ETV Bharat / bharat

ಗಂಡ ಮದ್ಯ ವ್ಯಸನಿ, ಕೋವಿಡ್‌ನಿಂದ ಕೆಲಸವಿಲ್ಲದ ಬದುಕು.. ಇಬ್ಬರು ಹೆಣ್ಮಕ್ಕಳನ್ನು ಕೊಂದು ಸಾವಿಗೆ ಶರಣಾದ ತಾಯಿ! - ತೆಲಂಗಾಣದ ಅಪರಾಧ ಸುದ್ದಿ

ಇಬ್ಬರು ಹೆಣ್ಮಕ್ಕಳನ್ನು ನೇಣು ಬಿಗಿದು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದಿದೆ.

mother-hanged-her-three-daughters-and-committed-suicide
ಹೆಣ್ಮಕ್ಕಳನ್ನು ನೇಣು ಬಿಗಿದು ಕೊಂದು ತಾಯಿ ಆತ್ಮಹತ್ಯೆ
author img

By

Published : Jul 8, 2021, 3:40 PM IST

ಯದಾದ್ರಿ ಭುವವನಗಿರಿ(ತೆಲಂಗಾಣ): ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು, ನಂತರ ತಾಯಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಯದಾದ್ರಿ ಭುವನಗಿರಿಯ ಜಿಲ್ಲೆಯ ಚೋಟುಪ್ಪಲ್​ ಎಂಬಲ್ಲಿ ನಡೆದಿದೆ

ತೋರುಪುನುರಿ ವೆಂಕಟೇಶ್​ ಮತ್ತು ರಾಣಿ ಎಂಬ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಇಬ್ಬರೂ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಕೊರೊನಾ ಸಾಂಕ್ರಾಮಿಕದ ವೇಳೆ ಯಾವುದೇ ಕೆಲಸವಿಲ್ಲದ ಕಾರಣದಿಂದ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಕಠಿಣವಾಗಿತ್ತು. ಇದರೊಂದಿಗೆ ವೆಂಕಟೇಶ್ ಮದ್ಯ ವ್ಯಸನಿಯಾಗಿದ್ದು, ಮನೆಯ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡುವಂತೆ ಮಾಡಿತ್ತು.

ಇದರಿಂದ ನೊಂದ ರಾಣಿ ತಾನು ಸಾಯಲು ಇಚ್ಛಿಸಿದ್ದಳು. ನಂತರ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದ ಆಕೆ ಅವರನ್ನೂ ಕೂಡಾ ಕೊಲ್ಲಲು ನಿರ್ಧರಿಸಿ, ತನ್ನ ಸೀರೆಯಲ್ಲಿ ಮೂವರನ್ನು ನೇಣು ಹಾಕಿ, ತಾನೂ ಕೂಡಾ ನೇಣುಹಾಕಿಕೊಂಡಿದ್ದಳು.

ಇದನ್ನೂ ಓದಿ: ಅಮಾವಾಸ್ಯೆ-ಹುಣ್ಣಿಮೆಗೆ ಕ್ಷೇತ್ರಕ್ಕೆ ಬರುವ ಸಂಸದರಿದ್ದರೆ ಅದು ಸುಮಲತಾ ಮಾತ್ರ: ಕೆ.ಟಿ. ಶ್ರೀಕಂಠೇಗೌಡ

ಅದೃಷ್ಟವಶಾತ್ ಕುತ್ತಿಗೆಗೆ ಬಿದ್ದ ಕುಣಿಕೆ ಸಡಿಲವಾಗಿದ್ದ ಕಾರಣದಿಂದ ಕೊನೆಯ ಮಗು ಪ್ರಾಣಾಪಾಯದಿಂದ ಪಾರಾಗಿದೆ. ವಿಷಯ ತಿಳಿದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.