ಮಥುರಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಥುರಾದ ವೃಂದಾವನ ಪೊಲೀಸ್ ಠಾಣೆ ವ್ಯಾಪ್ತಿಯ ಚಾಮುಂಡಾ ಘಾಟ್‌ನ ಯಮುನಾ ನದಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. ನದಿಯಲ್ಲಿ ಕಬ್ಬಿಣದ ಹಲಗೆಯೊಂದರಲ್ಲಿ ತೇಲುತ್ತಿದ್ದ ಮಗುವನ್ನು ಸ್ಥಳೀಯರ ಸಹಕಾರದಿಂದ ರಕ್ಷಿಸಲಾಗಿದೆ.
ಯಮುನಾ ನದಿಯಲ್ಲಿ ತೇಲುತ್ತಿದ್ದ ಹಲಗೆಯೊಂದರ ಮೇಲೆ ತೇಲುತ್ತಿದ್ದ ಪುಟ್ಟ ಕಂದನನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ನಂತರ ಶಿಶುವನ್ನು ವೈದ್ಯಕೀಯ ಪರೀಕ್ಷೆಗೆಂದು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಮುಂಬೈನಲ್ಲಿ ಸ್ಥಾಪನೆಯಾಗಲಿದೆ ಭಾರತದ ಮೊದಲ 'ಮಕ್ಕಳ ಕೋವಿಡ್ ಕೇರ್ ಸೆಂಟರ್'
ಜಿಲ್ಲಾಸ್ಪತ್ರೆಯ ವೈದ್ಯ ಕಿಶೋರ್ ಮಾಥುರ್ ಅವರು ಮಗು ಆರೋಗ್ಯವಾಗಿದೆ. ಸುಮಾರು 3 ಕೆ.ಜಿ ತೂಕವಿದೆ ಮತ್ತು ತೃತೀಯ ಲಿಂಗಿಯಾಗಿದೆ ಎಂದು ಹೇಳಿದ್ದಾರೆ.
ಮಗು ತೃತೀಯ ಲಿಂಗಿಯಾದ ಕಾರಣ ತಾಯಿಯು ನವಜಾತ ಶಿಶುವನ್ನು ತ್ಯಜಿಸಿರಬಹುದು. ಅದೇ ಕಾರಣಕ್ಕೆ ಮಗುವನ್ನು ನದಿಯಲ್ಲಿ ಬಿಟ್ಟು ಹೋಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.