ETV Bharat / bharat

ತನ್ನ ಮಗುವನ್ನೇ ಕ್ರೂರವಾಗಿ ಥಳಿಸಿದ ಅತ್ಯಾಚಾರ ಸಂತ್ರಸ್ತೆ - ತನ್ನ ಮಗುವನ್ನೇ ಕ್ರೂರವಾಗಿ ಥಳಿಸಿದ ಅತ್ಯಾಚಾರ ಸಂತ್ರಸ್ತೆ

ಬಾದ್‌ನಗರದ ತಹಶಿಲ್‌ ವ್ಯಾಪ್ತಿಯಲ್ಲಿರುವ ಜುನಾ ಪಟ್ಟಣದಲ್ಲಿ ನಿರ್ದಯಿ ಮಹಿಳೆ ಕ್ರೂರತನ ಪ್ರದರ್ಶಿಸಿದ್ದಾಳೆ. ತನ್ನ ಪುಟ್ಟ ಮಗುವನ್ನು ಈಕೆ ಪ್ರತಿದಿನ ಅಮಾನುಷವಾಗಿ ಥಳಿಸುತ್ತಿದ್ದಳಂತೆ.

ತನ್ನ ಮಗುವನ್ನೇ ಕ್ರೂರವಾಗಿ ಥಳಿಸಿದ ಅತ್ಯಾಚಾರ ಸಂತ್ರಸ್ತೆ

author img

By

Published : Feb 27, 2022, 10:55 PM IST

ಉಜ್ಜಯಿನಿ(ಮಧ್ಯಪ್ರದೇಶ) : ನಗರದಿಂದ 50 ಕಿ.ಮೀ ದೂರದಲ್ಲಿರುವ ಬಾದ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರ ಸಂತ್ರಸ್ತೆಯೋರ್ವಳು ತನ್ನ ಒಂದೂವರೆ ವರ್ಷದ ಮುಗ್ಧ ಮಗುವನ್ನು ಕ್ರೂರವಾಗಿ ಥಳಿಸಿ ಮನೆಯ ಹೊರಗೆ ಎಸೆದಿದ್ದಾಳೆ. ಘಟನೆಯ ವಿಡಿಯೋ ಬೆಳಕಿಗೆ ಬಂದ ಹಿನ್ನೆಲೆ ಬಾದ್‌ನಗರ ಠಾಣೆ ಪೊಲೀಸರು ತಾಯಿಯ ವಿರುದ್ಧ ಕ್ರಮ ಕೈಗೊಂಡಿದ್ದು, ಚೈಲ್ಡ್ ಲೈನ್ ಮಗುವಿನ ಆರೈಕೆ ಮಾಡುತ್ತಿದೆ.

ಹೆಚ್ಚಿನ ವಿವರ: ಉಜ್ಜಯಿನಿಯ ಬಾದ್‌ನಗರದ ತಹಶಿಲ್‌ ವ್ಯಾಪ್ತಿಯಲ್ಲಿರುವ ಜುನಾ ಪಟ್ಟಣದಲ್ಲಿ ನಿರ್ದಯಿ ಮಹಿಳೆ ಕ್ರೂರತನ ಪ್ರದರ್ಶಿಸಿದ್ದಾಳೆ. ತನ್ನ ಪುಟ್ಟ ಮಗುವನ್ನು ಈಕೆ ಪ್ರತಿದಿನ ಅಮಾನುಷವಾಗಿ ಥಳಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ರಷ್ಯಾದ ಪರಮಾಣು ಬೆದರಿಕೆಗೆ ಬೆಚ್ಚಿತಾ ಉಕ್ರೇನ್​ : ಕೊನೆಗೂ ಶಾಂತಿ ಮಾತುಕತೆಗೆ ಒಪ್ಪಿದ ಝೆಲೆನ್ಸ್ಕಿ

ಈ ಮಹಿಳೆ ಈ ಹಿಂದೆ ಅತ್ಯಾಚಾರಕ್ಕೆ ತುತ್ತಾಗಿದ್ದಳು ಎಂದು ಉಜ್ಜಯಿನಿ ಮಹಿಳಾ ಠಾಣೆಯ ಇನ್‌ಚಾರ್ಜ್ ರೇಖಾ ವರ್ಮಾ ಹೇಳಿದ್ದಾರೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಚರಕ್ ಆಸ್ಪತ್ರೆಯಲ್ಲಿ ಮಹಿಳೆ ಅತ್ಯಾಚಾರಕ್ಕೊಳಗಾಗಿದ್ದಳು ಎಂದು ತಿಳಿದುಬಂದಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.