ಕಡಪ(ಆಂಧ್ರಪ್ರದೇಶ): ಮಗಳು ನಿರಂತರವಾಗಿ ಮೊಬೈಲ್ ಫೋನ್ನಲ್ಲಿ ಬ್ಯುಸಿಯಾಗಿರುತ್ತಾಳೆ ಎಂಬ ಆಕ್ರೋಶದಲ್ಲಿ ತಾಯಿಯೊಬ್ಬಳು ಹೆತ್ತ ಮಗಳ ಕೊಲೆ ಮಾಡಿದ್ದು, ಇದರಿಂದ ಆಕ್ರೋಶಗೊಂಡಿರುವ ಮಗ ಹೆತ್ತಮ್ಮನ ಕೊಲೆ ಮಾಡಿದ್ದಾನೆ. ಈ ಘಟನೆ ಆಂಧ್ರಪ್ರದೇಶದ ಕಡಪದಲ್ಲಿ ನಡೆದಿದೆ.
![Mother killed Daughter](https://etvbharatimages.akamaized.net/etvbharat/prod-images/13420632_twdfdffdfd.jpg)
ಮಗಳು ಏನೂ ಕೆಲಸ ಮಾಡಲ್ಲ. ಬರೀ ಮೊಬೈಲ್ ಫೋನ್ನಲ್ಲಿ ಸಮಯ ವ್ಯರ್ಥ ಮಾಡುತ್ತಾಳೆಂದು ಆಕ್ರೋಶಗೊಂಡ ತಾಯಿ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಮಗ ಕೂಡ ತಾಯಿಯನ್ನು ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ತಾಯಿ ಶೇಖ್ ಕ್ರುಶಿದಾ ಹಾಗೂ ಮಗಳು ಅಲಿಮಾ ಮೃತಪಟ್ಟಿದ್ದಾರೆ.
![Andra pradesh news](https://etvbharatimages.akamaized.net/etvbharat/prod-images/ap-cdp-18-21-talli-bidda-murder-av-ap10040_21102021151138_2110f_1634809298_669_2110newsroom_1634826128_324.jpg)
ಇದನ್ನೂ ಓದಿರಿ: 100 ಕೋಟಿ ಲಸಿಕೆ ನೀಡಿ ಭಾರತ ದಾಖಲೆ..100 ಐತಿಹಾಸಿಕ ಸ್ಮಾರಕಗಳಲ್ಲಿ ತ್ರಿವರ್ಣ ವಿದ್ಯುತ್ ದೀಪಾಲಂಕಾರ
ಶೇಖ್ ಹುಸೇನ್ ಹಾಗೂ ಶೇಖ್ ಕ್ರುಶಿದಾ ದಂಪತಿಗೆ ಇಬ್ಬರು ಮಕ್ಕಳು. ಮಗಳು ಅಲಿಮಾ ಹಾಗೂ ಮಗ ಜಮೀರ್. ಹುಸೇನ್ ಮತ್ತು ಕ್ರುಶಿದಾ ನಡುವೆ ಮೇಲಿಂದ ಮೇಲೆ ಜಗಳವಾಗುತ್ತಿತ್ತು. ಹೀಗಾಗಿ ಕಳೆದ ಕೆಲ ದಿನಗಳಿಂದ ಗಂಡನಿಂದ ಬೇರೆಯಾಗಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದಳು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಈಗಾಗಲೇ ಜಮೀರ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.