ಪುರುಲಿಯಾ( ಪಶ್ಚಿಮ ಬಂಗಾಳ): ವಿದ್ಯಾಭ್ಯಾಸಕ್ಕೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಬಲರಾಂಪುರ ವ್ಯಾಪ್ತಿಯಲ್ಲಿ ಬರುವ ಪಾಟಿಡಿ ಗ್ರಾಮದ ನಿವಾಸಿ ದುಲು ಮಹಾಂತಿ ಪಾಟಿ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರಿಗೆ ಸದ್ಯ 39 ವರ್ಷ. ಹೌದು, ಪ್ರಸಕ್ತ ವರ್ಷ ಪದವಿ ಹಂತದ ಮೊದಲ ವರ್ಷದ ಪರೀಕ್ಷೆ ಬರೆಯಲು ತನ್ನ 19 ವರ್ಷದ ಮಗಳು ಇಂದ್ರಾಣಿ ಜೊತೆಗೆ ಹೋಗುತ್ತಿದ್ದಾರೆ. ಪುರುಲಿಯ ಬಾರಾಬಜಾರ್ ಠಾಣಾ ವ್ಯಾಪ್ತಿಯ ನೀಲಮೋಹನಪುರ ನಿವಾಸಿ ದುಲು ದೇವಿ 1999ರಲ್ಲಿ 10ನೇ ತರಗತಿ ಓದುತ್ತಿದ್ದರು. ಆ ಸಮಯದಲ್ಲಿ ಅವರು ಪಾಟಿಡಿ ಗ್ರಾಮದ ದಯಾಮಯ್ ಪಾಟಿಯೊಂದಿಗೆ ವಿವಾಹವಾಗಿದ್ದರು.
ದುಲುದೇವಿಗೆ ಅತ್ತೆಯ ಪ್ರೋತ್ಸಾಹ: ದುಲು ಅತ್ತೆಯ ಪ್ರೋತ್ಸಾಹದಿಂದ ಮತ್ತೆ ಓದತೊಡಗಿದರು. ಅವರು 2018ರಲ್ಲಿ ಮಾಧ್ಯಮಿಕ ಶಾಲೆ ಮತ್ತು 2020ರಲ್ಲಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉತ್ತೀರ್ಣರಾದರು. 70ರ ಹರೆಯದ ಅತ್ತೆ ಪುತುಲುರಾಣಿ ಪಾಟಿ ಕೂಡ ಮಹಿಳೆಗೆ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ನೀಡಿದ್ದಾರೆ. ಈ ವರ್ಷ ಬಲರಾಂಪುರ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ದುಲುದೇವಿ ಬಾರಾಬಜಾರ್ ಕಾಲೇಜಿನಿಂದ ಪದವಿ ಹಂತದ ಪರೀಕ್ಷೆ ಬರೆಯುತ್ತದ್ದಾರೆ. ಮತ್ತೊಂದೆಡೆ ಅದೇ ಬಾರಾಬಜಾರ್ ಕಾಲೇಜಿನ ಶಿಕ್ಷಣ ವಿಭಾಗದ ವಿದ್ಯಾರ್ಥಿನಿ, ದುಲುದೇವಿ ಅವರ ಮಗಳು ಇಂದ್ರಾಣಿ ಕೂಡಾ ಪರೀಕ್ಷೆ ಎದುರಿಸುತ್ತಿದ್ದಾರೆ.
ದುಲುದೇವಿಯ ಮನದಾಳದ ಮಾತು: ಓದಲು ಅವಕಾಶ ಸಿಕ್ಕಿದ್ದು ತುಂಬಾ ಖುಷಿ ತಂದಿದೆ. ಮನೆಯಲ್ಲಿ ಎಲ್ಲರೂ ನನಗೆ ಬೆಂಬಲ ನೀಡಿದ್ದಾರೆ. ನನಗೆ ಯಾವಾಗಲೂ ಓದಬೇಕು ಅನಿಸುತ್ತದೆ. ಆದರೆ, ಚಿಕ್ಕ ಮಕ್ಕಳಿರುವ ಕಾರಣ ನಾನಗೆ ತೊಂದರೆಯಾಗಿತ್ತು. ನಂತರ ನನ್ನ ಮಗ ಮತ್ತು ಮಗಳು ದೊಡ್ಡವರಾಗಿದ್ದಾರೆ. ನಾನು ನನ್ನ ವಿದ್ಯಾಭ್ಯಾಸ ಮಾಡುವ ಬಗ್ಗೆ ಮಾತನಾಡಿದೆ. ಮನೆಯಲ್ಲಿ ಎಲ್ಲರೂ ಒಪ್ಪಿದರು. ನನ್ನ ಮಗಳು ಜೊತೆಗೆ ನಾನು 10ನೇ ತರಗತಿಗೆ ಸೇರಿ, ವಿದ್ಯಾಭ್ಯಾಸ ಮಾಡಲು ಮತ್ತೆ ಆರಂಭಿಸಿದೆ. ಉಚಿತ ಶಾಲೆಯಲ್ಲಿ ನನ್ನ ಓದನ್ನು ಪುನರಾರಂಭಿಸಿದೆ ಎಂದು ದುಲುದೇವಿ ಸಂತಸ ವ್ಯಕ್ತಪಡಿಸುತ್ತಾರೆ.
ತಾಯಿ ಮತ್ತು ಮಗಳು ತಮ್ಮ ಮನೆ ಕೆಲಸ ಮತ್ತು ಅಧ್ಯಯನವನ್ನೂ ಸರಿಯಾಗಿ ನಿಭಾಯಿಸುತ್ತಿದ್ದಾರೆ. ಅಡುಗೆ ಮಾಡಿದ ನಂತರ ತಾಯಿ ಮತ್ತು ಮಗಳು ಪರಸ್ಪರ ಪರೀಕ್ಷೆಯ ದಿನಗಳಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಇನ್ನೂ ಪರೀಕ್ಷೆಗೆ ಹೋಗುವ ಮುನ್ನ ತಾಯಿ - ಮಗಳು ಒಬ್ಬರನ್ನೊಬ್ಬರು ಪ್ರವೇಶ ಪತ್ರ, ಪೆನ್ನು ಸೇರಿಸಿದಂತೆ ವಿವಿಧ ವಸ್ತುಗಳನ್ನು ನೆನಪಿಸಿಕೊಂಡು ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿ ಕಂಡುಬರುತ್ತದೆ.
ತಾಯಿ ನನ್ನ ಉತ್ತಮ ಸ್ನೇಹಿತೆ: "ತಾಯಿ ನನ್ನ ಉತ್ತಮ ಸ್ನೇಹಿತೆಯಾಗಿದ್ದಾಳೆ. ನಾವಿಬ್ಬರೂ ವಿದ್ಯಾರ್ಥಿಗಳು. ಆದ್ದರಿಂದ ನಾವು ಅಡುಗೆಯಿಂದ ಓದುವವರೆಗೆ ಪರಸ್ಪರ ಸಹಾಯ ಮಾಡಿಕೊಳ್ಳುತ್ತೇವೆ. ತಾಯಿ ನನಗೆ ಅನೇಕ ಬಾರಿ ಅಧ್ಯಯನಕ್ಕೆ ಸಂಬಂಧಿಸಿದ ವಿಚಾರಗಳನ್ನು ವಿವರಿಸಲು ಸಹಾಯ ಮಾಡುತ್ತಾರೆ. ನಾನು ಎಂದಿಗೂ ಓದಲು ಬಯಸುವುದಿಲ್ಲ. ಬಹುತೇಕ ಅಧ್ಯಯನದ ವಿಚಾರಗಳನ್ನು ಚರ್ಚೆ ಮಾಡಿಯೇ ನೆನಪಿನಲ್ಲಿ ಇಟ್ಟಿಕೊಳ್ಳುತ್ತೇನೆ" ಎಂದು ಹೇಳುತ್ತಾರೆ ಮಗಳು ಇಂದ್ರಾಣಿ.
ತಾಯಿ- ಮಗಳು ಇಬ್ಬರೂ ಪರೀಕ್ಷೆಯನ್ನು ಚೆನ್ನಾಗಿ ಎದುರಿಸುತ್ತಿದ್ದೇವೆ ಎಂದರು. ಸಹೃದಯಿ ಪತಿಯು ತನ್ನ ಹೆಂಡತಿಗೆ ಈ ವಯಸ್ಸಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತಿದ್ದಾರೆ. "ನೀವು ನಿಮಗೆ ಬೇಕಾದಷ್ಟು ಅಧ್ಯಯನ ಮಾಡಬಹುದು. ನನ್ನಿಂದ ನಿಮಗೆ ಯಾವುದೇ ತೊಂದರೆಯೂ ಆಗುವುದಿಲ್ಲ" ಎಂದು ದಯಾಮಯ್ ತನ್ನ ಹೆಂಡತಿಗೆ ಭರವಸೆ ನೀಡಿದರು.
ಇದನ್ನೂ ಓದಿ: 'ಕಾಲ್ಪನಿಕ ದೇಶ'ದ ಮಾತುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ: ನಿತ್ಯಾನಂದನ ಪ್ರತಿನಿಧಿ ಹೇಳಿಕೆಗೆ ವಿಶ್ವಸಂಸ್ಥೆ ಸ್ಪಷ್ಟನೆ