ಥಾಣೆ(ಮಹಾರಾಷ್ಟ್ರ): ನವಜಾತ ಗಂಡು ಶಿಶುವಿಗೆ ಜನ್ಮ ನೀಡಿದ್ದ ಮಹಿಳೆಯೋರ್ವಳು 1 ಲಕ್ಷ ರೂ.ಗೆ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ತಾಯಿಯಿಂದಲೇ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಹಿಳೆ ಮೊದಲ ಮದುವೆಯಿಂದ ಈಗಾಗಲೇ ಮಕ್ಕಳನ್ನು ಹೊಂದಿದ್ದು, ಅವುಗಳನ್ನು ಸಾಕಲು ಕಷ್ಟಪಡುತ್ತಿದ್ದಾರೆ. ಮೊದಲನೇ ಗಂಡ ಸಾವನ್ನಪ್ಪಿದ್ದರಿಂದ ಮತ್ತೋರ್ವನೊಂದಿಗೆ ಮದುವೆ ಮಾಡಿಕೊಂಡಿದ್ದು, ಈ ವೇಳೆ ಗರ್ಭಿಣಿಯಾಗಿದ್ದಳು. ಈ ವೇಳೆ ಆಸ್ಪತ್ರೆಗೆ ತೆರಳಿ ಗರ್ಭಪಾತ ಮಾಡುವಂತೆ ಕೇಳಿಕೊಂಡಿದ್ದಾಳೆ. ಈ ವೇಳೆ ವೈದ್ಯರು ಗರ್ಭಪಾತ ಮಾಡಿಸಿಕೊಳ್ಳುವ ಬದಲು ಮಗುವಿಗೆ ಜನ್ಮ ನೀಡಿ, ಮಾರಾಟ ಮಾಡುವಂತೆ ಸಲಹೆ ನೀಡಿದ್ದಾಳೆ. ಅದರಂತೆ ನವೆಂಬರ್ 10ರಂದು ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕೆಲ ದಿನಗಳ ನಂತರ ಅದನ್ನ ವೈದ್ಯರ ಬಳಿಗೆ ಕರೆದೊಯ್ದು 1 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆ.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಯುವತಿ ಮೇಲೆ ಫೇಸ್ಬುಕ್ ಗೆಳೆಯನಿಂದ ಅತ್ಯಾಚಾರ
ಮಗು ಮಾರಾಟ ಮಾಡಿ ಮನೆಗೆ ಬಂದಿರುವ ಮಹಿಳೆ ಎರಡು ದಿನಗಳ ನಂತರ ಮಗು ಹಿಂತಿರುಗಿಸುವಂತೆ ವೈದ್ಯರ ಬಳಿ ಕೇಳಿದ್ದಾಳೆ. ಈ ವೇಳೆ ಆಕೆಯ ಮನವಿಯನ್ನು ವೈದ್ಯರು ತಳ್ಳಿಹಾಕಿದ್ದಾರೆ. ಇದರ ಬೆನ್ನಲ್ಲೇ ಆಕೆ ಎನ್ಜಿಒವೊಂದನ್ನು ಸಂಪರ್ಕ ಮಾಡಿದ್ದಾಳೆ. ಎನ್ಜಿಒ ನೀಡಿರುವ ದೂರಿನ ಆಧಾರದ ಮೇಲೆ ಡೊಂಬಿವಿಲಿ ಪೊಲೀಸರು ದಂಪತಿ ಮತ್ತು ವೈದ್ಯರ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿ ದೂರು ದಾಖಲು ಮಾಡಿಕೊಂಡಿದ್ದಾರೆ. ಜೊತೆಗೆ ಮೂವರ ಬಂಧನ ಮಾಡಿದ್ದಾರೆ.
ಇದೀಗ ಆರೋಪಿ ವೈದ್ಯರು ಈ ಹಿಂದೆ ಕೂಡ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.