ETV Bharat / bharat

ದೇಶದಲ್ಲಿ ಶೇ.50ರಷ್ಟು 15-18 ವಯಸ್ಸಿನ ಮಕ್ಕಳಿಗೆ ಕೋವಿಡ್‌ ಮೊದಲ ಡೋಸ್​​ ಪೂರ್ಣ

author img

By

Published : Jan 18, 2022, 10:12 PM IST

ಕೇವಲ 15 ದಿನಗಳಲ್ಲಿ ಭಾರತದ ಶೇ. 50ರಷ್ಟು 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

young age group got covid vaccine
young age group got covid vaccine

ನವದೆಹಲಿ: ದೇಶದಲ್ಲಿ ಶೇ.50ರಷ್ಟು 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್​ನ ಮೊದಲ ಡೋಸ್​ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.

ಜನವರಿ 3ರಿಂದ ದೇಶದಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್​ ಲಸಿಕೆ ಕೋವ್ಯಾಕ್ಸಿನ್ ನೀಡಲು ಶುರು ಮಾಡಿದ್ದು, ಕೇವಲ 15 ದಿನದಲ್ಲಿ ದೇಶದ ಅರ್ಧದಷ್ಟು ಮಕ್ಕಳಿಗೆ ವ್ಯಾಕ್ಸಿನ್​ ನೀಡಲಾಗಿದೆ.

  • Big day for India's fight against COVID-19!

    Over 50% of our youngesters between 15-18 age group have received their 1st dose of #COVID19 vaccine.

    Well done, my Young Friends!

    Your enthusiasm for vaccination is inspiring people all over India 🇮🇳#SabkoVaccineMuftVaccine pic.twitter.com/BVFsIzJPYm

    — Dr Mansukh Mandaviya (@mansukhmandviya) January 18, 2022 " class="align-text-top noRightClick twitterSection" data=" ">

ಆರೋಗ್ಯ ಸಚಿವರ ಟ್ವೀಟ್‌:

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ ಟ್ವೀಟ್ ಮಾಡಿದ್ದು, 15ರಿಂದ 18 ವರ್ಷದೊಳಗಿನ ಶೇ. 50ರಷ್ಟು ಮಕ್ಕಳಿಗೆ ಮೊದಲ ಡೋಸ್​ ವ್ಯಾಕ್ಸಿನ್​ ನೀಡಲಾಗಿದೆ. ಕೋವಿಡ್​ ವಿರುದ್ಧದ ಹೋರಾಟದಲ್ಲಿ ಇದು ಅತಿದೊಡ್ಡ ಸಾಧನೆಯಾಗಿದ್ದು, ವ್ಯಾಕ್ಸಿನ್ ಪಡೆದುಕೊಂಡಿರುವ ಎಲ್ಲ ಮಕ್ಕಳಿಗೂ ಅಭಿನಂದನೆಗಳು. ತರುಣರು ಲಸಿಕೆ ಪಡೆದುಕೊಳ್ಳಲು ತೋರಿರುವ ಉತ್ಸಾಹ ಎಲ್ಲರಿಗೂ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಈಗಾಗಲೇ 160 ಕೋಟಿಗೂ ಅಧಿಕ ಕೋವಿಡ್ ಡೋಸ್ ನೀಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಮುಂದಿನ ಕೆಲ ತಿಂಗಳಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೋವಿಡ್ ವ್ಯಾಕ್ಸಿನ್ ನೀಡಲು ತಯಾರಿ ನಡೆಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.