ಕೇಂದ್ರಪದ(ಒಡಿಶಾ): ಮದುವೆ ಸಮಾರಂಭವೊಂದರಲ್ಲಿ ಆಹಾರ ಸೇವಿಸಿ ಸುಮಾರು 70ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ಒಡಿಶಾದ ಕೇಂದ್ರಪದ ಜಿಲ್ಲೆಯಲ್ಲಿ ನಡೆದಿದೆ.
ಮೂಲಗಳ ಪ್ರಕಾರ, ಕೇಂದ್ರಪದ ಪಟ್ಟಮುಂಡೈನ ಮಾಟಿಯಾ ಗ್ರಾಮದ ಕುನಾಲ್ ಮಲ್ಲಿಕ್ ಎನ್ನುವವರ ಮದುವೆ ಸಮಾರಂಭದಲ್ಲಿ ಈ ಘಟನೆ ಜರುಗಿದೆ. ವರ ಕುನಾಲ್ ಸಂಬಂಧಿಕರು ವಧುವಿನ ಮನೆಗೆ ಹೋದ ಸಮಯದಲ್ಲಿ ಆಹಾರ ಸೇವಿಸಿದ್ದಾರೆ. ಈ ವೇಳೆ ಸುಮಾರು 70ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.
ಓದಿ: ರಾಜಸ್ಥಾನದ ಮೂವರು ಪತಿಯರಿಂದ ಪಾಕಿಸ್ತಾನದ ಪತ್ನಿಯರಿಗಾಗಿ ಕಾಯುವಿಕೆ !
ಇದರಲ್ಲಿ ಹೆಚ್ಚಿನವರು ಅತಿಸಾರದಿಂದ ಬಳಲಿದ್ದು, ಚಿಕಿತ್ಸೆಗಾಗಿ ಉಪ ವಿಭಾಗೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಅದರಲ್ಲಿ ಮೂವರನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.
ವಿಷಪೂರಿತ ಆಹಾರ ಸೇವೆನೆಯಿಂದ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಮಾಹಿತಿ ನೀಡಿದ್ದಾರೆ.