ನವದೆಹಲಿ: ಮಹಿಳೆಯೊಬ್ಬರು ಗಾಜಿಯಾಬಾದ್ನ ಸಾರ್ವಜನಿಕ ಶೌಚಾಲಯದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಬುಲಂದ್ಶಹರ್ ಮೂಲದ ಮಹಿಳೆ ತನ್ನ ಪತಿ ದರ್ಶನ್ ಸಿಂಗ್ ಜೊತೆ ಗಾಜಿಯಾಬಾದ್ಗೆ ಬಂದಿದ್ದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ.
ಹೆರಿಗೆ ನೋವು ಕಾಣಿಸಿಕೊಂಡಾಗ ಪಕ್ಕದಲ್ಲೇ ಇದ್ದ ಸಾರ್ವಜನಿಕ ಶೌಚಾಲಯಕ್ಕೆ ಪತಿ ಕರೆದುಕೊಂಡು ಹೋಗಿದ್ದಾನೆ. ಇನ್ನು ವಿಷಯ ಅರಿತ ಪೊಲೀಸ್ ಕಾನ್ಸ್ಟೇಬಲ್ಗಳಾದ ಇಮ್ರಾನ್ ಮತ್ತು ಗುಲ್ ಮೊಹಮ್ಮದ್ ಅವರು ಸ್ಥಳಕ್ಕಾಗಮಿಸಿ ಮಹಿಳೆ ಹೆರಿಗೆ ಸಂದರ್ಭದಲ್ಲಿ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮಹಿಳೆಯು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಹೆರಿಗೆ ಬಳಿಕ ತಾಯಿ ಮತ್ತು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಸಂಬಂಧ ಮಾತನಾಡಿದ ದರ್ಶನ್ ಸಿಂಗ್, "ತಾಯಿ-ಮಕ್ಕಳ ಪ್ರಾಣ ಉಳಿಸಿದ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇನೆ" ಎಂದರು.
ಇನ್ನು 24 ವಾರಗಳ ಮುಂಚೆಯೇ ಮಹಿಳೆಗೆ ಹೆರಿಗೆಯಾಗಿದೆ. ಹೀಗಾಗಿ ತಾಯಿ- ಮಕ್ಕಳನ್ನು ನಿಗಾದಲ್ಲಿ ಇಡಲಾಗಿದೆ ಎಂದು ಡಾ. ಗೌರವ್ ಮಾಹಿತಿ ನೀಡಿದರು.