ಶಿಮ್ಲಾ (ಹಿಮಾಚಲ ಪ್ರದೇಶ): ಜೇನುನೊಣಗಳ ದಾಳಿಯಿಂದಾಗಿ ತಾಯಿ ಮತ್ತು ಮಗಳು ಮೃತಪಟ್ಟಿರುವ ದುರ್ಘಟನೆ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಜಿಲ್ಲೆಯಲ್ಲಿ ನಡೆದಿದೆ. ಪ್ರಿಮಾ ದೇವಿ (60) ಹಾಗೂ ಬಬ್ಲಿ (25) ಎಂಬುವವರೇ ಮೃತರು.
ಈ ಇಬ್ಬರ ಕೂಡ ಇಲ್ಲಿನ ರಾಂಪುರ ಬುಶಹರ್‌ನ ನಂಖಾರಿಯ ಕರಾಂಗ್ಲಾ ಗ್ರಾಮದ ನಿವಾಸಿಗಳಾಗಿದ್ದು, ಮೊದಲು ಮಗಳ ಮೇಲೆ ಜೇನುನೊಣಗಳ ದಾಳಿ ನಡೆಸಿದ್ದವು. ಇದನ್ನು ಕಂಡ ತಾಯಿ ಮಗಳ ರಕ್ಷಣೆಗೆ ಹೋದಾಗ ಆಕೆ ಮೇಲೂ ದಾಳಿ ಮಾಡಿವೆ.
ಈ ಮಾಹಿತಿ ತಿಳಿದ ಕೂಡಲೇ ಗ್ರಾಮಸ್ಥರು ಇಬ್ಬರನ್ನೂ ಖಾನೇರಿ ಆಸ್ಪತ್ರೆಗೆ ಕರೆದೊಯ್ದಿದ್ದು, ದಾಖಲಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮತ್ತು ಮಗಳು ಇಬ್ಬರೂ ಮೃತಪಟ್ಟಿದ್ದಾರೆ.
ಘಟನೆಯ ವಿಷಯ ತಿಳಿದು ತಹಸೀಲ್ದಾರ್ ನಂಖಾರಿ ಗುರ್ಮೀತ್ ನೇಗಿ ಸೇರಿ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲಾಡಳಿತದಿಂದ ಕುಟುಂಬಕ್ಕೆ ತಲಾ 10 ಸಾವಿರ ರೂ.ಗಳ ತಕ್ಷಣದ ಪರಿಹಾರವನ್ನು ಘೋಷಿಸಲಾಗಿದೆ.
ಇದನ್ನೂ ಓದಿ: ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ.. ಕಾರಣ?