ETV Bharat / bharat

ರೈತನ ಮನೆಯಿಂದ 1.24 ಕೋಟಿ ರೂ. ಕಳ್ಳತನ ಮಾಡಿದ ದುಷ್ಕರ್ಮಿಗಳು - ಮಧ್ಯಪ್ರದೇಶ ಕ್ರೈಂ ನ್ಯೂಸ್​

ಜಮೀನು ಮಾರಿ ರೈತನೋರ್ವ ಮನೆಯಲ್ಲಿಟ್ಟಿದ್ದ ಬರೋಬ್ಬರಿ 1.24 ಕೋಟಿ ರೂ. ಕಳ್ಳತನ ಮಾಡಿರುವ ಕಳ್ಳರು ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Rs 1.24 crore stolen from farmer's house

author img

By

Published : Apr 8, 2021, 3:42 PM IST

ಕರೇರಾ(ಮಧ್ಯಪ್ರದೇಶ): ಇಲ್ಲಿನ ಕರೇರಾ ಗ್ರಾಮದ ರೈತರೊಬ್ಬರ ಮನೆಯಿಂದ ಒಂದೆರಡು ಲಕ್ಷ ಅಲ್ಲ ಬರೋಬ್ಬರಿ 1.24 ಕೋಟಿ ರೂ, ಕಳವು ಮಾಡಲಾಗಿದೆ. ಜಗರ್​ ಸಿಂಗ್​ ಎಂಬ ರೈತರ ಮನೆಗೆ ನುಗ್ಗಿದ ಕಳ್ಳರು ಬರೋಬ್ಬರಿ 1.24 ಕೋಟಿ ರೂ. ನಗದು ಎಗರಿಸಿ ಪರಾರಿಯಾಗಿದ್ದಾರೆ.

ಸಿಂಗ್ ನಾಲ್ಕು ಎಕರೆ ಜಮೀನು ಮಾರಿ ಬಂದ ಹಣವನ್ನ ಬಾಕ್ಸ್​​ವೊಂದರಲ್ಲಿ ಇಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಳ್ಳರು ಅವರು ಮಲಗಿದ್ದ ವೇಳೆ ಮನೆಗೆ ನುಗ್ಗಿ ಹಣ ಇಟ್ಟಿದ್ದ ರೂಮ್​​​ ಬಾಗಿಲು ಒಡೆದು ಬಾಕ್ಸ್​​ನಲ್ಲಿದ್ದ ಹಣವನ್ನ ಕದ್ದು ಪರಾರಿಯಾಗಿದ್ದಾರೆ.

ರೈತನ ಮನೆಗೆ ಕನ್ನ ಹಾಕಿದ ದುಷ್ಕರ್ಮಿಗಳು

ಇದನ್ನೂ ಓದಿ: ಬೇರೆ ದೇಶಗಳಿಗೆ ವ್ಯಾಕ್ಸಿನ್​ ನೀಡುವ ಬದಲು ನಮಗೆ ನೀಡಿ: ಕೇಂದ್ರಕ್ಕೆ ಮಹಾರಾಷ್ಟ್ರ ಆರೋಗ್ಯ ಸಚಿವರ ಕಿವಿಮಾತು!

ಮನೆಗಳ್ಳತನ ನಡೆದಿರುವುದನ್ನು ಸಿಂಗ್​ ಪತ್ನಿ ಪತ್ತೆ ಹಚ್ಚಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇಷ್ಟೊಂದು ಪ್ರಮಾಣದ ಹಣವನ್ನು ರೈತ ತನ್ನ ಮನೆಯಲ್ಲಿ ಏಕೆ ಇಟ್ಟಿದ್ದ? ಅದು ಕಳವಾಗಿದ್ದು ಹೇಗೆ ಎಂಬ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅವರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಶಿವಪುರಿ ಪೊಲೀಸ್​​​ ಅಧಿಕಾರಿ ರಾಜೇಶ್​ ಸಿಂಗ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.