ಹಮೀರಪುರ್(ಉತ್ತರ ಪ್ರದೇಶ): ಕುಟುಂಬದ ವಿರೋಧ ಲೆಕ್ಕಿಸದೆ ಮದುವೆ ಮಾಡಿಕೊಂಡಿದ್ದಕ್ಕಾಗಿ ವರನಿಗೆ ಆತನ ತಾಯಿ ಚಪ್ಪಲಿ ಏಟು ನೀಡಿರುವ ಘಟನೆ ನಡೆಯಿತು. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಮೀರಪುರದ ಶಿವಾನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಯುವಕ ಅದೇ ಪ್ರದೇಶದಲ್ಲಿ ವಾಸವಾಗಿದ್ದ ಯುವತಿ ಜತೆ ಪ್ರೇಮ ವಿವಾಹ ಮಾಡಿಕೊಳ್ಳುತ್ತಿದ್ದ. ಆದರೆ ಇದು ವರನ ಮನೆಯವರಿಗೆ ಇಷ್ಟವಿರಲಿಲ್ಲ. ಯುವತಿ ಮನೆಯವರು ಅದ್ಧೂರಿಯಾಗಿ ಮದುವೆ ಏರ್ಪಡಿಸಿದ್ದ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಯುವಕನ ತಾಯಿ ಮಗನಿಗೆ ಚಪ್ಪಲಿಯಿಂದ ಹೊಡೆದರು.
ಇದನ್ನೂ ಓದಿರಿ: ಮತ್ತೇರಿದ ಮದನಾರಿ: ಕೈದಿ ಜೊತೆ ಕಾಮಕ್ರೀಡೆ.. ಜೈಲು ಸೇರಿದ ಮಹಿಳಾ ಜೈಲಾಧಿಕಾರಿ
ಮದುವೆಗೆ ಯುವಕನ ಮನೆಯವರ ವಿರೋಧವಿದ್ದ ಕಾರಣ ಮೊದಲಿಗೆ ಕೋರ್ಟ್ನಲ್ಲಿ ಈ ಜೋಡಿ ರಿಜಿಸ್ಟ್ರಾರ್ ಮದುವೆ ಮಾಡಿಕೊಂಡಿದ್ದರು. ಇದಾದ ಬಳಿಕ ಯುವತಿಯ ಕುಟುಂಬಸ್ಥರು ಇಬ್ಬರ ಪ್ರೀತಿಗೆ ಒಪ್ಪಿಗೆ ಸೂಚಿಸಿ, ಮದುವೆ ಮಾಡಲು ನಿರ್ಧರಿಸಿದ್ದರು. ಅದರಂತೆ ಜುಲೈ 3ರಂದು ಮದುವೆ ನಡೆಯುತ್ತಿತ್ತು. ಈ ಸಮಾರಂಭದಲ್ಲಿ ಭಾಗಿಯಾಗಲು ಯುವಕನ ಪೋಷಕರಿಗೆ ಆಹ್ವಾನ ನೀಡಿರಲಿಲ್ಲ.