ETV Bharat / bharat

ಕೋವಿಡ್​ ನಿಯಂತ್ರಣಕ್ಕೆ 6 ರಿಂದ 8 ವಾರಗಳ ಲಾಕ್​ಡೌನ್​ ಅನಿವಾರ್ಯ: ಐಸಿಎಂಆರ್ ಮುಖ್ಯಸ್ಥ - ಭಾರತದಲ್ಲಿ ಲಾಕ್​ಡೌನ್​

ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದೆ. ಇದರ ನಿಯಂತ್ರಣಕ್ಕೆ ಮುಂದಿನ 6ರಿಂದ 8 ವಾರಗಳ ಕಾಲ ಲಾಕ್​ಡೌನ್​ ಅನಿವಾರ್ಯ ಎಂದು ಐಸಿಎಂಆರ್​ ಮುಖ್ಯಸ್ಥ ಅಭಿಪ್ರಾಯಪಟ್ಟಿದ್ದಾರೆ.

ICMR head
ICMR head
author img

By

Published : May 12, 2021, 3:35 PM IST

ನವದೆಹಲಿ: ದೇಶದಲ್ಲಿ ಕಳೆದ ಕೆಲ ದಿನಗಳಿಂದ 2ನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಇದರಿಂದ ಹೊರಬರಲು ಅತಿ ಹೆಚ್ಚು ಸೋಂಕಿತ ಪ್ರಕರಣಗಳಿರುವ ಪ್ರದೇಶಗಳಲ್ಲಿ 6ರಿಂದ 8 ವಾರಗಳ ಲಾಕ್​ಡೌನ್ ಘೋಷಣೆ ಅನಿವಾರ್ಯ ಎಂದು ಐಸಿಎಂಆರ್​ ಮುಖ್ಯಸ್ಥ ಡಾ. ಬಲರಾಮ ಭಾರ್ಗವ್ ಅಭಿಪ್ರಾಯಪಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮುಖ್ಯಸ್ಥ ಡಾ. ಬಲರಾಮ, ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚಿರುವ ಪ್ರದೇಶ ಅಥವಾ ಜಿಲ್ಲೆಗಳನ್ನ ಸಂಪೂರ್ಣವಾಗಿ ಲಾಕ್​ಡೌನ್ ಮಾಡಬೇಕು ಎಂದಿದ್ದಾರೆ.

ಕೋವಿಡ್ ಪರೀಕ್ಷೆಗೊಳಗಾದವರ ಪೈಕಿ ಶೇ.10ಕ್ಕಿಂತಲೂ ಹೆಚ್ಚಿನ ಮಂದಿಯಲ್ಲಿ ಸೋಂಕು ದೃಢಪಡುತ್ತಿರುವ ಜಿಲ್ಲೆಯನ್ನ ಸಂಪೂರ್ಣವಾಗಿ ಲಾಕ್​ಡೌನ್​ ಹಾಗೂ ಪಾಸಿಟಿವಿಟಿ ದರ ಶೇ. 5ರಿಂದ 10ರೊಳಗೆ ಇರುವ ಜಿಲ್ಲೆಗಳಲ್ಲಿ ಚಟುವಟಿಕೆ ನಡೆಸಲು ಅವಕಾಶ ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಟಿಕಾ ಉತ್ಸವ ಆಚರಣೆ ಮಾಡಿರುವ ಕೇಂದ್ರದಿಂದ ಲಸಿಕೆ ನೀಡುವಲ್ಲಿ ವಿಫಲ: ಪ್ರಿಯಾಂಕಾ ವಾಗ್ದಾಳಿ

ಪ್ರಸ್ತುತ ಭಾರತದ 718 ಜಿಲ್ಲೆಗಳಲ್ಲಿ ಕೋವಿಡ್​ ಟೆಸ್ಟ್​ ಪಾಸಿಟಿವಿಟಿ ದರ ಶೇ 10ಕ್ಕಿಂತಲೂ ಹೆಚ್ಚಿದೆ. ಇದರಲ್ಲಿ ಪ್ರಮುಖವಾಗಿ ನವದೆಹಲಿ, ಮುಂಬೈ ಮತ್ತು ಬೆಂಗಳೂರು ಮೊದಲ ಸ್ಥಾನದಲ್ಲಿವೆ ಎಂದರು. ದೇಶದ ಆರ್ಥಿಕತೆಗೆ ಹೊಡೆತ ಬೀಳಲಿದೆ ಎಂಬ ಕಾರಣಕ್ಕಾಗಿ ಪ್ರಧಾನಿ ಮೋದಿ ಲಾಕ್​ಡೌನ್​ ನಿರ್ಧಾರ ಆಯಾ ರಾಜ್ಯಗಳಿಗೆ ಬಿಟ್ಟಿದ್ದಾರೆ ಎಂಬ ಅಂಶವನ್ನು ಅವರು ತಿಳಿಸಿದರು.

ಭಾರತದಲ್ಲಿ ಕೋವಿಡ್ ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ನಿತ್ಯ ಸುಮಾರು 350,000ಕ್ಕೂ ಹೆಚ್ಚು ಪ್ರಕರಣ ಹಾಗೂ 4 ಸಾವಿರಕ್ಕೂ ಅಧಿಕ ಸಾವು ವರದಿಯಾಗುತ್ತಿವೆ. ಆಸ್ಪತ್ರೆಗಳಲ್ಲಿ ಜಾಗವಿಲ್ಲ. ವೈದ್ಯಕೀಯ ಸಿಬ್ಬಂದಿ ಸಂಪೂರ್ಣವಾಗಿ ದಣಿದಿದ್ದಾರೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.