇತ ಸರಸ್ವತಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಗ ಕಚೇರಿ ಸಿಬ್ಬಂದಿ ತಕ್ಷಣವೇ ತಾಯಿ ಹಾಗೂ ಮಕ್ಕಳನ್ನು ನಗರದ ಸಮುದಾಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ದಾಖಲಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ: ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಎರಡು ಶವಗಳು ಪತ್ತೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.